ಅಪ್ಪನ ಜತೆಯಲ್ಲಿರುವ ಆಂಟಿ ಯಾರು?

ಹುಡುಗನೊಬ್ಬ ಆಡಿ ಕ್ಯೂ 7 ಕಾರಿನಲ್ಲಿ ಬಂದಿಳಿದವನೇ ಡೇಟಿಂಗ್ ಗಾಗಿ ಬಂದು ಕಾದಿದ್ದ ಹುಡುಗಿ ಹತ್ತಿರ ನಿಂತ.

ತುಂಬ ಗಂಭೀರನಾಗಿ, ನಾನು ನಿನಗೊಂದು ನಿಜ ಹೇಳ್ಬೇಕು, ನನಗೀಗಾಗಲೇ ಮದುವೆ ಆಗಿದೆ.

ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದ ಹುಡುಗಿ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು, ಕಿವಿಯಲ್ಲಿ ಮೆಲು ದನಿಯಲ್ಲಿ ಹೇಳಿದಳು

"ಅಯ್ಯೋ, ಈ ಕಾರು ನಿನ್ನದಲ್ಲ ಅಂದುಬಿಡ್ತಿಯೇನೋ ಎಂದು ಗಾಬರಿ ಆಗಿಬಿಟ್ಟಿದ್ದೆ."

*****

ಎಲ್ಲ ಗಂಡಸರು ಧೈರ್ಯವಂತರೇ.

ಆದರೆ ಹಾರರ್ ಸಿನಿಮಾಗಳಿಗೆ ಸ್ವಲ್ಪವೂ ಹೆದರದವರು, ಮೊಬೈಲ್ ಫೋನಿನಲ್ಲಿ ಹೆಂಡತಿಯ ಐದು ಮಿಸ್ ಕಾಲ್ ನೋಡಿದರೆ ಮೂರ್ಛೆ ಹೋಗುವಷ್ಟು ಗಾಬರಿಯಾಗ್ತಾರೆ.

*****

ಚೆಕ್ ಮೇಟ್ ಅಂದರೆ ಏನು ಗೊತ್ತಾ?

ಹೆಂಡತಿಗೆ ಗಂಡ ಹೇಳ್ತಾನೆ: ಥೇಟ್ ನಿನ್ನ ಥರಾನೇ ಇರೋಳನ್ನು ನಾನು ನೋಡಿದೆ.

ಆಗ ಹೆಂಡತಿ ಕೇಳ್ತಾಳೆ: ಅವಳೇನು ತುಂಬ ಸುಂದರವಾಗಿದ್ದಳಾ?

ಆ ಸನ್ನಿವೇಶದಲ್ಲಿ ಇಲ್ಲ ಅನ್ನುವುದಕ್ಕೂ ಆಗಲ್ಲ, ಹೌದು ಅನ್ನುವುದಕ್ಕೂ ಆಗಲ್ಲ.

ಇದೇ ಚೆಕ್ ಮೇಟ್.

******

ಎಲ್ಲ ಗಂಡಸರೂ ಉದಾರಿಗಳು ಮತ್ತು ಹೆಂಗಸರು ತುಂಬ ಸ್ವಾರ್ಥಿಗಳು

ಉದಾಹರಣೆ ಬೇಕಾ?

ಬಹಳ ಹೆಂಗಸರು ಅಪರಿಚಿತ ಗಂಡಸರಿಗೆ ಸಹಾಯ ಮಾಡೋದು ಇಷ್ಟವಾಗಲ್ಲ.

ಆದರೆ, ಎಲ್ಲ ಗಂಡಸರೂ ಯಾವುದೇ ಸಮಯದಲ್ಲಿ ಅಪರಿಚಿತ ಹೆಂಗಸರಿಗೆ ಸಹಾಯ ಮಾಡಲು ತಯಾರಾಗಿರ್ತಾರೆ.

*****

ಸುನಾಮಿ ಬಂದಾಗ ಒಬ್ಬ ವ್ಯಕ್ತಿ ಅದರಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡು ಬಿಟ್ಟ.

ಒಂದು ರಾತ್ರಿ ಭರ್ತಿ ಕುಡಿದು ಬಂದು ಸಮುದ್ರ ತೀರದಲ್ಲಿ ನಿಂತಿದ್ದಾಗ ಅಲೆಗಳು ಅವನ ಪಾದಗಳನ್ನು ಸ್ಪರ್ಶಿಸುತ್ತಿತ್ತು.

ಸ್ವಲ್ಪ ಹೊತ್ತಿಗೆ ಸಮುದ್ರದ ಕಡೆ ತಿರುಗಿ ಜೋರಾಗಿ ಕೂಗಿ ಹೇಳಿದ:

ಅಲೆಗಳು ಬಂದು ಎಷ್ಟು ಸಲ ಪಾದ ಮುಟ್ಟಿದರೂ ಅವಳನ್ನು ಮಾತ್ರ ವಾಪಸ್ ಕರೆದುಕೊಳ್ಳಲ್ಲ. ನಿನ್ನದೇ ತಪ್ಪು, ಅವಳನ್ನು ಸಂಭಾಳಿಸಿಕೋ.

*****
ದಂಪತಿ ಬಾವಿ ಪೂಜೆಗೆ ಅಂತ ಹೋದರು.

ಮೊದಲಿಗೆ ಪತಿ ತನ್ನ ಮನಸ್ಸಿನಲ್ಲಿದ್ದ ಬೇಡಿಕೆಯನ್ನು ಹೇಳಿ, ಸ್ವಲ್ಪ ಬಗ್ಗಿ ಬಾವಿಯೊಳಗೆ ಹಣವನ್ನು ಹಾಕಿದ.

ಆ ನಂತರ ಹೆಂಡತಿ ಸ್ವಲ್ಪ ಹೆಚ್ಚೇ ಬಗ್ಗಿ ಹಣ ಹಾಕುವುದರೊಳಗೆ ಬಾವಿಯೊಳಗೆ ಬಿದ್ದೇ ಹೋದಳು.

ಆಗ ಗಂಡ ಜೋರಾಗಿ ಕಿರುಚಿದ: ಪ್ರಾರ್ಥನೆ ಮಾಡಿದ್ದು ಇಷ್ಟು ಬೇಗ ಫಲಿಸಿಬಿಡುತ್ತಾ?

*****

ಹೆಂಡತಿ ಗಂಡನಿಗೆ ಫೋನ್ ಮಾಡಿದಳು.

ಗಂಡ: ನಾನು ಆಫೀಸಿನಲ್ಲಿದ್ದೀನಿ. ಬಿಡುವಿಲ್ಲದಷ್ಟು ಕೆಲಸ. ನೀನೇನು ಮಾಡ್ತಿದೀಯಾ?

ಹೆಂಡತಿ: ನಾನು ಕೆಎಫ್ ಸಿಯಲ್ಲಿದ್ದೀನಿ. ನಿಮ್ಮ ಹಿಂದಿನ ಟೇಬಲ್ ನಲ್ಲೇ ನಾವು ಕೂತಿದ್ದೀವಿ. ನಿಮ್ಮ ಮಕ್ಕಳು ಕೇಳ್ತಿದ್ದಾರೆ: ಅಪ್ಪನ ಜತೆಯಲ್ಲಿದ್ದಾರಲ್ಲ ಆ ಆಂಟಿ ಯಾರು ಅಂತ.

ವಾಟ್ಸಾಪ್ ಜೋಕ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+