ದಿನಾ ಹೆಂಡ್ತಿ ಸಾವಿರ ರೂಪಾಯಿ ಕೊಡೀಂತ ಪೀಡಿಸ್ತಾಳೆ
ಗುಂಡ: ನನಗಂತೂ ಸಾಕಾಗಿ ಹೋಗಿದೆ ಕಣೋ?
ತಿಮ್ಮ: ಯಾಕೋ ಏನಾಯಿತು?
ಗುಂಡ: ನನ್ನ ಹೆಂಡ್ತಿ ದಿನಾ ಸಾವಿರ ರೂಪಾಯಿ ಕೊಡೀಂತ ಪೀಡಿಸ್ತಾನೆ ಇರ್ತಾಳೆ..
ತಿಮ್ಮ: ಯಾಕೆ ಅವಳಿಗೆ ದಿನಾ ಅಷ್ಟೊಂದು ದುಡ್ಡು ?
ಗುಂಡ: ಅದೇನ್ ಮಾಡ್ತಾಳೋ ... ಇವತ್ತಿನ ವರೆಗೆ ನಾನು ಅವಳಿಗೆ ದುಡ್ಡು ಕೊಟ್ಟಿದ್ರೆ ತಾನೇ..
***
ಬಸ್ ಅಪಘಾತವಾಗಿತ್ತು. ಅನೇಕರು ಮೃತ ಪಟ್ಟಿದ್ದರು. ಕೆಲವರು ಕೈಕಾಲು ಕಳೆದು ಕೊಂಡಿದ್ದರು.
ಅಲ್ಲಿಗೆ ಗುಂಡ ಬಂದ.. ಕೈಕಳೆದು ಕೊಂಡ ಒಬ್ಬನನ್ನು ಸಮಾಧಾನ ಪಡಿಸುತ್ತಾ..
ಗುಂಡ: ಸಮಾಧಾನ ತಂದುಕೊಳ್ಳಿ.. ನೀವು ಕೈಕಾಲು ಕಳೆದು ಕೊಂಡಿದ್ದೀರಾ..ಆದರೆ ಅಲ್ಲಿ ನೋಡಿ..
ಅವನು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.. ನಿಮ್ಮ ಹಾಗೆ ಅಳುತ್ತಿದ್ದಾನಾ?
***
ಗುಂಡನಿಗೆ ಕಥೆ ಕಾದಂಬರಿ ಓದುವುದರಲ್ಲಿ ಬಹಳ ಆಸಕ್ತಿ. ಪುಸ್ತಕ ಖರೀದಿಸಲು ಅಂಗಡಿಗೆ ಹೋಗ್ತಾನೆ.. ಸಾಮಾಜಿಕ ಕಾದಂಬರಿಗಳ rack ನಲ್ಲಿ ಪುಸ್ತಕಕ್ಕಾಗಿ ಹುಡುಕಾಡಿ ಹುಡುಕಾಡಿ ಕೊನೆಗೆ ಅವನಿಗೆ ಸಿಗುವುದೇ ಇಲ್ಲ..
ಗುಂಡ: ಸಾರ್.. 'ಗಂಡನೇ ಮನೆಗೆ ಯಜಮಾನ' ಅನ್ನೋ ಸಾಮಾಜಿಕ ಕಾದಂಬರಿ ಬಂದಿಲ್ವಾ?
ಅಂಗಡಿಯವ: ಬಂದಿದೆ ಸಾರ್..
ಗುಂಡ: ಮತ್ತೆ ಆ rack ನಲ್ಲಿ ಪುಸ್ತಕವೇ ಇಲ್ಲ..
ಅಂಗಡಿಯವ: ಅದು ಕಾಲ್ಪನಿಕ ಕಾದಂಬರಿಗಳ rack ನಲ್ಲಿದೆ ನೋಡಿ ಸಾರ್..












Click it and Unblock the Notifications