ಈ ದಿನಕ್ಕೋಸ್ಕರ ಎಷ್ಟು ದಿನದಿಂದ ಕಾಯುತ್ತಿದ್ದೆ!

ನಿಶ್ಚಿತಾರ್ಥ ಮುಗಿದ ಮರುದಿನ ಗಂಡು ಮತ್ತು ಹೆಣ್ಣು ದೂರವಾಣಿಯ ಮುಖಾಂತರ ಮಾತುಕತೆಯಲ್ಲಿ ತೊಡಗಿರುತ್ತಾರೆ. ಲೈಸೆನ್ಸ್ ಸಿಕ್ಕಾದ ಮೇಲೆ ಇನ್ನೇನು? ಮಾತುಗಳಲ್ಲಿ ಪ್ರೀತಿ, ತುಂಟಾಟ, ರಮಿಸುವುದು ತುಂಬಿ ಹರಿಯುತ್ತಿರುತ್ತದೆ. ಇಬ್ಬರಲ್ಲಿಯೂ ಅದೇನೋ ಪುಳಕ, ಮನಸ್ಸಿಗೆ ಬಂದಿದ್ದೆಲ್ಲ ಮಾತನಾಡುವ ತವಕ... ಅವರ ಮಾತುಗಳು ಹೀಗಿವೆ ಓದಿರಿ...

ಗಂಡು : ಈ ದಿನಕ್ಕೋಸ್ಕರ ಎಷ್ಟು ದಿನದಿಂದ ನಾನು ಕಾಯ್ತಾ ಇದ್ದೆ, ಗೊತ್ತಾ?

ಹೆಣ್ಣು : ನೀನು ನನ್ನ ಬಿಟ್ಟು ಹೋಗುವುದಿಲ್ಲ ತಾನೆ?

ಗಂಡು : ಕನಸಲ್ಲಿ ಕೂಡ ಅಂಥ ಕೆಲಸ ಮಾಡಲ್ಲ.

ಹೆಣ್ಣು : ನೀನು ನನ್ನ ಪ್ರೀತಿಸುತ್ತಿಯಲ್ಲ?

ಗಂಡು : ಆಫ್ ಕೋರ್ಸ್, ಇಂದು ಮಾತ್ರ ಅಲ್ಲ ಎಂದೆಂದಿಗೂ.

ಹೆಣ್ಣು : ನೀನು ನನ್ನ ಮರೆತುಬಿಡಲ್ಲ ತಾನೆ?

ಗಂಡು : ಎಲ್ಲಾದ್ರೂ ಉಂಟೆ, ಅದಕ್ಕಿಂತ ಸಾಯುವುದೇ ಮೇಲೆ.

ಹೆಣ್ಣು : ಹಾಗಾದ್ರೆ, ನನಗೊಂದು ಮುತ್ತು ಕೊಡ್ತೀಯಾ ಪ್ಲೀಸ್?

ಗಂಡು : ಕೇಳಬೇಕಾ? ಅದಕ್ಕಿಂತ ಸಂತೋಷದ ಸಂಗತಿ ಇನ್ನೇನಿದೆ?

ಹೆಣ್ಣು : ನೀನು ನನ್ನ ಹೊಡೆಯಲ್ಲ ತಾನೆ?

ಗಂಡು : ಆ ತರಹ ತಪ್ಪು ಜೀವಮಾನದಲ್ಲಿ ಎಂದೂ ಮಾಡುವುದಿಲ್ಲ.

ಹೆಣ್ಣು : ನೀನು ಕೊನೆಯವರೆಗೂ ನನ್ನ ಜೊತೆಯಲ್ಲಿಯೇ ಇರ್ತೀಯ ತಾನೆ? (ಅಷ್ಟರಲ್ಲಿ ಫೋನ್ ಲೈನ್ ಕಟ್ಟಾಗಿ ಹೋಗಿಬಿಡುತ್ತದೆ. ಇರಲಿ ಬಿಡಿ, ಕೆಳಗಿನದನ್ನೂ ಓದಿಬಿಡಿ.)

ಅವರಿಗೆ ಮದುವೆಯಾಗಿ ಹನಿಮೂನಿಗೆ ಹೋಗಿಬರುತ್ತಾರೆ. ನಂತರ ಅವರಿಬ್ಬರ ನಡುವೆ ನಡೆಯುವ ಮಾತುಕತೆಗಳು ಹೇಗಿರುತ್ತವೆ ಎಂಬುದನ್ನು ಕೆಳಗಿನಿಂದ ಮೇಲೆ ಓದಿರಿ. [ಗಂಡ ಹೆಂಡತಿ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+