ಈ ದಿನದ ಹಾಸ್ಯ: ಫ್ಯಾಮಿಲಿ ಜೋಕು ಜೋಕಾಲಿ ನಕ್ಕುಬಿಡಿ!
ಮಗ: ಅಪ್ಪಾ ಷಡ್ಕಂದಿರು (co-brothers) ಅಂದರೆ ಯಾರಪ್ಪಾ??
ಅಪ್ಪ: ಒಂದೇ ಕಂಪನಿ ಇಂದ ಮೋಸ ಹೋದ ಇಬ್ಬರು ಗ್ರಾಹಕರು ಅಂತ ಕಣಪ್ಪಾ...
😂😂😂
****
ನಾನೊಂದು ದಿನ ಬೆಟ್ಟದ ಹಾದಿಯುದ್ದಕ್ಕೂ ನಡೆಯುತ್ತಿದ್ದೆ, ಇದ್ದಕ್ಕಿದ್ದಂತೆ ಧ್ವನಿವೊಂದು ಕೇಳಿತು.
"ನಿಲ್ಲು".
ಕೂಡಲೆ ನಿಂತೆ, ಒಂದು ದೊಡ್ಡ ಬಂಡೆಯು ಮುಂದೆ ಬಿದ್ದಿತು ... ಕೂದಲೆಳೆಯಿಂದ ಬಚಾವಾದೆ ...!
ಆ 'ಧ್ವನಿಗೆ' ಧನ್ಯವಾದ ಹೇಳುತ್ತಾ ಮುಂದುವರೆದೆ ...!
ಸ್ವಲ್ಪ ಸಮಯದ ನಂತರ, ಅದೇ ಧ್ವನಿ ಮತ್ತೇ ಬಂದಿತು, " ನಿಲ್ಲು ...!
ಮತ್ತೆ ನಿಂತೆ, ಒಂದು ಕಾರು ವೇಗವಾಗಿ ಹಾದುಹೋಯಿತು ಕೂದಲೆಳೆಯಲ್ಲಿ ಬದುಕುಳಿದೆ ...!

ಆ 'ಧ್ವನಿಗೆ' ಧನ್ಯವಾದ ಹೇಳುತ್ತಾ ಕೇಳಿದೆ.,!
ಸಹೋದರ, ಯಾರು ನೀನು ನನ್ನ ಜೀವನವನ್ನು ಮತ್ತೆ ಮತ್ತೆ ಉಳಿಸುತ್ತಿದ್ದಿಯಾ...!
ಧ್ವನಿ ಉತ್ತರಿಸಿತು: ನಿನ್ನ ಜೀವ ರಕ್ಷಿಸುವ ದೇವರು...!
ಮತ್ತೊಮ್ಮೆ ಧನ್ಯವಾದ ಹೇಳಿ ಅಳುತ್ತಾ ಕೇಳಿದೆ.
ನೀವು ಮದುವೆಯ ಸಂದರ್ಭದಲ್ಲಿ ಎಲ್ಲಿದ್ದಿರಿ ಆವಾಗ ಯಾಕೆ ಕೂಗಿ ಹೇಳಲಿಲ್ಲ?
ಅದೃಶ್ಯ ಧ್ವನಿ ಉತ್ತರಿಸಿತು: ಅವಾಗಲೂ ಕೂಗಿ ಕೂಗಿ ಹೇಳಿದೆ ಆದರೆ 'ವಾದ್ಯದ ಸದ್ದಿನಿಂದ ನೀನು ಕೇಳಿಸಿಕೊಂಡಿಲ್ಲ...!
😂😁😆😅😂😃
****
😂😂ಹಾಸ್ಯಮೇವ ಹಸತೇ😂😂
ಭಾರತದಲ್ಲಿ 1000 ಹುಡುಗರಿಗೆ 943 ಹುಡುಗಿಯರಿದ್ದಾರೆ... ಅಂದರೆ 57 ಹುಡುಗರಿಗೆ ಮದುವೆಯಾಗೋಕೆ ಹುಡುಗಿಯರೇ ಸಿಗುವುದಿಲ್ಲ....
ಈ 57 ಜನ ಹುಡುಗರೇ ಮುಂದೆ ಅಬ್ದುಲ್ ಕಲಾಂ, ವಾಜಪೇಯಿ, ರತನ್ ಟಾಟಾ, ಯೋಗಿ, ಮೋದಿ...ಗಳಂತಾಗುತ್ತಾರೆ...
ಉಳಿದ 943 ಜನ...
ಮನೆಯಲ್ಲಿ ಕುಕ್ಕರ್ 3 ಸೀಟಿ ಹೊಡೆದಾಗ ಗ್ಯಾಸ್ ಆಫ್ ಮಾಡುತ್ತಾರೆ...😂😂😂😂











Click it and Unblock the Notifications