ಈ ದಿನದ ಹಾಸ್ಯ: ರೀ ಸೈಕಲ್ ಎಂದರೆ ಏನು?
ಸೈಕಲ್ ತುಳಿದು
ಕಾಲು ನೋವಾಗಿ
ಬೈಕ್ ಬಂತು
ಬೈಕ್ ಓಡಿಸಿ
ಬೆನ್ನು ನೋವಾಗಿ
ಕಾರು ಬಂತು
ಕಾರು ಚಾಲನೆ
ರೂಢಿಯಾಗಿ
ಹೊಟ್ಟೆ ಬಂತು
ಹೊಟ್ಟೆ ಇಳಿಸಲು
ಜಿಮ್ ಸೇರಿ
ಸೈಕಲ್ ತುಳಿವ
ಕಾಲ " ಮತ್ತೆ " ಬಂತು
ಇದೇ - Recycling

ಅತ್ತೆ: ಲೇ..ನಿನಗೆ ಅಡಿಗೆ ಮಾಡಕ್ಕೆ ಬರಲ್ಲಾ ಅಂತ ಗೊತ್ತಾದಾಗ ಆಗಲೂ ನಂಗೆ ಬೇಜಾರ್ ಆಗ್ಲಿಲ್ಲ ಕಣೆ...ಆದ್ರೆ
ಹಾಲನ್ನ ಗ್ಯಾಸ್ ಮೇಲೆ ಇಟ್ಟು Sim ನಲ್ಲಿ ಇಡೆ ಅಂದ್ರೆ Sim 1 ನಲ್ಲ ಅಥವಾ Sim 2 ನಲ್ಲಾ ಅಂತ ಕೇಳ್ತಾಇದಿಯಲ್ಲಾ...ಇದು ನನ್ನ ಕೈಯಲ್ಲಿ ಸಹಿಸಿಕೊಳ್ಳಕೆ ಆಗ್ತಾ ಇಲ್ಲ ಕಣೆ🙄🙄😂😂
****
ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ನಾವು ಕಾಲಿಂದ ಯಾವುದನ್ನೂ/ಯಾರನ್ನೂ ಹೊಡೆಯೋಲ್ಲ..!!
ಇಲ್ಲಾಂದಿದ್ರೆ..ನಾವು ಫುಟ್ ಬಾಲ್ ನಲ್ಲಿ ನಂಬರ್ ಒನ್ ಆಗಿರ್ತಾ ಇದ್ವಿ..⚽!!
😜🤣😀😃😍😇😄😁
ಆದ್ರೆ ನಾವು ಬೇರೆಯವ್ರ ಕಾಲು ಎಳೆಯೋದ್ರಲ್ಲೇ ಖುಷಿ ಪಡ್ತೀವಿ..
ಅದಕ್ಕೇ ನಾವು ಕಬಡ್ಡಿಯಲ್ಲಿ ನಂಬರ್ ಒನ್ ಆಗಿರೋದು..😅😂🤣😁😆🤣😂😅🤩😍
ಜೋಕುಗಳನ್ನು ಕಳಿಸಿದವರು: ಭರತ್, ಸ್ಫೂರ್ತಿ












Click it and Unblock the Notifications