ಅಮ್ಮಾ.. ಅಮ್ಮಾ.. ನನಗೂ ಆರು ಹೆಂಡತಿಯರು ಬೇಕು
ಅರಸರ ಕಾಲದ ಸಿನಿಮಾ ನೋಡುತ್ತಿದ್ದ ಆರು ವರ್ಷದ ಮಗ, ಅಮ್ಮಾ ನನಗೂ ಆರು ಹೆಂಡತಿಯರು ಬೇಕು. ಒಬ್ಳು ನಂಗೆ ಅಡುಗೆ ಮಾಡ್ತಾಳೆ, ಇನ್ನೊಬ್ಳು ನಂಗೆ ಪಾಠ ಹೇಳ್ ಕೊಡ್ತಾಳೆ..
ಮತ್ತೊಬ್ಳು ನನ್ನ ಜೊತೆ ವಾಕಿಂಗ್ ಬರ್ತಾಳೆ, ಇನ್ನೊಬ್ಳು ಸ್ನಾನ ಮಾಡಿಸ್ತಾಳೆ..
ಅಮ್ಮ: ಹಾಗಾದ್ರೆ, ರಾತ್ರಿ ನಿನ್ನ ಜೊತೆ ಮಲಗಿಕೊಳ್ಳಲು ಅಮ್ಮ ಬೇಡ ಅಲ್ವಾ?
ಮಗು: ಆಲೋಚನೆ ಮಾಡುತ್ತಾ..ಇಲ್ಲಾ..ಇಲ್ಲಾ.. ನೀನು ನನ್ನ ಜೊತೇನೆ ಮಲಗಿಕೊಳ್ಳಬೇಕು..
ಅಮ್ಮ: ನಾನು ನಿನ್ನ ಜೊತೆ ಮಲಗಿದರೆ, ನಿನ್ನ ಆರು ಜನ ಹೆಂಡ್ತೀರಾ ಜೊತೆ ಯಾರು ಮಲಗಿಕೊಳ್ಳುತ್ತಾರೆ..
ಮಗು: ಅವರೆಲ್ಲಾ ನನ್ ಅಪ್ಪನ ಜೊತೆ ಮಲಗಿಕೊಳ್ಳಲಿ..
ಅಲ್ಲೇ ಇದ್ದ ಅಪ್ಪ ಇದನ್ನು ಕೇಳಿಸಿಕೊಂಡು ಸಂತೋಷದಿಂದ ತನ್ನಲ್ಲೇ ಹೇಳ್ಕೋತಾನೆ.. 'ಶಹಬ್ಬಾಸ್ ಮಗನೇ, ಮಗಾ ಅಂದ್ರೆ ನೀನು ಕಣೋ'
ಗಂಡ ಮತ್ತು ಹೆಂಡತಿ ವಾಕಿಂಗ್ ಹೋಗುತ್ತಿರುತ್ತಾರೆ. ಬಜಾರಿನ ಅಂಗಡಿಯಲ್ಲೊಂದು ಬೋರ್ಡ್ ತಗಲಾಕಿರುತ್ತೆ.
ಕಾಂಚೀಪುರಂ ಸಿಲ್ಕ್ :Rs. 25/-
ಧರ್ಮಾವರಂ ಸಿಲ್ಕ್: Rs. 20/-
ನೈಲಾನ್ ಸಾರಿ : Rs. 15/-
ಕಾಟನ್ ಸಾರಿ : Rs. 10/-
ಇದನ್ನು ನೋಡಿದ ಹೆಂಡತಿ ಖುಷಿಯಿಂದ ಅಲ್ನೋಡ್ರೀ.. ನನಗೆ ಐನೂರು ರೂಪಾಯಿ ಕೊಡಿ, ಐವತ್ತು ಸೀರೆ ತಗೋತೀನಿ.
ಗಂಡ: ಪೆದ್ದೀ..ಪೆದ್ದಿ.. ಅದು ಇಸ್ತ್ರಿ ಅಂಗಡಿ ಕಣೇ... (ಕೃಪೆ: ತುಳು ವಾಟ್ಸಪ್ ಗ್ರೂಪ್)












Click it and Unblock the Notifications