ಇನ್ನೇನು ಒಂಭತ್ತು ಅನ್ನಬೇಕು... ಅಷ್ಟರಲ್ಲಿ!

ಹನ್ನೊಂದು ಮಕ್ಕಳನ್ನು ಹೆತ್ತ ಹೆಂಡತಿಗಿಂತ, ಆ ಮಕ್ಕಳನ್ನು ಸಾಕಲು ಹೆಣಗಾಡುತ್ತಿದ್ದ ಗಂಡನೊಬ್ಬ ಕಡೆಗೂ ಒಂದು ನಿರ್ಧಾರಕ್ಕೆ ಬಂದ. ಅದೇನೆಂದರೆ, ಪ್ರೊಡಕ್ಷನ್ ಹಂತದಲ್ಲಿದ್ದ ಹನ್ನೆರಡನೇ ಮಗು ಹುಟ್ಟಿದ ಕೂಡಲೆ ಇನ್ನು ನಿಲ್ಲಿಸಿಬಿಡಬೇಕು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಕ್ಕಳಾಗದಂತೆ ನೋಡಿಕೊಳ್ಳಬೇಕು ಎಂಬ ದೃಢನಿಲುವಿಗೆ ಬಂದಿದ್ದ.

ತನ್ನ ಫ್ಯಾಮಿಲಿ ವೈದ್ಯರಾದ ಬೇತಾಳ ಬಳಿ ಒಂದು ದಿನ ಹೋಗಿ, ತನ್ನ ನೀಳಗಡ್ಡವನ್ನು ನೀವಿಕೊಳ್ಳುತ್ತ ಮನದಾಳದ ಇಂಗಿತವನ್ನು ಅರುಹಿಕೊಂಡ. ಆತನ ಹೆಂಡತಿಯ ಹೆರಿಗೆ ಮಾಡಿ ಮಾಡಿಯೇ ಸುಸ್ತಾಗಿದ್ದ ವೈದ್ಯರಿಗೂ ಇದನ್ನು ಕೇಳಿ ನಿಟ್ಟುಸಿರುಬಿಟ್ಟರು. ಇನ್ನು ಆಪರೇಷನ್ ಮಾಡಿಸಿಕೊಂಡು ಬಿಡು ಸಾಕು ಎಂದು ಹೇಳಿ, ಅದಕ್ಕೆ ತಗಲುವ ವೆಚ್ಚವನ್ನೂ ಹೇಳಿದರು.

ವೈದ್ಯರ ಫೀಸು, ಆಪರೇಷನ್ ವೆಚ್ಚವನ್ನು ಕೇಳಿ ಗಂಡ ದಂಗಾಗಿಬಿಟ್ಟ. ಇದಕ್ಕಿಂತ ಮಕ್ಕಳನ್ನು ಹುಟ್ಟಿಸುವುದೇ ಲೇಸೆಂದು ಮನದಲ್ಲಿ ಅಂದುಕೊಂಡರೂ ತನ್ನ ದೃಢನಿಲುವಿನಿಂದ ಪುಣ್ಯಕ್ಕೆ ಹಿಂದೆ ಸರಿಯಲಿಲ್ಲ. ಇದಕ್ಕೆ ಬದಲಾಗಿ ಫ್ಯಾಮಿಲಿ ಪ್ಲಾನಿಂಗ್ ಮಾಡಿಸಿಕೊಳ್ಳಲು ಬೇರೇನಾದರೂ ಖರ್ಚಿಲ್ಲದ ಮೆಥಡ್ ಇದ್ದರೆ ಹೇಳಿ ಎಂದು ಅಂಗಲಾಚಿಕೊಂಡ ಗಂಡ.

ಸಾಕಷ್ಟು ವಿಚಾರ ಮಾಡಿ, ಚಿಕ್ಕಾಸನ್ನು ಬಿಚ್ಚಲು ಚೌಕಾಸಿ ಮಾಡುವ ಗಂಡನ ಬುದ್ಧಿಯನ್ನು ತಿಳಿದಿದ್ದ ವೈದ್ಯರು ಒಂದು ಪ್ಲಾನನ್ನು ಹೇಳಿದರು. ಅದೇನೆಂದರೆ, ಒಂದು ಗಾಜಿನ ಬಾಟಲಿಗೆ ಬಾಯಿಗೆ ಒಂದು ದೊಡ್ಡದಾದ ಲಕ್ಷ್ಮೀ ಅಟಂ ಬಾಂಬನ್ನು ಸಿಕ್ಕಿಸಿ, ಅದರ ಮದ್ದಿಗೆ ಕಿಡಿ ಹತ್ತಿಸಿ, ಅದನ್ನು ಒಂದು ಕೈಯಲ್ಲಿ ಕಿವಿಯ ಬಳಿ ಹಿಡಿದು, ಮತ್ತೊಂದು ಕೈಯಿಂದ ಬೆರಳಿನಲ್ಲಿ ಒಂದರಿಂದ ಆರರವರೆಗೆ ಎಣಿಸಬೇಕು. ನಂತರ ಆರರಿಂದ ಹತ್ತರವರೆಗೆ ಮತ್ತೊಂದು ಕೈ ಬೆರಳಿನಿಂದ ಎಣಿಸಬೇಕು.

ವರ್ಕೌಟಾಗತ್ತಾ ಅಂತ ಗಂಡ ಕೇಳಿದ್ಗಾಗ, ಟ್ರೈ ಮಾಡಿಯಾದರೂ ನೋಡು, ವರ್ಕೌಟಾಗದಿದ್ದರೆ ನಾನು ವೈದ್ಯಕೀಯ ವೃತ್ತಿಗೇ ತಿಲಾಂಜಲಿ ಇಡುತ್ತೇನೆ ಎಂದು ಗಂಡನ ಹೆಂಡತಿಯ ಮೇಲೆ ಆಣೆ ಪ್ರಮಾಣ ಮಾಡಿ ವೈದ್ಯ ಹೇಳಿದ. ಗಂಡ ನಂಬಿದ. ಹೆಂಡತಿ ಪಕ್ಕದಲ್ಲಿ ಇರಲಿಲ್ಲ...

ಮನೆಗೆ ಮರಳಿದವನೇ ಒಂದು ತೆಳ್ಳಗಿನ ಗಾಜಿನ ಬಾಟಲಿಯನ್ನು ಆಯ್ದುಕೊಂಡು ವೈದ್ಯ ಹೇಳಿದಂತೆ ಲಕ್ಷ್ಮೀ ಅಟಂ ಬಾಂಬನ್ನು ಅದರ ಮೂತಿಗೆ ಸಿಕ್ಕಿಸಿ, ಕಿಡಿ ಹತ್ತಿಸಿದ. ಒಂದು ಕೈಯಲ್ಲಿ ಒಂದರಿಂದ ಐದು ಎಣಿಕೆಯಾಯಿತು. ಮತ್ತೊಂದು ಕೈಯಿಂದ ಎಣಿಸಲೆಂದು ಬಾಟಲಿಯನ್ನು ಎರಡೂ ತೊಡೆಗಳ ನಡುವೆ ಸಿಕ್ಕಿಸಿಕೊಂಡು, ಆರು ಏಳು ಎಂಟು ಎಣಿಸಲು ಪ್ರಾರಂಭಿಸಿದ. ಇನ್ನೇನು ಒಂಭತ್ತು ಅನ್ನಬೇಕು... ಅಷ್ಟರಲ್ಲಿ... [ವಯಸ್ಕರ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+