ಈ ರಾತ್ರಿ ಮನೇಲಿ ಯಾರೂ ಇಲ್ಲ.. ನಾವಿಬ್ಬರೇ, ಏನ್ ಮಾಡೋಣ
ನಲವತ್ತೈದರ ನಂತರ ಗಂಡ ಮತ್ತು ಹೆಂಡತಿಯ ಪ್ರೇಮ...
ಹೆಂಡತಿ: ಈ ರಾತ್ರಿ ಮನೆಯಲ್ಲಿ ಯಾರೂ ಇಲ್ಲ.. ನಾವು ಇಬ್ಬರೇ... ಏನು ಮಾಡುವುದು?
ಗಂಡ: ಅನ್ನ, ಮಜ್ಜಿಗೆ ಹುಳಿ ಮಾಡು. ಸಾಧ್ಯವಾದರೆ ನಾಲ್ಕೈದು ಹಪ್ಪಳ ಕರಿ....
--
ಗುಂಡ: ಮುಂಜ ಮುಂಜಾನೆ ದೇವರು ಏನ್ ಕೆಟ್ಟ ಬುದ್ಧಿ ಕೊಟ್ನೋ ಏನೋ?
ತಿಮ್ಮ: ಯಾಕ್ಲೇ.. ಏನಾತು?
ಗುಂಡ : ಹೆಂಡತಿಗೆ ಹೆಲ್ಪ್ ಮಾಡೋಣಾಂತಾ ಫ್ರಿಡ್ಜ್ ಒಳಗ ಇಟ್ಟ ಹಾಲು ಕಾಯಿಸಲಿಕ್ಕೆ ಗ್ಯಾಸ್ ಮ್ಯಾಲಿಟ್ಟೆ. ಹದಿನೈದು ನಿಮಿಷವಾದ್ರೂ ಯಾಕ್ ಉಕ್ಕವಲ್ತು ಅಂತ ನೋಡಿದ್ರಾ.. ಅದು ಇಡ್ಲಿ ಹಿಟ್ಟು.
ತಿಮ್ಮ : ಆಮೇಲೆ..?
ಗುಂಡ : ಆಮೇಲೆ ಏನು ಮಣ್ಣೂ.. ಹೆಂಡತಿ ಏಳೋದ್ರಾಗ ಮನಿ ಬಿಟ್ಟವಾ ಇನ್ನೂ ಹೊರಗ ಅಡ್ದ್ಯಾಡಲಿಕ್ಕೆ ಹತ್ತೀನಿ..
--

ಗುಂಡ: ಪಾರ್ಕ್ ನಲ್ಲಿ ಅಡ್ಡಾಡ್ ಕೊಂಡಿರೋ ಪ್ರೇಮಿಗಳ ಬಗ್ಗೆ ಏನ್ ಹೇಳ್ತೀಯಾ?
ತಿಮ್ಮ : ಅವಳು ಕೈ ಹಿಡಿದಾಗ ಪಾರ್ಕಿನಲ್ಲಿ ನಡೆದು..ನಕ್ಕಿದ್ದೇ ನಕ್ಕಿದ್ದು... ಅವಳು ಕೈ ಕೊಟ್ಟಾಗ ಬಾರ್ ನಲ್ಲಿ ಕುಡಿದು ಕಕ್ಕಿದ್ದೇ ಕಕ್ಕಿದ್ದು..
(ವಾಟ್ಸಾಪ್ ನಲ್ಲಿ ಬಂದಿದ್ದು)












Click it and Unblock the Notifications