ಅಮ್ಮನ ಮನೆಗೆ ದಯವಿಟ್ಟು ಹೋಗಬೇಡ ಚಿನ್ನಾ!

ಹೆಂಡತಿ : ರೀ ಇವತ್ತು ನಾನು ನನ್ನ ಅಮ್ಮನ ಮನೆಗೆ ಹೋಗಬೇಕು ಅಂತ ಅಂದುಕೊಂಡಿದ್ದೇನೆ. ಹೋಗಿಬರ್ಲಾ?

ಗಂಡ : ಚಿನ್ನಾ, ದಯವಿಟ್ಟು ಹೋಗಬೇಡ?

ಹೆಂಡತಿ : ಯಾಕೆ? ನನ್ನ ಬಿಟ್ಟು ಒಂದು ಕ್ಷಣವೂ ಇರಲು ನಿಮಗೆ ಸಾಧ್ಯವಾಗಲ್ಲ, ಅಲ್ಲ? ನಾನು ನಿಜಕ್ಕೂ ಅದೃಷ್ಟವಂತಳು ಕಣ್ರೀ, ಪ್ರೀತಿಸುವ ನಿಮ್ಮಂಥ ಗಂಡನ ಪಡೆಯಲು.

ಗಂಡ : ಛೆಛೆ, ಹಾಗೇನು ಇಲ್ಲ. ನೀನಿಲ್ಲದೆ ನಾನು ಆರಾಮವಾಗಿ ಇರಬಲ್ಲೆ. ಆದರೆ, ನಿನ್ನ ಜೊತೆ ನಿನ್ನ ಅಮ್ಮನೂ ಎಲ್ಲಿ ಬಂದುಬಿಡ್ತಾಳೋ ಎಂಬ ಹೆದರಿಕೆ ಅಷ್ಟೇ!

***
ರೀ ನನ್ನ ಯಾರು ನೋಡಿಕೊಳ್ಳೋರು?

ಗಂಡ ವಿಪರೀತ ಜ್ವರದಿಂದ ಬಳಲುತ್ತಿರುತ್ತಾನೆ. ತಾನಿನ್ನು ಬದುಕುವುದಿಲ್ಲ ಎಂದು ಅನಿಸಲು ಅವನಿಗೆ ಪ್ರಾರಂಭವಾಗುತ್ತದೆ. ಹೆಂಡತಿ ಕಣ್ಣೀರು ಸುರಿಸುತ್ತ ಗಂಡನ ಪಕ್ಕ ಕುಳಿತಿರುತ್ತಾಳೆ. ಆಕೆಗೆ ಇವನು ಏಳನೇ ಗಂಡ! ಹಿಂದಿನ ಆರು ಗಂಡೆದಿರೆಲ್ಲರೂ ಶಿವನ ಪಾದ ಸೇರಿರುತ್ತಾರೆ.

ಹೆಂಡತಿ : ರೀರೀ, ಕಣ್ಣು ಬಿಡ್ರೀ. ಏನ್ರೀ ಇದು ಗ್ರಹಚಾರ. ಹಿಂದಿನ ಆರು ಗಂಡಂದಿರಂತೆ ನೀವು ಕೂಡ.... ಅಲ್ರೀ, ಮುಂದೆ ನನ್ನ ನೋಡಿಕೊಳ್ಳೋರು ಯಾರು?

ಗಂಡ : (ನಿಧಾನವಾಗಿ ಕಣ್ಣು ಬಿಟ್ಟು) ಎಂಟನೇ ಗಂಡ! [ಗಂಡ ಹೆಂಡತಿ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+