ವೃದ್ಧರ ಸಮಸ್ಯೆ ಕೇಳಿ ಗಿರ್ರನೆ ತಿರುಗಿದ ಸುಬ್ಬು ತಲೆ

ಇನ್ನೆರಡು ತಿಂಗಳಲ್ಲಿ 87ರ ಗಡಿ ದಾಟುವ ಹುಮ್ಮಸ್ಸಿನಲ್ಲಿದ್ದ ವಯಸ್ಕರೊಬ್ಬರು ಒಂದು ದಿನ ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಲೈಂಗಿಕ ತಜ್ಞ ಡಾ. ಸುಬ್ಬು ಅವರ ಕ್ಲಿನಿಕ್ಕಿಗೆ ಬರುತ್ತಾರೆ. ಬರೀ ಹದಿಹರೆಯದವರಿಗೆ ಲೈಂಗಿಕ ಚಿಕಿತ್ಸೆ ನೀಡಿ ರೂಢಿಯಿದ್ದ ಡಾ. ಸುಬ್ಬುವಿಗೆ ವಯಸ್ಕರನ್ನು ನೋಡಿ ಸ್ವಲ್ಪ ಆಘಾತವಾದರೂ ತೋರ್ಪಡಲಿಲ್ಲ.

"ಡಾಕ್ಟ್ರೆ, ನನಗೆ ಮತ್ತು ನನ್ನ ಹೆಂಡತಿಗೆ ಮೊದಲಿನ ಲೈಂಗಿಕ ಸುಖ ಸಿಗುತ್ತಿಲ್ಲ. ದಯವಿಟ್ಟು ಸ್ವಲ್ಪ ತಪಾಸಣೆ ಮಾಡಿ ಹೇಳಿರಿ" ಎಂದು ಹಿರಿಯರು ಡಾ. ಸುಬ್ಬುವನ್ನು ಕೇಳಿದರು.

ಮೈಯೆಲ್ಲ ಸುಕ್ಕುಗಟ್ಟಿದ್ದ ಹಿರಿಯರ ಗಡಗಡ ನಡುಗುವ ಕೈಯನ್ನು ಒಂದು ಬಾರಿ ನೋಡಿದ ಸುಬ್ಬು, "ಆಲ್ ರೈಟ್, ನಿಮ್ಮ ವಯಸ್ಸೀಗ ಎಷ್ಟು ಎಂದು ಹೇಳ್ತೀರಾ?" ಎಂದು ಕೇಳಿದ.

"ಇನ್ನೆರಡು ತಿಂಗಳಲ್ಲಿ 87ರ ಗಡಿ ದಾಟಲಿದ್ದೇನೆ ಡಾಕ್ಟ್ರೆ" ಎಂದು ಹೆಮ್ಮೆಯಿಂದ ಹೇಳಿದರು ವೃದ್ಧರು.

"ಅಂದ್ರೆ ನಿಮಗೀಗ 86! ಹಮ್... ನಿಮ್ಮ ಹೆಂಡತಿಯ ವಯಸ್ಸೆಷ್ಟು?" ಹುಬ್ಬೇರಿಸಿ ಕೇಳಿದ ಸುಬ್ಬು.

"ಅವಳು ನನಗಿಂತ 5 ವರ್ಷ ದೊಡ್ಡವಳು. ನಮ್ಮಿಬ್ಬರದು ಲವ್ ಮ್ಯಾರೇಜ್" ಎಂದು ಹೇಳಿದರು ವೃದ್ಧರು. ಆಗ ಅವರ ಕಣ್ಣಲ್ಲಿನ ಹೊಳಪು ನೋಡಬೇಕಿತ್ತು.

"ನಿಮಗೆ 86, ನಿಮ್ಮಾಕೆಗೆ ಪ್ಲಸ್ ಫೈವ್ ಅಂದ್ರೆ 91... ನಾಟ್ ಬ್ಯಾಡ್. ಹಮ್... ನಿಮ್ಮಿಬ್ಬರಿಗೂ ಲೈಂಗಿಕ ಸುಖ ಸರಿಯಾಗಿ ಸಿಗುತ್ತಿಲ್ಲ... ವೆಲ್ ವೆಲ್ ವೆಲ್... ಮತ್ತೆ?" ಎಂದು ಪ್ರಶ್ನಾರ್ಥಕ ಚಿಹ್ನೆಯಾದ ಸುಬ್ಬು.

"ಮತ್ತಿನ್ನೇನು? ಇಬ್ಬರಿಗೂ ಮೊದಲಿನ ಸುಖ ಸಿಗುತ್ತಿಲ್ಲ ಅಷ್ಟೆ" ವೃದ್ಧರು ಮತ್ತದೇ ಹೇಳಿದರು.

"ಓಕೆ ಓಕೆ... ನೀವು ಕಡೆಯ ಬಾರಿ ಸಂಧಿಸಿದ್ದು ಯಾವಾಗ? ಈ ಸಮಸ್ಯೆ ನಿಮಗೆ ಕಾಡಲು ಪ್ರಾರಂಭವಾಗಿದ್ದು ಯಾವಾಗ? ನೆನಪಿದೆಯಾ? ನೆನಪಿದ್ರೆ ಹೇಳಿ" ಸುಬ್ಬು ಕೇಳಿದ.

"ನೆನಪಿರದೆ ಏನು, ಚೆನ್ನಾಗಿ ನೆನಪಿದೆ. ನಾನು ಕಡೆಯ ಬಾರಿ ಸಂಧಿಸಿದ್ದು ನಮ್ಮ ಮೊದಲ ರಾತ್ರಿಯಂದು. ಈ ಸಮಸ್ಯೆ ಕಾಡಲು ಆರಂಭವಾಗಿದ್ದು ಕಳೆದ ರಾತ್ರಿ" ಎಂದು ವೃದ್ಧರು ಹೇಳುತ್ತಿದ್ದಂತೆ ಡಾ. ಸುಬ್ಬುವಿನ ತಲೆ ಗಿರ್ರನೆ ತಿರುಗಿತ್ತು. ಟೇಬಲ್ ಮೇಲಿಟ್ಟಿದ್ದ ತಣ್ಣಗಿನ ನೀರಿನ ಬಾಟಲಿಯನ್ನು ಒಂದೇ ಶಾಟಿಗೆ ಸುಬ್ಬು ಗಂಟಲಿಗಿಳಿಸಿದ್ದ. [ಗಂಡ ಹೆಂಡತಿ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+