ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದ ನಗೆ ಹನಿ: ನಾಲ್ಕು ವೈವಿಧ್ಯಮಯ ಜೋಕುಗಳು

By Mahesh
|
Google Oneindia Kannada News

ಒಂದು ದಿನ ಯಮಧರ್ಮ: ಒಬ್ಬ ಹುಡುಗನ ಬಳಿ
ಬಂದು ನುಡಿಯುತ್ತಾನೆ "ಮಾನವ, ಇವತ್ತು ನಿನ್ನ
ಕೊನೆಯ ದಿನ"

ಹುಡುಗ: ಇಲ್ಲಾ ಗುರು ನಾನಿನ್ನು ಸಾಯೋಕೆ ರೆಡಿ ಆಗಿಲ್ಲಾ. ಇನ್ನು ಬೇಜಾನ್
ಕೆಲ್ಸ ಇದೆ ನಂಗೆ.

ಯಮಧರ್ಮ: ಆದರೆ ವಿಧಿಬರಹ ಹಾಗಿದೆ. ನಿನ್ನ ಹೆಸರೆ ಇವತ್ತು
ಲಿಸ್ಟನಲ್ಲಿ ಮೊದಲಿದೆ.

ಹಾಸ್ಯ: ಕಂಡ ಕಂಡವರ ಪತ್ನಿ ಐ ಲವ್ ಯೂ ಮೆಸೇಜ್ ಕಳಿಸಿದಾಗಹಾಸ್ಯ: ಕಂಡ ಕಂಡವರ ಪತ್ನಿ ಐ ಲವ್ ಯೂ ಮೆಸೇಜ್ ಕಳಿಸಿದಾಗ

ಹುಡುಗ:ಓಹ್, ಹೌದಾ? ಆಯ್ತು. ಒಂದ್ ನಿಮಿಷ
ಕೂತ್ಕೊ. ಇಬ್ರೂ ಒಂದ್ ಕಾಫೀ
ಕುಡ್ಕೋಂಡ್ ಹೋಗೋಣ.

ಯಮಧರ್ಮ: ಸರಿ ಹಾಗೇ ಆಗಲಿ..

ಹುಡುಗ ಯಮಧರ್ಮನಿಗೆ
ಕಾಫೀಯೊಳಗೆ: ನಿದ್ದೆ ಮಾತ್ರೆ ಬೆರೆಸಿ
ಕೊಡ್ತಾನೆ...

ಯಮರಾಜ ಕಾಫೀ ಕುಡಿದು
ಗಡದ್ದಾಗಿ ನಿದ್ದೆ ಮಾಡಿಬಿಡ್ತಾನೆ.
ಹುಡುಗ ಯಮಧರ್ಮನ ಡೆತ್ ಲಿಸ್ಟ್
ತೊಗೊಂಡು
ಮೊದಲಿದ್ದ ತನ್ನ ಹೆಸರನ್ನು ಅಳಿಸಿ
ಕೊನೆಯಲ್ಲಿ ಬರೆದುಬಿಡುತ್ತಾನೆ...

ಯಮಧರ್ಮ ನಿದ್ದೆಯಿಂದ್ದೆದು ಹುಡುಗನಿಗೆ ಹೇಳ್ತಾನೆ:
ನೀ ಕೊಟ್ಟ ಕಾಫೀ :
ಅದ್ಭುತವಾಗಿತ್ತು :ಹಾಗಾಗಿ ನಿನಗೆ ಒಂದು ರಿಯಾಯಿತಿ
ಕೊಡ್ತೀನಿ...

ಇವತ್ತು ನನ್ನ ಕೆಲಸವನ್ನು
ಲಿಸ್ಟನ ಕೊನೆಯಿಂದ ಶುರುಮಾಡಲು
ತೀರ್ಮಾನಿಸಿದ್ದೇನೆ.

ನೀತಿಪಾಠ:
ಹಣೆಬರಹ ಏನ್ ಮಾಡಿದ್ರೂ ಬದಲಾಗಲ್ಲ ಗುರೂ....:

****

ಪತ್ನಿ: ಈ ಮನೇಲಿ ನಾನ್ ಇರಬೇಕು ಇಲ್ಲ ನಿಮ್ಮ್ ಅಮ್ಮ ಇರಬೇಕು..

ಗಂಡ: ಇಬ್ರೂ ಬೇಕಾಗಿಲ್ಲ..!! ಕೆಲಸದವಳು ಒಬ್ಬಳಿದ್ರೆ ಸಾಕು..

****

ತಿಮ್ಮ : ಅಲ್ಲೋ ಕಾಲಿಗೆ ಹಾವು ಕಚ್ಚಿ
ಇನ್ನೂ ಐದು ನಿಮಿಷ ಆಗಲಿಲ್ಲ.
ಅಷ್ಟರಾಗ ಹೆಂಗ ಸತ್ತ..?

ಗುಂಡ : ತಲೀಗೆ ವಿಷ ಏರತ್ತೋ
ಏನೋ ಅಂತ....
ಕುತ್ತಿಗೀಗೆ ಜೋರಾಗಿ ಹಗ್ಗ ಬಿಗಿದಿದ್ವಿ..!

**

ಪೊಲೀಸ್ : ಈ ಕುರಿ ಮರಿ ಯಾರದು?
ಜೈಲರ್ : ಕುರಿ ಯಾರದು ಅಂತ ಗೊತ್ತಿಲ್ಲ ... ಆದರೆ ಮರಿಯಾರದು ಅಂತ ಗೊತ್ತು
ಪೋಲೀಸ್ : ಮಾರಿ ಯಾರದು?
ಜೈಲರ್ : ಮರಿ ಕುರಿದು ಸಾರ್ ....

ಟೀಚರ್ : ಲೇ ಗುಂಡ, ಇವತ್ತು ಯಾಕೊ ಅರ್ಧ ಪ್ಯಾoಟ್ ಹಾಕ್ಕೊoಡು ಬoದಿದ್ದಿಯಾ ?

ಗುಂಡ : ಮೇಡಮ್ ಇವತ್ತು ಶನಿವಾರ ಅಲ್ವ ಅರ್ಧ ದಿನ ಮಾತ್ರ ಶಾಲೆ . ಇಡಿ ದಿನ ಇರುವಾಗ ಪೂಲ್ ಪ್ಯಾoಟ್ ಹಾಕ್ತೀನಿ .

ಟೀಚರ್: ದಯವಿಟ್ಟು ಭಾನುವಾರ ಮಾತ್ರ ಬರಬೇಡಪ್ಪ

English summary
Various jokes on Yamadharma, School,husband and wife and others. Check out Jokes for the day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X