ಲವ್ ಮಾಡಿ ಖಿನ್ನಳಾದ ಮಿಸ್ ಲವೀನಾ!

ಮಿಸ್ ಲವೀನಾಗೆ ಹದಿನೆಂಟರ ತುಂಬು ಹರೆಯ. ಉಕ್ಕಿ ಹರಿಯುವ ಸೌಂದರ್ಯ ಬೇರೆ. ಒಂದು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆಕೆ ಸಹಜವಾಗಿ ಎಲ್ಲ ರೋಗಿಗಳನ್ನು ಮಾತ್ರವಲ್ಲ ತನ್ನ ಸೌಂದರ್ಯದಿಂದ ಸಹೋದ್ಯೋಗಿ ವೈದ್ಯರನ್ನೂ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದ್ದಳು. ವಯೋಸಹಜವಾಗಿ ಆಕೆಯೂ ಯುವ ವೈದ್ಯರೆಡೆಗೆ ಆಕರ್ಷಿತಳಾಗುತ್ತಿದ್ದಳು.

ಈ ಆಕರ್ಷಣೆಯೇ ಆಕೆಯನ್ನು ತೊಂದರೆಯಲ್ಲಿ ಸಿಲುಕಿಸಿತ್ತು. ಆ ತೊಂದರೆಯಿಂದ ಹೊರಬರಬೇಕೆಂದು ನಿರ್ಧರಿಸಿದ ಮಿಸಿ ಲವೀನಾ ಮನೋವೈದ್ಯರ ಸಲಹೆ ಪಡೆಯಬೇಕೆಂದು ನಿಶ್ಚಿಯಿಸಿ ಡಾ. ಯತೀಶ್ ಬಳಿಗೆ ಬಂದಳು. ಆಕೆಯನ್ನು ಆಕೆಯ ಸಹಜ ಸೌಂದರ್ಯವನ್ನು ಕಂಡು ಅರವತ್ತರ ಹರೆಯದ ಡಾ. ಯತೀಶ್ ಕೂಡ ಅವಾಕ್ಕಾದರು. ಆದರೂ ಸಾವರಿಸಿಕೊಂಡು ಏನು ತೊಂದರೆ ಎಂದು ಮಿಸ್ ಲವೀನಾಳನ್ನು ವಿಚಾರಿಸಿದರು.

"ಡಾಕ್ಟರ್, ನೀವು ನನ್ನನ್ನು ಈ ತೊಂದರೆಯಿಂದ ಪಾರು ಮಾಡಲೇಬೇಕು. ನಾನು ಯಾವುದೇ ಹ್ಯಾಂಡ್ಸಮ್ ಯುವ ವೈದ್ಯರೊಡನೆ ಡೇಟಿಂಗ್‌ಗೆ ಹೋದಾಗಲೆಲ್ಲ ಅವರೊಂದಿಗೆ ಲೈಂಗಿಕ ಸಂಪರ್ಕ ಹೊಂದುತ್ತಿದ್ದೇನೆ. ಆ ಕ್ಷಣದಲ್ಲಿ ಆ ಸುಖ ನನಗೆ ಆನಂದ ಕೊಟ್ಟರೂ ನಂತರ ನನ್ನಲ್ಲಿ ತಪ್ಪಿತಸ್ಥ ಭಾವನೆ ಕಾಡಲು ಪ್ರಾರಂಭಿಸುತ್ತಿದೆ. ಇದ್ದಕ್ಕಿದ್ದಂತೆ ಖಿನ್ನಳಾಗಿಬಿಡುತ್ತೇನೆ. ದಯವಿಟ್ಟು ಏನು ಮಾಡಬೇಕೆಂದು ಸಲಹೆ ನೀಡಿರಿ" ಎಂದು ಲವೀನಾ ತನ್ನ ತೊಂದರೆಯನ್ನು ಹೇಳಿಕೊಂಡಳು.

ನಕ್ಕ ಡಾ. ಯತೀಶ್, "ಮಿಸ್ ಲವೀನಾ, ನೀನು ಹೇಳುವುದೇನೆಂದರೆ, ಹ್ಯಾಂಡ್ಸಮ್ ವೈದ್ಯರೊಡನೆ ನೀನು ಡೇಟಿಂಗ್ ಹೋದರೂ, ಅವರೊಂದಿಗೆ ಲೈಂಗಿಕ ಸಂಪರ್ಕದತ್ತ ಮನಸ್ಸು ವಾಲದಂತೆ ನಿನ್ನ ಮನಸ್ಸಿಗೆ ನಾನು ದೃಢತೆ ತರುವಂತೆ ನಿನ್ನನ್ನು ತಯಾರು ಮಾಡಬೇಕು, ಅಲ್ವೆ?" ಎಂದು ಆಕೆಯ ಮನಸ್ಸು ಓದುವವರಂತೆ ಕೇಳಿದರು.

ಇದ್ದಕ್ಕಿದ್ದಂತೆ ಹೌಹಾರಿದ ಮಿಸ್ ಲವೀನಾ ಒಮ್ಮೆಲೇ ಕುರ್ಚಿಯಿಂದ ಮೇಲೆದ್ದು, "ಅದು ಹಾಗಲ್ಲ ಡಾಕ್ಟರ್, ಹಾಗೆಲ್ಲಾದರೂ ಮಾಡಿಬಿಟ್ಟೀರಿ. ಅವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೂ ತಪ್ಪಿತಸ್ಥ ಭಾವನೆಯಿಂದ ಬಳಲದಂತೆ, ಖಿನ್ನತೆಗೆ ಇಳಿಯದಂತೆ ನನಗೆ ಸಲಹೆ ನೀಡಿರಿ ಎಂದು ಹೇಳಿದ್ದಷ್ಟೇ!" [ವಯಸ್ಕರ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+