ಹೆಂಡತಿ ಗಂಡನನ್ನು ಪ್ರೀತಿಯಿಂದ ಗೇಮ್ ಆಡಲು ಕರೆದಾಗ..
ಹೆಂಡತಿ : ರೀ ಯಾಕೋ ತುಂಬ ಬೋರ್ ಆಗ್ತಿದೆ ಒಂದು ಗೇಮ್ ಆಡೋಣ್ವಾ?
ಗಂಡ: ಏನ್ ಗೇಮ್?
ಹೆಂಡತಿ: ನೀವು ನನ್ನ ಮದುವೆ ಆಗಿಲ್ಲದಿದ್ದರೆ ಬೇರೆಯಾರನ್ನ ಮದುವೆಯಾಗಲು ಇಚ್ಚಿಸುತ್ತಿದ್ರಿ ಅಂತ ಐದು ಜನರ ಹೆಸರನ್ನು ಬರೆಯರಿ.. ನಾನು ಹಾಗೆ ನಿಮ್ಮನ್ನು ಮದುವೆ ಆಗದಿದ್ದರೆ ಯಾರನ್ನ ಮದುವೆಯಾಗಲು ಇಚ್ಚಿಸುತ್ತಿದ್ದೆ ಎಂದು ಐದು ಜನರ ಹೆಸರನ್ನು ಬರೆಯುವೆ
ಸರಿ ಇಬ್ಬರು ಬರೆದರು
ಅವಳು ಬರೆದದ್ದು
1) ಹೃತಿಕ್ ರೋಶನ್
2) ಶಾರೂಖ್ ಖಾನ್
3)ರಣ್ಬೀರ್ ಕಪೂರ್
4) ರಣ್ವೀರ್ ಸಿಂಗ್
5) ಸಲ್ಮಾನ್ ಖಾನ್

ಅವನು ಬರೆದ್ದದ್ದು
1) ಪಕ್ಕದ್ಮನೆ ಪದ್ಮ
2) ಎದುರುಮನೆ ಮೀನ
3) ನಿನ್ನ ಚಿಕ್ಕಪ್ಪನ ಮಗಳು ಶಾಲಿನಿ
4) ನಿನ್ನ ಫ್ರೆಂಡ್ ರೂಪ
5) ನಿನ್ನ ಸಂಬಂಧಿ ಆರತಿ
ಅದಕ್ಕೇ ಹೇಳೋದು..ಗಂಡಸರು ಎಷ್ಟು ಸಿಂಪಲ್ ಅಂತಾ..., ಕೈಗೆ ಎಟಕೋದನ್ನೇ ಆಸೆ ಪಡೋದು ಹೆಂಗಸರ ತರಹ ಅಲ್ಲ...
--
ಮದುಮಗ: ಪುರೋಹಿತರೇ ಮದುಮಗಳನ್ನು ಬಲಕ್ಕೆ ಕೂರಿಸ್ಬೇಕೋ, ಎಡಕ್ಕೆ ಕೂರಿಸ್ಬೇಕೋ ?
ಪುರೋಹಿತರು: ಎಲ್ಲೋ ಒಂದ್ಕಡೆ ಕೂರ್ಸಪ್ಪಾ ! ಕೊನೆಗೆ ಅವಳು ಕೂರೋದು ನಿನ್ ತಲೆ ಮೇಲೇನೇ !
(ವಾಟ್ಸಾಪ್ ನಲ್ಲಿ ಬಂದಿದ್ದು)











Click it and Unblock the Notifications