ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು

'ನನಗೆ ಅಹಂಕಾರದಿಂದ ಮಾತನಾಡಬೇಕು, ಅಥವಾ ನನ್ನ ದರ್ಪವನ್ನು ನಿಮ್ಮ ಎದುರಿಗೆ ತೋರಿಸಬೇಕು, ನನ್ನ ಶ್ರೀಮಂತಿಕೆ ನಿಮಗೆ ತೋರಿಸಬೇಕು ಎಂಬ ಬಯಕೆ ನನಗಿಲ್ಲ. ಆದರೂ ಹೇಳ್ತಾ ಇದೀನಿ,,, ನಮ್ಮ ಮನೆಯಲ್ಲಿ ಇಂದು ಈರುಳ್ಳಿ ಸಾಂಬಾರ್!'

ಖರೀದಿ ಮಾಡುವಾಗಲೂ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ದರ ಮುಂದೆ ಇಳಿಕೆಯಾಗುತ್ತಂತೆ ಎಂದು ಯಾರೋ ಬಡಬಡಿಸಿದ್ದು ಕೇಳ್ದಾದ ಕಿವಿ ನೆಟ್ಟಗಾಗಿತ್ತು. ಅಯ್ಯಪ್ಪಾ ಇನ್ಯಾದರೂ ಈರುಳ್ಳಿ ದೋಸೆ ತಿನ್ನಬಹುದಲ್ಲ ಎಂಬ ಸಮಾಧಾನ ಆಗಿದ್ದು ಒಂದು ಕಡೆ ಆದ್ರೆ ಅದರ ಮೇಲೆ ಹುಟ್ಟುಕೊಂಡ ಜೋಕ್ ಗಳು ಯಾವ 'ರಜನಿಕಾಂತ್' ಗೂ ಕಡಿಮೆ ಇರಲಿಲ್ಲ.[ನಿಟ್ಟುಸಿರು ಬಿಟ್ಟ ಗ್ರಾಹಕ, ಈರುಳ್ಳಿ ಸೆಂಚುರಿ ಬಾರಿಸಲ್ಲ]

ಈರುಳ್ಳಿ ದರ ಏರಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಬಗೆ ಜೋಕುಗಳನ್ನು ನೋಡದಿದ್ರೆ ಮಜಾ ಇಲ್ಲ ಬಿಡಿ. ಉಂಗುರಕ್ಕೆ ಡೈಮಂಡ್ ಬದಲಾಗಿ ಈರುಳ್ಳೀ, ಹೆಂಡತಿಗೆ ಈರುಳ್ಳಿ ಮಾಲೆ ಹುಟ್ಟುಹಬ್ಬದ ಗಿಫ್ಟ್, ಜೂಜಾಡುವವರು ಹಣದ ಬದಲಾಗಿ ಇಟ್ಟುಕೊಂಡಿದ್ದು ಈರುಳ್ಳಿ, ಯಾವುದೋ ಕಂಪನಿಯ ಸಿಮ್ ಪೋರ್ಟ್ ಮಾಡಿದರೆ ಒಂದು ಕೆಜಿ ಈರುಳ್ಳಿ ಉಚಿತ, ಶಿವಲಿಂಗ ಹೊತ್ತಿರುವ ಬಾಹುಬಲಿ ಬದಲಾಗಿ ಈರುಳ್ಳಿ ಹೊತ್ತ ಬಾಹುಬಲಿ ಪ್ರಭಾಸ್ .... ಅಯ್ಯಪ್ಪಾ ಪಟ್ಟಿ ಮುಂದುವರಿಯುತ್ತಲೇ ಹೋಗುವುದು.

ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಬಗೆ ಬಗೆಯ ಜೋಕುಗಳು, ಚಿತ್ರಗಳು ಹರಿದಾಡುತ್ತಿವೆ. ಬೆಲೆ ಇದ್ದಾಗಲೂ ಕಣ್ಣೀರು, ಬೆಲೆ ಏರಿದಾಗಲೂ ಕಣ್ಣೀರು ತರಿಸುವ ಈರುಳ್ಳಿಯ ಸುತ್ತ ಹುಟ್ಟಿಕೊಂಡ ಜೋಕುಗಳ ಪಟ್ಟಿಯನ್ನು ಹಾಗೆ ನೋಡ್ಕೊಂಡು ಬರೋಣ...(ನಕ್ಕು ಸುಮ್ಮನಾಗಿ, ಯೋಚನೆ ಮಾಡೋಕೆ ಹೋಗಬೇಡಿ)(ಚಿತ್ರ ಕೃಪೆ: ಫೇಸ್ ಬುಕ್, ವಾಟ್ಸಾಪ್)

ಶ್ರೀಮಂತುಡು!

ಶ್ರೀಮಂತುಡು!

ತೆಲುಗಿನನಲ್ಲಿ ಶ್ರೀಮಂತುಡು ಸಿನಿಮಾ ಬಿಡುಗಡೆಯಾಗಿ ದಾಖಲೆ ಮಾಡುತ್ತಿದ್ದರೆ ಇತ್ತ ಈರುಳ್ಳಿ ಚೀಲದ ಮೇಲೆ ಕುಳಿತ ಶ್ರೀಮಂತುಡು.

ನನ್ನ ಬಳಿ ಈರುಳ್ಳಿಯಿದೆ

ನನ್ನ ಬಳಿ ಈರುಳ್ಳಿಯಿದೆ

ಬಾಲಿವುಡ್ ಬಾದ್ ಷಾ ಮತ್ತು ಕನ್ನಡದ ಚಿಕ್ಕಣ್ಣನ ನಡುವೆ ನಡೆದ ಸಂಭಾಷಣೆ ಈರುಳ್ಳಿಬೆಲೆ ಏರಿಕೆಯನ್ನು ವಿಡಂಬನೆ ಮಾಡಿದ್ದು ಹೀಗೆ.

ಬಾಹುಬಲಿ ಅವತಾರ!

ಬಾಹುಬಲಿ ಅವತಾರ!

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಅದ್ದೂರಿ ವೆಚ್ಚದ ಬಾಹುಬಲಿ ಚಿತ್ರದಲ್ಲಿ ನಾಯಕ ಪ್ರಭಾಸ್ ಶಿವಲಿಂಗವನ್ನು ಹೊತ್ತಿದ್ದರು. ಆದರೆ ಇಲ್ಲಿ...

ಪ್ರಮಾಣಿಕತೆ ಎಂದರೆ ಇದು!

ಪ್ರಮಾಣಿಕತೆ ಎಂದರೆ ಇದು!

ದಾರಿಯಲ್ಲಿ ಸಿಕ್ಕ ಈರುಳ್ಳಿಯನ್ನು ಮಾಲೀಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ... (ಚಿನ್ನ, ಹಣ ಹಿಂದಿರುಗಿಸಿದ್ದಾಗ ಇಂಥ ವರದಿಗಳು ಪತ್ರಿಕೆಯಲ್ಲಿ ಬರುತ್ತಿದ್ದವು)

ಸಿಮ್ ಪೋರ್ಟ್ ಮಾಡಿದ್ರೆ ಈರುಳ್ಳಿ ಉಚಿತ

ಸಿಮ್ ಪೋರ್ಟ್ ಮಾಡಿದ್ರೆ ಈರುಳ್ಳಿ ಉಚಿತ

ಖಾಸಗಿ ಕಂಪನಿಯೊಂದರ ಬ್ಯಾನರ್. ಸಿಮ್ ಕಾರ್ಡ್ ಪೋರ್ಟ್ ಮಾಡಿದರೆ ಕೆಜಿ ಈರುಳ್ಳಿ ಉಚಿತ!

ಜೂಜಿಗೂ ಬಂತೆ!

ಜೂಜಿಗೂ ಬಂತೆ!

ಹಣದ ಬದಲಾಗಿ ಈರುಳ್ಳಿಯನ್ನೇ ಪಣಕ್ಕಿಟ್ಟರು.(ಇದು ಕೇವಲ ಜೋಕ್ ಗೋಸ್ಕರ ಹುಟ್ಟಿಕೊಂಡ ಚಿತ್ರ)

ಭರ್ಜರಿ ಊಟ

ಭರ್ಜರಿ ಊಟ

ಯಾವುದೋ ಸಿನಿಮಾದ ದೃಶ್ಯದಂತೆ ಈರುಳ್ಳಿಯನ್ನು ಎದುರಿಗೆ ಕಟ್ಟಿಕೊಂಡು ಭರ್ಜರಿ ಊಟ.

ಈರುಳ್ಳಿ ಉಂಗುರ

ಈರುಳ್ಳಿ ಉಂಗುರ

ಪ್ರಿಯೇ ನಿನಗೆ ಡೈಮಂಡ್ ಗಿಂತ ಹೆಚ್ಚಿನ ಬೆಲೆ ಬಾಳುವ ಉಂಗುರ ತೊಡಿಸುವೆ(ವಾಟ್ಸಪ್ ನಲ್ಲಿ ಬಂದಿದ್ದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+