ಪೆಟ್ರೋಲ್ ಬೆಲೆಯಂತೆ ನಿಮ್ಮ ಸುಖವೂ ಹೆಚ್ಚಲಿ!
ಸುಖ ಸಂತೋಷಗಳನ್ನು, ದುಃಖ ದುಮ್ಮಾನಗಳನ್ನು ನಮ್ಮ ಸ್ನೇಹಿತರೊಡನೆ, ಬಂಧುಗಳೊಡನೆ ಹಂಚಿಕೊಳ್ಳುವುದು ನಮ್ಮ ಭಾರತೀಯರಲ್ಲಿ ಹಾಸುಹೊಕ್ಕಾಗಿದೆ. ಕಾಲಕ್ಕೆ ತಕ್ಕಂತೆ ನಮ್ಮ ಜೀವನಕ್ರಮ ಬದಲಾಗುತ್ತಲೇ ಇದೆ. ಹಾಗೆಯೆ, ಹುಟ್ಟುಹಬ್ಬವಿರಲಿ, ಮದುವೆ ಮುಂಜಿಯಿರಲಿ, ಬಂಧುಮಿತ್ರರನ್ನು ಹಾರೈಸುವ ರೀತಿಯೂ ಬದಲಾಗಲಿ. ಅಲ್ಲಿ ಹಾಸ್ಯಪ್ರಜ್ಞೆಯ ಟಚ್ ಇರಲಿ. ದುಃಖದ ಸಂದರ್ಭದಲ್ಲಿಯೂ ಮುಖ ತಿಳಿಯಾಗುವಂತಾಗಲಿ.
ವಿನೂತನ ಬಗೆಯ ಹಾರೈಕೆಗಳು ಹೀಗಿದ್ದರೆ ಹೇಗೆ?
* ಪೆಟ್ರೋಲ್ ಬೆಲೆಯಂತೆ ನಿಮ್ಮ ಸುಖ ಸಂತೋಷವೂ ಹೆಚ್ಚಲಿ.
* ಭಾರತೀಯ ರುಪಾಯಿ ಮೌಲ್ಯದಂತೆಯೇ ನಿಮ್ಮ ಸಂಕಟವೂ ಇಳಿಯಲಿ.
* ಭಾರತದಲ್ಲಿ ಭ್ರಷ್ಟಾಚಾರ ತುಂಬಿದಂತೆ ನಿಮ್ಮ ಹೃದಯ ಸಂತಸದಿಂದ ತುಂಬಿರಲಿ.
***
ಜಿಡಿಪಿ ಬಗ್ಗೆ ಯುಪಿಎ ಸರಕಾರದ ವ್ಯಾಖ್ಯಾನ
ಕೇಂದ್ರ ಸರಕಾರ ಯಾವುದೇ ಭರವಸೆಯನ್ನು ಈಡೇರಿಸಲು ವಿಫಲವಾದರೂ ಜಿಡಿಪಿ ಏರಿಸುವ ಭರವಸೆಯನ್ನು ಮಾತ್ರ ಈಡೇರಿಸಿದೆ. ಅವರ ಪ್ರಕಾರ ಜಿಡಿಪಿ ಅಂದರೇನು ಗೊತ್ತಾ?
ಜಿ - ಗ್ಯಾಸ್ (ಅನಿಲ) ಮತ್ತು ಗೋಲ್ಡ್ (ಬಂಗಾರ)
ಡಿ - ಡೀಸೆಲ್ ಮತ್ತು ಡಾಲರ್
ಪಿ - ಪೆಟ್ರೋಲ್ ಮತ್ತು ಪೆನ್ನಿ (ರುಪಾಯಿ)
***
ಗುಂಡ ಬ್ರಿಲಿಯಂಟ್ ವಿದ್ಯಾರ್ಥಿ. ಆತ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಬ್ರಿಲಿಯಂಟ್ ಆಗಿಯೇ ಉತ್ತರ ಕೊಟ್ಟಿದ್ದ. ಆದರೆ, ಆತನಿಗೆ ಸಿಕ್ಕಿದ್ದು ಸೊನ್ನೆ ಮಾತ್ರ. ಯಾಕೆ? ಆತ ಬರೆದ ಉತ್ತರಗಳನ್ನು ನೋಡಿರಿ. ಆದರೆ, ಗುಂಡ ನೀಡಿದ ಉತ್ತರಕ್ಕೆ ಮೇಷ್ಟ್ರು ತತ್ತರಿಸಿ ಹೋಗಿ ಮೂರ್ಛೆ ಬಿದ್ದಿದ್ದು ಮಾತ್ರ ಸುಳ್ಳಲ್ಲ.
ಪ್ರಶ್ನೆ : ಟಿಪ್ಪು ಸುಲ್ತಾನ್ ಯಾವ ಯುದ್ಧದಲ್ಲಿ ಗೆದ್ದ?
ಉತ್ತರ : ತನ್ನ ಕೊನೆಯ ಯುದ್ಧದಲ್ಲಿ!
ಪ್ರಶ್ನೆ : ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಯಾವ ಸ್ಥಳದಲ್ಲಿ ಸಹಿ ಹಾಕಲಾಯಿತು?
ಉತ್ತರ : ಒಪ್ಪಂದ ಪತ್ರದ ಬುಡದ ಬಲತುದಿಯಲ್ಲಿ!
ಪ್ರಶ್ನೆ : ವಿಚ್ಛೇದನಕ್ಕೆ ಪ್ರಮುಖ ಕಾರಣ ಯಾವುದು?
ಉತ್ತರ : ಮದುವೆ!
ಪ್ರಶ್ನೆ : ವೈಫಲ್ಯಕ್ಕೆ ಪ್ರಮುಖ ಕಾರಣ ಯಾವುದು?
ಉತ್ತರ : ಪರೀಕ್ಷೆ!












Click it and Unblock the Notifications