ಹಾಸ್ಯ : ಮಾಸ್ತರ ಪ್ರಶ್ನೆ ತತ್ತಿ ಮೊದಲ, ಕೋಳಿ ಮೊದಲ?
ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ 🐓ಮೊದಲ ಬಂತೋ..?
ರಾಮ್ಯಾ: ಸರ್ ತತ್ತಿ ಬಂತ್ರಿ..
ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..?
ಮಾಸ್ತರ: ಹೇಳಪಾ, ನೀನ ಹೇಳ.
ಮಂಜ್ಯಾ: ಸರ ಮೊದಲ ಬೀರ್ 🍾ಬಂತರಿ,
ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ,
ಆಮೇಲೆ ಕೋಳಿ ಬಂತರಿ
ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ..
😀😄😜😜😂😂😂
ಟೀಚೆರ್ : ಗುಂಡ " ಗಂಡ ಬೇರುಂಢ" ಎಂದರೆ ಏನು ? ವಿವರಿಸು ?
ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.
" ಗಂಡ" "ಬೇರೆ" "ಉಂಡ "
😁😊😁😊😁😊😁😊

-ನ್ಯಾಯಾಲಯದಲ್ಲಿ-
ಜಡ್ಜ್ - ಈ ಗುಂಡನ ಎರಡೂ ಕಿವಿ ಕಟ್ ಮಾಡಿ🤕
ಗುಂಡ - ಬ್ಯಾಡಾ ಸ್ವಾಮಿ ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ..
ಜಡ್ಜ್ - ಲೇ ಹುಚ್ಚಾ ಕಿವಿ ಕತ್ತರಿಸಿದ್ರ ಕುರುಡ ಹೆಂಗ ಆಗ್ತೀ ಲೇ..⁉
ಗುಂಡ - ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ..❓
😭😵
ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ
ಹುಡುಗಿ: ಥ್ಯಾಂಕ್ಸ್
ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ
ಹುಡುಗಿ: ಥ್ಯಾಂಕ್ಸ್
ಹುಡುಗ: ಮೇಕಪ್ ಅಂತು ಖತರನಾಕ
ಹುಡುಗಿ: ಥ್ಯಾಂಕ್ಸ್ ಅಣ್ಣಾ
ಹುಡುಗ: ಆದರೂ ಎನ್ ಬಿಡವಾ ಚಂದ ಕಾಣವಲ್ಲಿ.
😂😂😂😂😂😂
ಭಿಕ್ಷುಕ : ಮಗ ತಿನ್ನಲಿಕ್ಕೆ ಏನಾದರೂ ಕೊಡು,
ಗುಂಡ : ನಿನಗೆ ಕೊಟ್ಟ್ರೆ ನನಗೆ ಏನು ಸಿಗುತ್ತೆ
ಭಿಕ್ಷುಕ : ನಿನಗೆ ಸ್ವರ್ಗ ಸಿಗುತ್ತೆ,
ಗುಂಡ : ನಿಂಗೆ ಬೆಂಗಳೂರು ಕೊಡುತ್ತಿನಿ,
ಭಿಕ್ಷುಕ : ಬೆಂಗಳೂರು ಏನು ನಿಂದಾ,
ಗುಂಡ : ಮತ್ತೆ ಸ್ವರ್ಗ ಏನು ನಿಮ್ಮಪ್ಪಂದಾ,😆😆😂😂😂












Click it and Unblock the Notifications