ರಾತ್ರಿ ವೇಳೆ ಸುಖಿಸುವುದು ಹೇಗಂತ ಗೊತ್ತಾ?

ಹಕ್ಕಿಗಳೆಲ್ಲ ಚಿಪಿಲಿಪಿಗುಡುತ್ತ ತಮ್ಮ ಗೂಡುಗಳನ್ನು ಸೇರುತ್ತಿದ್ದ ಸಮಯ, ದನಕರುಗಳೆಲ್ಲ ಅಲೆದಾಡಿ ಕೊಟ್ಟಿಗೆಗೆ ಮರಳುತ್ತಿದ್ದ ವೇಳೆ, ಭೂಮಿಯ ಮೇಲೆಲ್ಲ ಬೆಳಕು ಚೆಲ್ಲಿ ಸೂರ್ಯ ವಿಶ್ರಾಂತಿಗೆ ಜಾರುತ್ತಿದ್ದ ಘಳಿಗೆ, ದೂರದ ಬೆಟ್ಟದ ಮೇಲಿನ ಮನೆಯ ಬಾಗಿಲ ಬಳಿಯಿದ್ದ ಬೆಲ್ ಟ್ರಿಂಗ್ ಟಾಂಗ್ ಡಿಂಗ್ ಡಾಂಗ್ ಅಂದಿತ್ತು.

ಯೌವನದಲ್ಲಿ ಅಸಾಧ್ಯ ಸುಂದರಿಯಾಗಿದ್ದಿರಬಹುದು ಎಂದು ಊಹಿಸಬಹುದಾಗಿದ್ದ, ಯೌವನವನ್ನು ಕಾಲು ಭಾಗದಷ್ಟು ಕಳೆದುಕೊಂಡಿದ್ದ ಮಿಡ್ಲ್ ಏಜ್ಡ್ ಮಹಿಳೆಯೊಬ್ಬಳು ಬಾಗಿಲು ತೆರೆದಳು. ಯೌವನವನ್ನು ಶೇ.25ರಷ್ಟು ಕಳೆದುಕೊಂಡಿದ್ದ ಬೆಲ್ ಬಾರಿಸಿದವ ಮಹಿಳೆಗೆ ಅಪರಿಚಿತನೇನಲ್ಲ. ಆದರೂ ಯಾವತ್ತೂ ಹೀಗೆ ಮುಖಾಮುಖಿಯಾಗಿರಲಿಲ್ಲ. ಏನೆಂದು ಅರ್ಧ ಬಾಗಿಲು ತೆರೆದು ವಿಚಾರಿಸಿದಳು.

"ನಿಮಗೆ ಕಾಮಕೇಳಿ ನಡೆಸುವುದು ಹೇಗೆ ಅಂತ ಗೊತ್ತಾ?" ಆ ಪುರುಷ ಎಸೆದ ಈ ಅನಿರೀಕ್ಷಿತ ಪ್ರಶ್ನೆಯಿಂದ ಕಕ್ಕಾಬಿಕ್ಕಿಯಾದ ಮಹಿಳೆ ಧಡಾರನೆ ಆತನ ಮುಖದ ಮೇಲೆ ಬಾಗಿಲು ಬಡಿದಿದ್ದಳು. ಆತ ವಾಪಸ್ ಆಗಿದ್ದ.

ಮತ್ತದೇ ಗೋಧೂಳಿ ಸಮಯ ಬಂದಿತು. ಮತ್ತೆ ಬೆಟ್ಟದ ಮೇಲಿನ ಮನೆಗೆ ಬಂದ ಆ ಪುರುಷ ಡಿಂಗ್ ಡಾಂಗ್ ಮಾಡಿ, "ನಿಮಗೆ ರಾತ್ರಿಯ ವೇಳೆ ಸುಖಿಸುವುದು ಹೇಗೆ ಅಂತ ಗೊತ್ತಾ?" ಅಂತ ಕೇಳಿದ ಪ್ರಶ್ನೆಗೆ, "ನಾನ್ ಸೆನ್ಸ್ ಹೊಗಯ್ಯಾ ಆಚೆ" ಎಂದು ಬಾಗಿಲು ಕುಕ್ಕಿದ್ದಳು ಒನ್ಸ್ ಅಪಾನ್ ಎ ಟೈಮ್ ಸುಂದರ ಮಹಿಳೆ, ಮುಖ ಕೆಂಪು ಮಾಡಿಕೊಂಡು.

ಹೀಗೆ ನಡೆಯುತ್ತಿದೆ ಎಂದು ಅನಿವಾರ್ಯವಾಗಿ ಆಕೆ ತನ್ನ ಗಂಡನೆದುರಿಗೆ ಹೇಳಲೇಬೇಕಾಯಿತು. "ಆತ ಮತ್ತೆ ಬಂದು ಮತ್ತದೇ ಪ್ರಶ್ನೆ ಕೇಳಿದರೆ, 'ಯಸ್' ಅಂತ ಹೇಳು ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ" ಎಂದು ಹೆಂಡತಿಗೆ ಹೇಳಿ ಬಾಗಿಲ ಸಂದಿಯಲ್ಲಿ ಗಂಡ ಬಂದೂಕು ಅಡಗಿಸಿಟ್ಟಿದ್ದ. ಬಂದೇಬಿಟ್ಟನಲ್ಲ ಆ ಪುರುಷ!

ಆ ಅಸಹ್ಯಕರ ಪ್ರಶ್ನೆಗೆ ಉತ್ತರಿಸಲು ಇಷ್ಟವಿಲ್ಲದಿದ್ದರೂ ಗಂಡ ಹೇಳಿದಂತೆ, "ಯಸ್" ಅಂದಿದ್ದಳು ಹೆಂಡತಿ, ಗಂಡನ ಕೈಗೆ ಮೆತ್ತಗೆ ಬಂದೂಕು ಬಂದಿತ್ತು. ಅಷ್ಟರಲ್ಲಿ...

"ಗೊತ್ತಿದ್ರೆ ನಿಮ್ಮ ಗಂಡನ ಮೇಲೆ ಕಾಮಾಸ್ತ್ರವನ್ನು ಪ್ರಯೋಗಿಸಿ, ಆತನನ್ನು ಸ್ವಲ್ಪ ಹದ್ದುಬಸ್ತಿನಲ್ಲಿಟ್ಟುಕೊಳ್ಳಿ. ನನ್ನ ಹೆಂಡತಿಯಿಂದ ಆತ ದೂರ ಉಳಿಯದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ" ಎಂದು ಎಚ್ಚರಿಸಿದವನೆ ಆ ಪುರುಷ ಜಾಗ ಖಾಲಿ ಮಾಡಿದ್ದ. ಹೆಂಡತಿ ಗಂಡನ ಕೈಯಲ್ಲಿದ್ದ ಗನ್ನನ್ನು ಕಿತ್ತುಕೊಂಡಿದ್ದಳು. ಗುರಿ ಮಾತ್ರ ತನ್ನ ಗಂಡನೆಡೆಗೇ ನೆಟ್ಟಿತ್ತು. [ವಯಸ್ಕರ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+