ನನ್ನ ಮದುವೆಯ ಸಂದರ್ಭದಲ್ಲಿ ಯಾಕೆ ಕೂಗಿ..ಕೂಗಿ ಹೇಳಲಿಲ್ಲ?
ಅವನೊಂದು ದಿನ ಬೆಟ್ಟದ ಹಾದಿಯುದ್ದಕ್ಕೂ ನಡೆಯುತ್ತಿದ್ದ, ಇದ್ದಕ್ಕಿದ್ದಂತೆ ಧ್ವನಿವೊಂದು ಅವನಿಗೆ ಕೇಳಿಸಿತು.
"ನಿಲ್ಲು"
ಅವನು ಕೂಡಲೇ ನಿಂತ, ಒಂದು ದೊಡ್ಡ ಬಂಡೆಯು ಮುಂದೆ ಬಿದ್ದಿತು ... ಕೂದಲೆಳೆಯಿಂದ ಬಚಾವಾದ ...!
ಆ 'ಧ್ವನಿಗೆ' ಧನ್ಯವಾದ ಹೇಳುತ್ತಾ ಮುಂದುವರೆದ ...!
ಸ್ವಲ್ಪ ಸಮಯದ ನಂತರ, ಅದೇ ಧ್ವನಿ ಮತ್ತೆ ಕೇಳಿಸಿತು..
" ನಿಲ್ಲು ...!
ಮತ್ತೆ ನಿಂತ.. ಒಂದು ಕಾರು ವೇಗವಾಗಿ ಹಾದುಹೋಯಿತು ಕೂದಲೆಳೆಯಲ್ಲಿ ಬದುಕುಳಿದ ...!

ಆ 'ಧ್ವನಿಗೆ' ಧನ್ಯವಾದ ಹೇಳುತ್ತಾ ಅವನು ಕೇಳಿದ...
ಸಹೋದರ, ಯಾರು ನೀನು ನನ್ನ ಜೀವನವನ್ನು ಮತ್ತೆ ಮತ್ತೆ ಉಳಿಸುತ್ತಿದ್ದೀಯಾ...!
ಧ್ವನಿ ಉತ್ತರಿಸಿತು.. ನಾನು ನಿನ್ನ ಜೀವ ರಕ್ಷಿಸುವ ದೇವರು...!
ಮತ್ತೊಮ್ಮೆ ಧನ್ಯವಾದ ಹೇಳಿ ಅಳುತ್ತಾ ಅವನು ಕೇಳಿದ...
ನೀನು ನನ್ನ ಮದುವೆಯ ಸಂದರ್ಭದಲ್ಲಿ ಎಲ್ಲಿದ್ದೆ... ಆವಾಗ ಯಾಕೆ ಕೂಗಿ "ನಿಲ್ಲು" ಹೇಳಲಿಲ್ಲ?
ಅಶರೀರವಾಣಿ ಉತ್ತರಿಸಿತು... ಆವಾಗಲೂ ಕೂಗಿ ಕೂಗಿ ಹೇಳಿದೆ.. ಆದರೆ 'ವಾದ್ಯದ' ಸದ್ದಿನಿಂದ ನೀನು ಕೇಳಿಸಿಕೊಂಡಿಲ್ಲ...!
(ವಾಟ್ಸಾಪ್)












Click it and Unblock the Notifications