ಹಾಸ್ಯ: ಕಂಡ ಕಂಡವರ ಪತ್ನಿ ಐ ಲವ್ ಯೂ ಮೆಸೇಜ್ ಕಳಿಸಿದಾಗ

ಒಂದು ಮನೆಯಲ್ಲಿ ಮಹಿಳೆಯರ ಕಿಟಿಪಾರ್ಟಿ ನಡೆಯುತ್ತಿತ್ತು. ಗಂಡಂದಿರಿಗೆ I LOVE YOU ಅಂತ ಹೇಳಿದರೆ ಎಷ್ಟು ಚೆಂದ ಅಲ್ಲ್ವಾ ಅಂತ ಮಾತು ಬಂದಿತು. ನೀವು ಆ ತರಹ ಹೇಳಿ ಎಷ್ಟು ದಿನ ಆಯ್ತು ಎಂದು ಒಬ್ಬರಿಗೊಬ್ಬರು ಕೇಳಿಕೊಂಡರು.

ಒಬ್ಬೊಬ್ಬರದೂ ಒಂದೊಂದು ತರಹದ ಉತ್ತರ ಬಂತು. ಹಾಗಾದರೆ, ಸರಿ ಈಗಲೇ ಎಲ್ಲರೂ ನಮ್ಮ ಗಂಡಂದಿರಿಗೆ ಮೆಸೇಜ್ ಕಳುಹಿಸೋಣ ಏನು ಪ್ರತಿಕ್ರಿಯೆ ಬರುತ್ತದೆ ನೋಡೋಣ.... ತುಂಬಾ ರೊಮಾಂಟಿಕ್ ಪ್ರತಿಕ್ರಿಯೆಗೆ ಬಹುಮಾನ ಅಂತ ತೀರ್ಮಾನಿಸಿದರು . ಪ್ರತಿಯೊಬ್ಬರು ತಂತಮ್ಮ ಗಂಡಂದಿರ ಮೊಬೈಲಿಗೆ

I LOVE YOU ಮೆಸೇಜ್ ಕಳುಹಿಸಿದರು.

ಸ್ವಲ್ಪ ಸಮಯದ ನಂತರ ಆ HUSBANDS ಕಡೆಯಿಂದ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಕೊಟ್ಟಿದೆ.ಓದಿ ಓದಿ

Husband 1 :
SWEETY... ತಲೆ ಕೆಟ್ಟುಗಿಟ್ಟು ಹೋಗಿಲ್ಲ ತಾನೇ ನಿನಗೆ ?

Husband 2 : ಸರಿ ಬಿಡು ಇವತ್ತೂ ಅಡುಗೆ ಮಾಡಿಲ್ವಾ

Husband 3 : Darling,
ಈ ತಿಂಗಳ ಮನೆ ಖರ್ಚಿನ ದುಡ್ಡು ಮುಗಿದೋಯ್ತಾ?

Husband 4 : ಏಕೆ ಏನಾಯ್ತು ? ಏನ್ ವಿಷಯ ?

Husband 5 : ಏನು ನೀನು ಕನಸು ಕಾಣ್ತಾ ಇದೀಯೋ,, ಅಥವಾ ನನಗೇ ಭ್ರಮೇನೋ

Husband 6:
ಮುಂದಿನ ವಾರದ ನಿನ್ನ ತಂಗಿ ಮದುವೇಗೆ ಹೊಸಾ ಒಡವೆ ಸೆಟ್ ಬೇಕಾ ?.... ಅದಕ್ಕೇ ಈ ಮಸಾಜಾ?

Husband 7 :
ಇಲ್ಲಿ ಆಫೀಸಲ್ಲಿ ನಂದೇ ನಂಗಾಗಿದೆ... ಟೆನ್ಷನ್ನಲ್ಲಿ ಸಾಯ್ತಿದೀನಿ.... ನಿಂದೊಂದು ಬೇರೆ ಗೋಳು ಏನೇ ಇದು ದರಿದ್ರದ ಮೆಸೇಜು

Husband 8 :
ಲೇ ನಿನಗೆಷ್ಟು ಸರ್ತಿ ಬಡುಕೊಂಡ್ರೂ ಆ ಕಿತ್ತೋದ್ ಸೀರಿಯಲ್ಗಳ್ನ ನೋಡೋದು ಬಿಡಲ್ವಲ್ಲೆ .... ಆ ಕಚಡಾ ನೋಡಿ ಇಂಥಾ ಮೆಸೇಜ್ ಥೂ

Husband 9:
ಹೂಂ ,,,, ಯಾರಿಗೆ ಗುದ್ದಿದೆಯೆ ನನ್ನ ಕಾರು ,, ಏನು ಒಂದೈವತ್ತು ಸಾವಿರಕ್ಕೆ ತಂದಾ ತಲೆಗೆ,,, ನನ್ ಕಾರು ಮುಟ್ಟಬೇಡ ಅಂತ ಎಷ್ಟು ಸಲ ಹೇಳಿದೀನಿ.. ಹೂಂ ಎಲ್ಲಿದೀಯ ಬೊಗಳು

Husband 10 :
ಏನ್ ತಾಯೀ ಇದು ನಿನ್ನ ಗೋಳು? ಇವತ್ತೂ, ಹುಡುಗರನ್ನ ಸ್ಕೂಲಿಂದ ನಾನೇ ಕರಕೊಂಡ್ ಬರ್ಬೇಕು ತಾನೇ ?:confounded::persevere:

ಕೊನೆಯ ಹಾಗೂ ಅದ್ಭುತ ಪ್ರತಿಕ್ರಿಯೆ.. . .. ..

Husband : 11
ಯಾರ್ರೀ ಇದು ? ನನ್ನ ಹೆಂಡತಿ ಫೋನಿಂದ ಮೆಸೇಜ್ ಕಳಿಸ್ತಿರೋದು?

*****

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+