ಜಿಯೋ ಸಿಮ್ ಮಾರೋ ಅಂಗಡಿ ಮಾಲೀಕನಿಗೆ ಏನಾಯ್ತು ಗೊತ್ತಾ?
ಇನ್ನೂ ಬಾಗಿಲು ತೆರೆಯದ ರಿಲಯನ್ಸ್ ಡಿಜಿಟಲ್ ಜಿಯೋ ಸಿಮ್ ಮಾರೋ ಅಂಗಡಿಯ ಹೊರಗೆ ಜನರು ದೊಡ್ಡದಾದ ಸಾಲಿನಲ್ಲಿ ನಿಂತಿದ್ದರು.
ವ್ಯಕ್ತಿಯೊಬ್ಬ ಪದೇ ಪದೇ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದ.
ಅವನನ್ನು ಸಾಲಿನಲ್ಲಿ ನಿಂತವರು ಹಿಂದಕ್ಕೆ ಎಳೆಯುತ್ತಲೇ ಇದ್ದರು. (ತಡರಾತ್ರಿ ಗಂಡನಿಗೆ ಹೆಂಡ್ತಿ ಮೇಲೆ ಸಿಟ್ಟು)
5-6 ಬಾರಿ ಎಳೆದ ನಂತರ ಅವನು ಜೋರಾಗಿ ಚೀರಿದ...
"ಲೇ ನನ್ನ ಮಕ್ಳಾ.. ನೀವು ಹೀಗೇ ನನ್ನಾ ಎಳಿತಾ ಇದ್ರೆ.. ನಾನು ಅಂಗಡಿ ಹೆಂಗ್ರೋ ಓಪನ್ ಮಾಡೋದು!! ಮನೆಗೆ ಹೋಗ್ತೀನಿ ಅಷ್ಟೇ..ಅಂದಾಗ.. ರಾಜಮರ್ಯಾದೆಯಲ್ಲಿ ಕ್ಯೂನಲ್ಲಿ ನಿಂತವ್ರು ಅವನನ್ನು ಮುಂದೆ ಹೋಗೋಕೆ ಬಿಟ್ರು!!
---
ನಮ್ ಬಸ್ಯಾ.. ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದ. ದಿನಾಲೂ ಸ್ಟ್ಯಾಂಡಿಗೆ ಬರುತ್ತಿದ್ದ ಒಂದು ಹುಡುಗಿಗೆ ಗಟ್ಟಿ ಮನಸ್ಸು ಮಾಡಿ 'ಐ ಲವ್ ಯು' ಎಂದ.
ಸಿಟ್ಟಾದ ಹುಡುಗಿ ಜೋರಾಗಿ ಬಸ್ಯಾ ಕೆನ್ನೆಗೆ ಒಂದು ಬಿಟ್ಲು...
ಹುಡುಗಿ : ಎಲ್ಲಿ ಇನ್ನೊಮ್ಮೆ ಹೇಳು ನೊಡೊಣ?
ಇದಕ್ಕೆ ಸಿಟ್ಟಾದ ಬಸ್ಯಾ ತಿರುಗಿ ಎರಡು ಹುಡುಗಿ ಕೆನ್ನೆಗೆ ಬಿಟ್ಟ....
ಬಸ್ಯಾ: ಹೇಳಿದ್ದು ಕೇಳ್ಸಿಲ್ಲಾಂದ್ರೆ ಮತ್ಯಾಕ್ ಹೊಡೆದೆ?
------
ಗಂಡ, ಹೆಂಡತಿ ಉಂಡು ಮಲಗೋಕೆ ಹೋದ್ರು.. ಆಗ
ಹೆಂಡತಿ: ಅಲ್ಲಾರೀ.. ನಾವು ಮದುವೆಯಾದ ಹೊಸದರಲ್ಲಿ ನಾನು ಮಾಡಿದ ಊಟವನ್ನು ನೀವು ನನಗೆ ಜಾಸ್ತಿ ತಿನ್ಸಿ, ನೀವು ಕಮ್ಮಿ ತಿನ್ತಾ ಇದ್ರೀ..
ಗಂಡ: ಹೌದು., ಏನೀವಾಗ?
ಹೆಂಡತಿ: ಮತ್ತೆ ಈಗ ನೀವು ಜಾಸ್ತಿ ತಿಂತೀರಾ, ನಂಗೆ ಕಮ್ಮಿ ಕೊಡ್ತೀರಾ?
ಗಂಡ: ಹೌದು ಕಣೇ.. ಈಗ ನಿನ್ನ ಅಡುಗೆ ಚೆನ್ನಾಗಿ ಇರುತ್ತೆ..












Click it and Unblock the Notifications