ಪ್ರಾಣಸ್ನೇಹಿತನಿಗೆ ಇಲಿಪಾಷಾಣ ಕೊಟ್ಟ ಗುಂಡ..

ಗುಂಡ ಮತ್ತು ತಿಮ್ಮ ಪ್ರಾಣ ಸ್ನೇಹಿತರು. ಒಂದು ದಿನ ತಿಮ್ಮ ಇದ್ದಕ್ಕಿದ್ದಂತೆ ಸತ್ತು ಹೋದ. ಪೊಲೀಸರಿಗೆ ಅನುಮಾನ ಬಂದು ಕೇಸ್ ದಾಖಲಿಸಿದರು. ಪೊಲೀಸರು ಗುಂಡನನ್ನು ವಿಚಾರಿಸಿದಾಗ..
ಪೋಲೀಸ್: ನೀನು ಮತ್ತು ತಿಮ್ಮ ಪ್ರಾಣ ಸ್ನೇಹಿತರು ತಾನೇ..
ಗುಂಡ: ಹೌದು ಸಾರ್, ಡೌಟೇ ಬೇಡ..
ಪೋಲೀಸ್: ನಿಜ ಹೇಳು, ಅವ್ನು ಹೇಗೆ ಸತ್ತ.
ಗುಂಡ: ಹೊಟ್ಟೆಯೊಳಗೆ ಇಲಿ ಓಡಾಡಿದ ಹಾಗೆ ಆಗುತ್ತೆ ಅಂದ ಸಾರ್ ..ಅದಕ್ಕೆ
ಪೋಲೀಸ್: ಅದಕ್ಕೆ ನೀನು ಏನು ಮಾಡ್ದೆ..
ಗುಂಡ: ಮೆಡಿಕಲ್ ಸ್ಟೋರಿಗೆ ಓಡಿ ಹೋಗಿ ಇಲಿ ಪಾಷಾಣ ಕೊಟ್ಬಿಟ್ಟೆ ಸಾರ್..
***

ಗುಂಡ: ಸ್ವಾಮಿ ಕ್ಯಾಲೆಂಡರ್ ಕೊಡಿ..
ಅಂಗಡಿಯವ: ಯಾವ ಕ್ಯಾಲೆಂಡರ್ ಕೊಡ್ಲಿ..
ಗುಂಡ: ರಜೆ ಜಾಸ್ತಿ ಇರೋ ಕ್ಯಾಲೆಂಡರ್ ಕೊಡಪ್ಪಾ..
***

ತಿಮ್ಮನ ಸಂಸಾರ ಬಹಳ ದೊಡ್ಡದು, 25 ಜನ ಸದಸ್ಯರು..
ಗುಂಡ: ಏನಯ್ಯಾ, 25 ಜನ ಇದ್ದೀರಲ್ಲಾ ಮನೀಲಿ. ಫ್ಯಾಮಿಲಿ ಪ್ಲಾನಿಂಗ್ ನವರು ಬಂದಿಲ್ವಾ..
ತಿಮ್ಮ:ಬಂದಿದ್ರು..
ಗುಂಡ: ಏನೂ ಹೇಳಿಲ್ವಾ?
ತಿಮ್ಮ: ಏನ್ ಹೇಳ್ತಾರೆ.. ಸ್ಕೂಲ್ ಅನ್ಕೊಂಡು ವಾಪಾಸ್ ಹೋದರು..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+