ಮೋಸದ ಹುಡುಗಿಗೆ ಹುಡುಗ ಕಲಿಸಿದ ಪಾಠ!

ಅಕ್ಕಪಕ್ಕದ ಗಲ್ಲಿಯಲ್ಲಿ ವಾಸಿಸುತ್ತಿದ್ದ ಹುಡುಗ ಹುಡುಗಿ ಶಾಲೆಯಲ್ಲಿಯೂ ಒಂದೇ ಕ್ಲಾಸಿನಲ್ಲಿದ್ದರು. ಅಕ್ಕಪಕ್ಕದ ಬೆಂಚಿನಲ್ಲಿ ಒಂದೇ ಲೈನಿನಲ್ಲಿ ಕುಳಿತು ಆಗಾಗ ನೋಟ್ಸುಗಳನ್ನು ಬದಲಿಸಿಕೊಳ್ಳುತ್ತಿದ್ದರು. ನೋಟ್ಸುಗಳ ಮಧ್ಯದಲ್ಲಿಯೇ ಆಗಾಗ ನವಿಲುಗರಿ, ಪ್ರೇಮ ಪತ್ರಗಳು ವರ್ಗಾವಣೆಯಾಗಿ ಸ್ನೇಹ, ಪ್ರೇಮಕ್ಕೆ ಬದಲಾಗಿತ್ತು.

ನಾಲ್ಕು ವರ್ಷಗಳು ಹೀಗೇ ಸಾಗಿದವು. ಕೊನೆಗೊಂದು ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಇಬ್ಬರೂ ದ್ವಿತೀಯ ದರ್ಜೆಯಲ್ಲಿ ಪಾಸಾದರು. ಅಲ್ಲಿಯವರೆಗೆ ವರ್ಜಿನಿಟಿಯನ್ನು ಕಾಪಾಡಿಕೊಂಡೇ ಬಂದಿದ್ದ ಇಬ್ಬರೂ ತಮಗೇ ಗೊತ್ತಿಲ್ಲದಂತೆ ಅದನ್ನು ಕಳೆದುಕೊಂಡುಬಿಟ್ಟರು.

ಕಾಲೇಜು ಸೇರಿದ ನಂತರವೂ ಇಬ್ಬರು ಒಂದೇ ಕಾಲೇಜಿನಲ್ಲಿ ಪ್ರವೇಶ ಪಡೆದು ಅಲ್ಲಿಯೂ ತಮ್ಮ ಸ್ನೇಹ, ಪ್ರೇಮವನ್ನು ಮುಂದುವರಿಸಬೇಕೆಂದು ಬಯಸಿದ್ದರು. ಆದರೆ, ವಿಧಿ ಕೇಳಬೇಕಲ್ಲ? ಹುಡುಗಿಗೆ ದೂರದ ನಗರದ ಒಂದು ತುದಿಯಲ್ಲಿರುವ ಕಾಲೇಜಿನಲ್ಲಿ ಪ್ರವೇಶ ದೊರೆತರೆ, ಹುಡುಗನಿಗೆ ಮತ್ತೊಂದು ದಿಕ್ಕಿನಲ್ಲಿರುವ ಊರಿನ ಕಾಲೇಜಿನಲ್ಲಿ ಪ್ರವೇಶ ದೊರೆಯಿತು.

ಆರಂಭದಲ್ಲಿ ಪ್ರತಿದಿನ ನಡೆಯುತ್ತಿದ್ದ ಸಂಭಾಷಣೆ, ಎಸ್ಎಂಎಸ್ ಮತ್ತು ಪತ್ರಗಳ ವಿನಿಮಯ ದಿನದಿನಕ್ಕೆ ದೂರವಾಗಲು ಆರಂಭವಾಯಿತು. ಹುಡುಗ ಮಾಡಿದ ಕರೆಗೆ, ಎಸ್ಎಂಎಸ್ ಸಂದೇಶಗಳಿಗೆ ಉತ್ತರ ನೀಡಲು ಹುಡುಗಿ ನಿರಾಕರಿಸಲು ಆರಂಭಿಸಿದಳು. ಇದರಿಂದ ಹುಡುಗ ವಿಚಲಿತನಾಗಲು ಶುರುಮಾಡಿದ, ಸಂಯಮ ಕಳೆದುಕೊಂಡ.

ಇದಕ್ಕೆಲ್ಲ ಕಾರಣ, ಆಕೆ ಬೇರೆ ಸ್ನೇಹಿತನನ್ನು ಸಂಪಾದಿಸಿದ್ದಳು. ಆತನೊಂದಿಗೆ ಅನ್ಯೋನ್ಯವಾಗಿ ಇರಲು ಶುರು ಮಾಡಿದ್ದಳು. ಆದರೆ, ಹಳೆಯ ಗೆಳೆಯನ ಕಿರಿಕಿರಿ ಅತಿಯಾದಾಗ ಆತನಿಗೆ ಪಾಠ ಕಲಿಸಬೇಕೆಂದು, ಹೊಸ ಗೆಳೆಯನ ಜೊತೆ ಆತ್ಮೀಯವಾಗಿ ಬೆರೆತುಕೊಂಡಿರುವ ಚಿತ್ರವನ್ನು ಹಳೆಯ ಸ್ನೇಹಿತನಿಗೆ ರವಾನಿಸಿದಳು. ಜೊತೆಗೆ, "ನನಗೆ ಹೊಸ ಸ್ನೇಹಿತ ಸಿಕ್ಕಿದ್ದಾನೆ, ದಯವಿಟ್ಟು ಲೀವ್ ಮಿ ಅಲೋನ್" ಎಂದು ಟಿಪ್ಪಣಿ ಬರೆದಿದ್ದಳು.

ಹಳೆಯ ಗೆಳೆಯನ ಹೃದಯ ಬಿರಿದಿತ್ತು, ಒಲವಿನ ಪಕಳೆಗಳು ಮುದುಡಿ ಹೋಗಿದ್ದವು. ನಾಲ್ಕಾರು ಕಣ್ಣೀರು ಸುರಿಸಿದ ನಂತರ, ಆಕೆಗೂ ಬುದ್ಧಿ ಕಲಿಸಬೇಕೆಂದು ಆ ತೀರ್ಮಾನಿಸಿದ. ಅದೇ ಚಿತ್ರದ ಹಿಂದೆ, "ಮಾಮ್, ಪಾಪ್, ಕಾಲೇಜಿನಲ್ಲಿ ಸೂಪರಾಗಿ ಕಾಲ ಕಳೆಯುತ್ತಿದ್ದೇನೆ, ಹಾಸ್ಟೆಲ್ ಜೀವನವೂ ಸಖತ್ತಾಗಿದೆ. ದಯವಿಟ್ಟು ಸ್ವಲ್ಪ ಹೆಚ್ಚಿಗೆ ದುಡ್ಡು ಕಳಿಸಿ" ಹೀಗೆ ಒಕ್ಕಣೆ ಬರೆದು ಆಕೆಯ ತಂದೆ ತಾಯಿಗೆ ಆ ಚಿತ್ರವನ್ನು ರವಾನಿಸಿದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+