ಕಿಸ್ ಆಫ್ ಲವ್ : ಕಿಸ್ ಬಗ್ಗೆ ಒಂದು ವ್ಯಾಖ್ಯಾನ
ದೇಹದ ವಿವಿಧ ಭಾಗಗಳಿಗೆ ಕೊಡುವ ಕಿಸ್ ಬಗ್ಗೆ ಬಂದ SMS ಹೀಗಿದೆ ಓದಿ..
ಹಣೆಗೆ : ನಾವಿಬ್ಬರೂ ಜೊತೆಯಾಗಿ ಇರುತ್ತೇವೆಂದು
ತೋಳಿಗೆ : ನಾವಿಬ್ಬರೂ ಒಬ್ಬರಿಗೂಬ್ಬರು ಸೂಕ್ತ ಆಯ್ಕೆಯೆಂದು
ಗಲ್ಲಕ್ಕೆ: ನಾವಿಬ್ಬರೂ ಸ್ನೇಹಿತರೆಂದು
ಕುತ್ತಿಗೆಗೆ : ನೀನು ನನಗೆ ಈಗಲೇ ಬೇಕೆಂದು
ಕೈಗೆ: ನಾನು ನಿನ್ನನ್ನು ಆರಾಧಿಸುತ್ತೇನೆಂದು
ತುಟಿಗೆ ಕೊಟ್ಟರೆ: ಐ ಲವ್ ಯು ಎಂದು..
ಮುಂದಾ..
---
ಕಿಸ್ ನಿಂದಾಗುವ ಅನುಕೂಲದ ಬಗ್ಗೆ ಒಂದು ಮೆಸೇಜ್
ಒಂದು ಕಿಸ್ ನಲ್ಲಿ
0.70 ಗ್ರಾಂ - ಪ್ರೋಟೀನ್
0.45 ಗ್ರಾಂ - ಕೊಬ್ಬು
0.19 ಗ್ರಾಂ - ಕೆಮಿಕಲ್
0.50 - ವಿವಿಧ ರೀತಿಯ ಬ್ಯಾಕ್ಟೀರಿಯಾಗಳಿರುತ್ತವೆ. ಹಾಗಾಗಿ ದಿನವೂ ಚುಂಬಿಸಿ, ಆರೋಗ್ಯದಿಂದಿರಿ.
---
ಗುಂಡನ ಮಗ ಮರಿಗುಂಡ ತಾಯಿ ಗುಂಡಿಯ ಜೊತೆಗೆ ಶಾಲೆಯಿಂದ ವಾಪಸ್ ಮನೆಗೆ ತೆರಳುತ್ತಿದ್ದ. ದಾರಿಯಲ್ಲಿ ಇಬ್ಬರು ಗಾಢ ಚುಂಬನದಲ್ಲಿ ನಿರತರಾಗಿದ್ದರು.
ಅದನ್ನು ನೋಡಿದ ಮರಿಗುಂಡ, ಒಮ್ಮಲೇ ಅರಚುತ್ತಾ, ಅಮ್ಮಾ..ಅಮ್ಮಾ.. ನೋಡಲ್ಲಿ ಅಲ್ಲಿಬ್ಬರು ಚ್ಯೂಯಿಂಗಮ್ ಗಾಗಿ ಹೇಗೆ ಕಿತ್ತಾಡುತ್ತಿದ್ದಾರೆ. (ಕಿಸ್ ಆಫ್ ಕಿಲೋ ಗಟ್ಟಲೇ ಬ್ಯಾಕ್ಟೀರಿಯಾ)
--
ಹುಡುಗ: ನಾನು ಇಂದು ನಿನ್ನನ್ನು ಚುಂಬಿಸುತ್ತೇನೆ.
ಹುಡುಗಿ : ನೀನು ಹಾಗೇನಾದರೂ ಮಾಡಿದರೆ, ನಾನು ಜೋರಾಗಿ ಕೂಗಿಕೊಳ್ಳುತ್ತೇನೆ.
ಹುಡುಗ: ಬಟ್, ಇಲ್ಲಿ ಯಾರು ಇದ್ದಾರೆಂತ ನೀನು ಕೂಗಿ ಕೊಳ್ಳುತ್ತೀಯಾ? ಬಾಗಿಲು ಹಾಕಿದೆಯಲ್ಲಾ!
ಹುಡುಗಿ: ಅದು ನನಗೂ ಗೊತ್ತು, ಆದರೂ ಸುಮ್ಮನೆ ಶಾಸ್ತ್ರಕ್ಕಾದರೂ ಕೂಗಬೇಕಲ್ಲಾ..
ಹುಡುಗ: ಸರೀ.. ಹಾಗದ್ರೆ ಕೂಗಿಕೋ..












Click it and Unblock the Notifications