ಆತ ಹುಡುಗಿಯಿಂದ ಹೊಡೆಸಿಕೊಳ್ಳುವಂತ ತಪ್ಪು ಮಾತು ಏನಾಡಿದ್ದ?
ಗುಂಡ ಮತ್ತು ತಿಮ್ಮ ರಾಕ್ಲೈನ್ ಮಾಲ್ ಸುತ್ತಿ ಹೊರಬಂದು ಲೋಕಾಭಿರಾಮವಾಗಿ ಮಾತನಾಡುತ್ತಾ ನಿಂತಿದ್ದರು. (ಕುಂದಾಪ್ರ ಕನ್ನಡದ ಜೋಕ್ಸ್)
ಆಗ ಪಕ್ಕದಲ್ಲೇ ಇದ್ದ ಹುಡುಗಿ ಗುಂಡನ ಕೆನ್ನೆಗೆ ರ್‍ರಪ್ ಎಂದು ಬಾರಿಸಿ ಹೊರಟು ಹೋದಳು.. ಅವಳ್ಯಾಕೆ ಹೊಡೆದಿದ್ದು ಗೊತ್ತಾ..
..
ಗುಂಡ ತನ್ನ ಸ್ನೇಹಿತ ತಿಮ್ಮನಲ್ಲಿ ಹೇಳುತ್ತಿದ್ದ ' ಮಾಲ್ ಸಖತ್ತಾಗಿದೆ' ಎಂದು.
----
ಹೆಂಡತಿ : ರೀ.. ನಿಮಗೆ ರಾಣಿ ಅನ್ನೋ ಮೊದಲನೇ ಹೆಂಡತಿ ಇದ್ದಳೂಂತ ಮದುವೆಗೆ ಮುಂಚೆ ಯಾಕೆ ಹೇಳಲಿಲ್ಲ.
ಗಂಡ : ಹೇಳಿದ್ನಲ್ಲ ಚಿನ್ನ
ಹೆಂಡತಿ : ಯಾವಾಗ?
ಗಂಡ : ನಿನ್ನನ್ನು ರಾಣಿ ಹಾಗೆ ನೋಡ್ಕೋತೀನಿ ಅಂತ ಹೇಳಿದ್ನಲ್ಲಾ..
-----
ದೇವಾಲಯದ ಹೊರಗೆ ಕತ್ತೆಯೊಂದು ಕೂತಿತ್ತು.. ಭಕ್ತಾದಿಗಳ ಪ್ರಾರ್ಥನೆಯನ್ನು ನೋಡಿ, ತಾನೂ ದೇವರನ್ನು ಪ್ರಾರ್ಥಿಸಲಾರಂಭಿಸಿತು..
ಕತ್ತೆಯ ಭಕ್ತಿಗೆ ಮೆಚ್ಚಿದ ಭಗವಂತ, ಪ್ರತ್ಯಕ್ಷನಾಗಿ..
ಭಗವಂತ : ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ಏನು ವರ ಬೇಕು ಕೇಳು? (ನನ್ನ ತಿಥಿ ಮಾಡಿ ಎರಡು ಒಬ್ಬಟ್ಟು ತಾ)
ಕತ್ತೆ: ಇನ್ನೊಂದು ಜನ್ಮದಲ್ಲೂ ನನ್ನನ್ನು ಕತ್ತೆಯನ್ನಾಗಿ ಮಾಡು..
ಭಗವಂತ: ಎರಡೆರಡು ಬಾರಿ ಕತ್ತೆ ಜನ್ಮ ನೀಡಲು ಸಾಧ್ಯವಿಲ್ಲ, ಬೇರೆ ಏನಾದರೂ ಕೇಳು..
ಕತ್ತೆ: ಹಾಗಾದಾರೆ ನನ್ನನು ಗಂಡನನ್ನಾಗಿ ಮಾಡು.
ಭಗವಂತ: ಎರಡೆರಡು ಬಾರಿ ಕತ್ತೆಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ ತಾನೇ, ಎಂದು ಭಗವಂತ ಅದೃಶ್ಯನಾದ.












Click it and Unblock the Notifications