ಹಾಸ್ಯ : ಪತ್ನಿ ಗಂಡನನ್ನೇ ದುರುಗುಟ್ಟಿ ನೋಡಿ ಬೈದಿದ್ದೇಕೆ?
ಗಂಡ ಹೆಂಡತಿ ಊಟ ಮಾಡುತ್ತಿದ್ದರು. ಊಟ ಆದ ಕೂಡಲೇ ಗಂಡ ಎರಡೂ ತಟ್ಟೆ
ತೊಳೆದು ತಂದಿಟ್ಟ.
ಆಗ ಪತ್ನಿ ಗಂಡನನ್ನೇ ದುರುಗುಟ್ಟಿ ನೋಡಿ ,"ಎಂತ ಸಾಯುದು..ದರಿದ್ರ.. ಮರ್ಯಾದಿ ತೆಗಿತಿರಿ ಅಷ್ಟೇ" 😖😠
ಗಂಡ..ಯಾಕೆ??😳
ನಿಮಗೆ ತಲೆಸರಿ ಇಲ್ವಾ..😠 ನಾವೀಗ ಹೋಟೆಲ್ ನಲ್ಲಿ ಊಟ ಮಾಡ್ತಿದ್ದೇವೆ, ಮನೆಯಲ್ಲಲ್ಲ.. 😡😡😂😂😂😂😂
****
ಈ ಸಲ ನಾಗರಪಂಚಮಿಗೆ ಯಾರೂ ಹುತ್ತಕ್ಕೆ ಹಾಲು ಹಾಕಬೇಡಿ ಏಕೆಂದರೆ ಎಲ್ಲಾ ಹಾವುಗಳೂ
ನಂದಿನಿ
ನಾಗಿಣಿ
ನಾಗಮ್ಮ
ನಾಗಕನ್ನಿಕೆ
ಧಾರವಾಹಿಗಳಲ್ಲಿ busy ಯಾಗಿವೆ .ಹಾಗಾಗಿ ಭಕ್ತಾದಿಗಳು ಅವರವರ ಮನೆಗಳ ಟಿವಿ ಗಳಿಗೆ ಹಾಲು ಎರಿಯಬೇಕಾಗಿ ವಿನಂತಿ. 😂😂
*****
Pediatrician ...ಮಕ್ಕಳಿರಲವ್ವ ಮನೆ ತುಂಬಾ....
Orthopedician...... ಮಾನವಾ.... ಮೂಳೆ ಮಾಂಸದ ತಡಿಕೆ
Gynecologist.....ನಾನು ನೀನು ಒಂದಾದ ಮೇಲೆ /ಧರಣಿಗೆ ಗಿರಿ ಭಾರವೆ, ಗಿರಿಗೆ ಮರವು ಭಾರವೆ, ಬಳ್ಳಿಗೆ ಕಾಯಿ ಭಾರವೆ
Pulmonologist.....ಉಸಿರೇ ಉಸಿರೇ ... ನೀ ಉಸಿರ ಮರೆಯಬೇಡ
Gastroenterologist ....ತುತ್ತು ಅನ್ನ ತಿನ್ನೋಕೆ ಬೊಗಸೆ ಕುಡಿಯೋಕೆ
Dermatologist... ಈ... ಟಚಲಿ, ಏನೋ ಇದೆ

Psychologist.... ಮನಸೇ ಓ ಮನಸೇ ಎಂತಾ ಮನಸ್ಸೇ
Radiologist .... ಏನೈತಿ ಒಳಗ ಏನೈತಿ
Ophthalmologist ... ಕಣ್ಣು ಕಣ್ಣೂ ಕಲೆತಾಗ....
Cardiologist... ಹೃದಯದಲಿ ಇದೇನಿದು ನದಿಯೊಂದು ಓಡಿದೆ
General practitioner... ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
Anesthetist.. ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ
Psychiatrist ಏಕೋ ಏನೋ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೆ
ENT ಕಿವಿ ಮಾತಒಂದು.. ಹೇಳಲೆ ನಾನಿಂದು... ದಾರಿ ನಿಂತಾಗ... ಸಾಗಲೆ ಬೇಕೆಂದು .......
Dedicated to Doctors
***
ಶಾಲೆಯೊಳಗೆ ಶಿಕ್ಷಕನ ಕೈಯಲ್ಲಿದ್ದ
ತುಸು ಹೊಡೆಯುವ ಹಕ್ಕನ್ನು
ಕಸಿದುಕೊಂಡ ಮೇಲೆನೆ..
ಸ್ಟೇಷನ್ನಿನಲ್ಲಿ ಪೋಲಿಸರಿಂದ ಒದೆಸಿಕೊಳ್ಳುವವರ ಸಂಖ್ಯೆ ಹೆಚ್ಚಾಯಿತು!
****












Click it and Unblock the Notifications