ತಡರಾತ್ರಿ ಗಂಡನಿಗೆ ಹೆಂಡ್ತಿ ಮೇಲೆ ಸಿಟ್ಟು ಬಂದಿದ್ಯಾಕೆ?
ರಾತ್ರಿಯಿಡೀ ಜಗಳವಾಡಿ, ರಾತ್ರಿ ಅನ್ಯೋನ್ಯವಾಗಿರುವ ಗಂಡ ಮತ್ತು ಹೆಂಡತಿ ಮಲಗಿದ್ದಾಗ, ತಡರಾತ್ರಿ ಹೆಂಡತಿಯ ಮೊಬೈಲ್ ಗೆ ಬೀಪ್ ಸೌಂಡ್ ಬಂತು. ಇದನ್ನು ಕಂಡು ಸಿಟ್ಟಾದ ಗಂಡ,
ಗಂಡ : ಇಷ್ಟು ತಡರಾತ್ರಿ ಯಾರು ನಿನಗೆ ಬ್ಯೂಟಿಫುಲ್ ಎಂದು ಮೆಸೇಜ್ ಮಾಡಿರುವವನು? (ಗಣೇಶನ ಹಬ್ಬಕ್ಕೆ ನಾಲ್ಕು ದಿನ ರಜಾ ಬೇಕಿತ್ತು)
ಇದರಿಂದ ಗಾಬರಿಯಾದ ಹೆಂಡತಿ ಮೊಬೈಲ್ ಚೆಕ್ ಮಾಡಿ, ಮೊದ್ಲು ಕನ್ನಡಕ ಹಾಕ್ಕೊಳ್ಳಿ.. ಅದು ಬ್ಯೂಟಿಫುಲ್ ಅಲ್ಲಾ.. ಬ್ಯಾಟರಿ ಫುಲ್ ಎಂದಾಗ ಗಂಡ ನಿದ್ದೆಗೆ ಜಾರಿದ...
-------
ಇಬ್ಬರು ಪ್ರೇಮಿಗಳು ಫೋನಿನಲ್ಲಿ ಮಾತಾನಾಡಿಕೊಳ್ಳುತ್ತಿದ್ದರು..
ಹುಡುಗ: ಮನೆಬಿಟ್ಟು ಓಡಿ ಬಾ.. ನಾವೆಲ್ಲಾದ್ರೂ ದೂರ ಹೋಗೋಣಾ..
ಹುಡುಗಿ : ನನಗೆ ಒಬ್ಬಳೇ ಬರೋಕೆ ಭಯ ಆಗುತ್ತೆ..
ಹುಡುಗ: ಭಯ ಆದ್ರೆ.. ನಿನ್ ಜೊತೆ ನಿನ್ನ ತಂಗೀನೂ ಕರ್ಕೊಂಡು ಬಾ..
--------
ತಿಪ್ಪಯ್ಯ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ.. ಅವನ ಸೀಟ್ ಹತ್ತಿರ ಸುಂದರವಾದ ಹದಿಹರೆಯದ ಹುಡುಗಿಯೊಬ್ಳು ಬಂದು..
ಹುಡುಗಿ: ನಾನು ನಿಮ್ಮ ಪಕ್ಕದ ಸೀಟಿನಲ್ಲಿ ಕೂತ್ಕೋಬಹುದಾ?
ತಿಪ್ಪಯ್ಯ: ವೈ ನಾಟ್, ನಿಮ್ದೇ ಸೀಟ್ ಅನ್ಕೊಳ್ಳಿ.. ಅಂದು ಪಕ್ಕದಲ್ಲಿ ಕೂರ್ಸಿಕೊಂಡ (ರಚಿತಾಗೆ ಪೊಲೀಸಪ್ಪ 5ಸಾವಿರ ನೀಡಿದ್ದು ಯಾಕೆ)
ಹುಡುಗಿ : ನೀರು ಕುಡೀಬಹುದಾ?
ತಿಪ್ಪಯ್ಯ: ನಿಮಗೆ ಇಲ್ದೇ ಇರೋದಾ, ತಗೊಳ್ಳಿ..
ಹುಡುಗಿ : ಅಣ್ಣಾ, ನೆಕ್ಸ್ಟ್ ಸ್ಟೇಷನ್ ಯಾವ್ದು?
ತಿಪ್ಪಯ್ಯ : ನಮ್ಮಪ್ಪ ನನ್ ಮೆದುಳಿನಲ್ಲಿ ಜಿಪಿಎಸ್ ಇಟ್ಟಿದ್ದಾನಾ.. ಎದ್ದೋಗಮ್ಮ.. ಮೊದ್ಲು (ಅಣ್ಣಾ ಅಂದ್ ಬಿಟ್ಲಲ್ಲಾ.. ಆ ಸಿಟ್ಟು)












Click it and Unblock the Notifications