ಸುಖ ದುಃಖ ಎರಡೂ ಒಟ್ಟಿಗೆ ಮಾರಾಟಕ್ಕಿವೆ!
ಪೆಟ್ರೋಲ್ ಬೆಲೆ ಸೆಂಚುರಿ ಬಾರಿಸಲು ಇನ್ನೇನು ಕೆಲವೇ ಕೆಲವು ಅಂಕಗಳು ಬಾಕಿಯಿವೆ. ಸಚಿನ್ ತೆಂಡೂಲ್ಕರ್ ಸೆಂಚುರಿ ಬಾರಿಸಿದಾಗ ಸಂತೋಷಪಟ್ಟಂತೆ ಪೆಟ್ರೋಲ್ ಬೆಲೆಯೂ ಸೆಂಚುರಿ ಬಾರಿಸಿದಾಗ ಸಂತೋಷಪಡುತ್ತೀರೋ, ಬೆಲೆ ಏರಿಸಿದವರನ್ನು ನೀವೇ ಬಾರಿಸುತ್ತೀರೋ ನಿಮಗೆ ಬಿಟ್ಟಿದ್ದು. ಆದರೆ, ಸದ್ಯಕ್ಕೆ ಪೆಟ್ರೋಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಅನೇಕ ನಗೆಚಾಟಿಗಳು ಅಂತರ್ಜಾಲದಲ್ಲಿ ಚಾಲ್ತಿಯಲ್ಲಿವೆ. ಓದಿ ಸಾಧ್ಯವಾದರೆ ಖುಷಿಪಡಿ.
* ಸಂತೋಷ ಮತ್ತು ದುಃಖ ಎರಡೂ ಒಂದೇ ಬೆಲೆಗೆ ಮಾರಾಟಕ್ಕಿವೆ. ಅದೇನಂತೀರಾ? ಬಿಯರ್ ಮತ್ತು ಪೆಟ್ರೋಲ್ ಬೆಲೆಗಳು ಹೆಚ್ಚೂಕಡಿಮೆ 80 ರು. ಆಸುಪಾಸಿನಲ್ಲೇ ಸಿಗುತ್ತಿವೆ.
* ಪ್ರಾಯಕ್ಕೆ ಬಂದ ಹುಡುಗಿ ತನ್ನ ಕನಸಿನ ರಾಜಕುಮಾರ ಕುದುರೆಯ ಮೇಲೆ ಬಂದು ತನ್ನನ್ನು ಹಾರಿಸಿಕೊಂಡು ಹೋಗುತ್ತಾನೆ ಎಂದು ಕನವರಿಸುತ್ತಿರುತ್ತಾಳೆ. ಈಗ ಆ ಕನಸು ನನಸಾಗುವ ದಿನಗಳು ದೂರವಿಲ್ಲ. ಪೆಟ್ರೋಲ್ ಬೆಲೆ ಏರಿಕೆಗೆ ಥ್ಯಾಂಕ್ಸ್.
* ವರದಕ್ಷಿಣೆ ಪಡೆದ ಅಳಿಯ ಮಾವನಿಗೆ ಬರೆದ ಪತ್ರದ ಒಕ್ಕಣಿಕೆ : ಪ್ರೀತಿಯ ಮಾವಯ್ಯ. ನಾನು ವರದಕ್ಷಿಣೆಯಾಗಿ ಕಾರನ್ನು ಪಡೆದು ಭಾರೀ ತಪ್ಪು ಮಾಡಿದೆ. ದಯವಿಟ್ಟು ಕಾರನ್ನು ಅಥವಾ ನಿಮ್ಮ ಮಗಳು ಅರ್ಥಾತ್ ನನ್ನ ಹೆಂಡತಿಯನ್ನು ವಾಪಸ್ ಕರೆದುಕೊಂಡು ಹೋಗಿ. ಇಬ್ಬರನ್ನೂ ನಿಭಾಯಿಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲ.
* ಸದ್ಯದಲ್ಲೇ ರುಪಾಯಿ ಹಿರಿಯ ನಾಗರಿಕರ ಸಾಲಿಗೆ ಸೇರಲಿದೆ.
* ಟಾಟಾ ನ್ಯಾನೋ ಕಾರನ್ನು ಸಾಲದಲ್ಲಿ ಪಡೆದರೆ, ಅದರ ಇಎಮ್ಐ ಪೆಟ್ರೋಲ್ ಬೆಲೆಗಿಂತ ಹೆಚ್ಚಾದೀತು ಹುಷಾರ್!
* ಟ್ರಾಫಿಕ್ ತೊಂದರೆ ನಿವಾರಿಸಲು ಇರುವುದು ಒಂದೇ ದಾರಿ. ಅದು, ಪೆಟ್ರೋಲ್ ಬೆಲೆ ಏರಿಕೆ!
* ಇನ್ನು ಮುಂದೆ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಮತ್ತು ಅಪರಾಧ ಕಡಿಮೆಯಾಗಲಿದೆ. ಯಾಕಂತೀರಾ? ಈ ದುಬಾರಿ ದಿನದಲ್ಲಿ ಪೆಟ್ರೋಲ್ ಮತ್ತು ಆಲ್ಕೋಹಾಲ್ ಎರಡನ್ನು ಒಟ್ಟಿಗೆ ಕೊಳ್ಳಲು ಸಾಧ್ಯವೆ? [ಪೆಟ್ರೋಲ್ ಬಗ್ಗೆ ಈ ನಗೆಹನಿಗಳನ್ನೂ ಓದಿರಿ]












Click it and Unblock the Notifications