ಹೆಂಡ್ತಿ ಚಾಪೆ ಕೆಳಗೆ ನುಗ್ಗಿದ್ರೆ, ಗಂಡ ರಂಗೋಲಿ ಒಳಗೆ ನುಗ್ಬಿಟ್ಟ
ದಿನಕ್ಕೆರಡು ಬಾರಿ ಹೆಂಡತಿಯಿಂದ ಕರೆ ಬರುತ್ತಿದ್ದ ಗಂಡನಿಗೆ, ಹೆಂಡತಿಯಿಂದ ಒಂದು ಮೆಸೇಜ್ ಬಂತು..
ಹೆಂಡತಿ: ಆಫೀಸ್ ನಿಂದ ಮನೆಗೆ ಬರಬೇಕಾದರೆ, ತರಕಾರಿ ತರೋದನ್ನು ಮರೀಬೇಡಿ.. ಸವಿತಾ ನಿಮಗೊಂದು ಹಾಯ್ ಹೇಳಿದ್ದಾಳೆ...
ಗಂಡ: ಯಾರದು ಸವಿತಾ?
ಹೆಂಡತಿ: ಯಾರೂ ಇಲ್ಲ.. ಮೆಸೇಜ್ ನೀವು ಓದಿದೀರಾ ಇಲ್ವಾ ಎಂದು ಕನ್ಫರ್ಮ್ ಮಾಡೋಕೆ, ಹಾಗೆ ಬರೆದೆ... ಕನ್ಫರ್ಮ್ ಆಯ್ತು ಬಿಡಿ..
ಅದಾದ ಸ್ವಲ್ಪ ಹೊತ್ತಿನಲ್ಲಿ.. ಗಂಡ ಅದಕ್ಕೆ ರಿಪ್ಲೈ ಮೆಸೇಜ್ ಮಾಡಿದ..
ಗಂಡ: ಆದರೆ, ನಾನು ಸವಿತಾ ಜೊತೆಗೇ ಇದ್ದೇನೆ.. ಯಾವ ಸವಿತಾ ಬಗ್ಗೆ ನೀನು ಹೇಳುತ್ತಿರುವುದು..
ಹೆಂಡತಿ: ಎಲ್ಲಿದ್ದೀರಾ ನೀವು?
ಗಂಡ: ತರಕಾರೀ ಮಾರುಕಟ್ಟೆಯಲ್ಲಿ..
ಹೆಂಡತಿ: ಅಲ್ಲೇ ಇರಿ ಬಂದೆ..

ಮಾರ್ಕೆಟಿಗೆ ಬಂದ ಹೆಂಡತಿ, ಮತ್ತೆ ಮೆಸೇಜ್ ಮಾಡ್ತಾಳೆ..
ಹೆಂಡತಿ: ಮಾರ್ಕೆಟ್ ನಲ್ಲಿ ಇದ್ದೀನಿ.. ನೀವು ಎಲ್ಲಿದ್ದೀರಾ?
ಗಂಡ: ನಾನು ಆಫೀಸ್ ನಲ್ಲೇ ಇದ್ದೀನಿ.. ಹೇಗೂ ಮಾರ್ಕೆಟಿಗೆ ಬಂದಿದ್ದೀಯಲ್ಲಾ.. ಏನು ತರಕಾರಿ ಬೇಕೋ ಅದನ್ನು ತಗೋ..
ಹೆಂಡತಿ: ಮನೆಗೆ ಬನ್ನಿ ಮಾಡ್ತೀನಿ..
(ಕೃಪೆ: ವಾಟ್ಸಾಪ್)












Click it and Unblock the Notifications