ಜೋಕು: ಸರಳ ಪ್ರಶ್ನೆಗಳಿಗೆ ಗುಂಡನ 'ಕಚಗುಳಿ' ಉತ್ತರ
ಟೀಚರ್ : ' You spilled Coffee over the table. '
Translate this sentence in your mother tongue.
ಗುಂಡ : Mother tongue means the language my mom use, right mam?
ಟೀಚರ್ : Right.
ಗುಂಡ : ನಿನ್ ಕೈ ಮುರ್ದ್ ಹೋಗಿದ್ಯೇನೋ ನಾಲಾಯಕ್? ಯಾವತ್ತಾದ್ರೂ ಒಂದ್ ಕೆಲ್ಸ ನೆಟ್ಟಗ್ ಮಾಡಿದ್ದೀಯಾ? ಎಲ್ಲಾ ನಿಮ್ಮಪ್ಪನ್ ಮೇಲೇ ಹೋಗಿದ್ದಿಯಾ. ಒಂದಾದ್ರೂ ನನ್ ಬುದ್ದಿ ಕಲ್ತಿಲ್ಲ. ಈಗ ಯಾವನ್ ಬಂದು ಇದನ್ನ ಕ್ಲೀನ್ ಮಾಡ್ತಾನೆ? ನಿಮ್ಮಪ್ಪ ಯಾವಾಗ ಬರ್ತಾರೋ ಬರ್ಲಿ. ಅವ್ರ್ ಕೈಲೇ ವಾಶ್ ಮಾಡ್ಸ್‌ಕೋತೀನಿ...
ಟೀಚರ್ : 😳😳😳😳
ಜೋಕು: ಟಿವಿ ರಿಮೋಟ್ ಅಂದರೆ ಗಂಡಸರಿಗೆ ಯಾಕೆ ಇಷ್ಟ?****
ಟೀಚರ್ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು.
ಗು0ಡ : Birla Cement ಮೇಡಮ್.
ಟೀಚರ್ : ಯಾಕೆ.
ಗು0ಡ : ಇದರಲ್ಲೀ ಜೀವ ಇದೆ.
****
ಟೀಚರ್ : ನೀವು ಚೆನ್ನಾಗಿ ಓದಿ ದೇಶಕ್ಕೆ ಒಳ್ಳೆ ಹೆಸರು ತನ್ನಿ.
ಗು0ಡ : ಯಾಕೆ ಟೀಚರ್ INDIA ಅನ್ನೋ ಹೆಸರು ಚೆನ್ನಾಗಿಲ್ವಾ.😀😀😀
***
ಟೀಚರ್ : ಆಪರೇಷನ್ ಮಾಡುವಾಗ doctor ಯಾಕೆ mask ಹಾಕ್ತಾರೆ.
ಗು0ಡ : ಆಪರೇಷನ್ ಫೈಲ್ ಆದ್ರೆ ಗುರ್ತು ಸಿಗಬಾರದು ಅಂತ😀😀😀
ಟೀಚರ್ : ನಾವು ಬದುಕ ಬೇಕಾದರೆ ಆಮ್ಲಜನಕ ತುಂಬಾ ಮುಖ್ಯ. ಇದನ್ನು 4 ಶತಮಾನಗಳ ಮುಂಚೆ ಕಂಡುಹಿಡಿಯಲಾಯಿತು.
ಸಚ್ಚಿ : ಸದ್ಯ , ನಾನು ಆ ಕಾಲದಲ್ಲಿ ಹುಟ್ಟಲಿಲ್ಲ. ಇಲ್ಲಾಂದರೆ ಸತ್ತು ಹೋಗ್ತಾ ಇದ್ದೆ .
😂😂😂😂😂
****
ಟೀಚರ್ : ಎಲೆಕ್ಟ್ರಿಸಿಟಿ ಇಲ್ಲದೆ ಹೋಗಿದ್ರೆ, ಏನಾಗುತ್ತಿತ್ತು ?
ಗುಂಡ : ರಾತ್ರಿಯಲ್ಲಿ ಕ್ಯಾಂಡಲ್ ಹಿಡ್ಕೊಂಡು ಟಿವಿ ನೋಡಬೇಕಾಗಿತ್ತು😂😂😂😂
ಟೀಚರ್ : ನಿಮ್ಮ ತಂದೆಯ ಹೆಸರೇನು ಮಗು?
ಗುಂಡ : ಡ್ಯಾಡಿ,
***
ಟೀಚರ್ : 1 ಬಾಳೆ ಹಣ್ಣನ್ನು ೫ ಮಂದಿ ಹೇಗೆ ತಿಂತಾರೆ ?
ಗುಂಡ : ಬಾಯಿಂದ
***
ಟೀಚರ್ : ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳೋ ಗುಂಡ.
ಗುಂಡ :- 1, ,2, ,4 ,5 ,6 ,7 ,8 ,9 ,10, ಆಯ್ತು ಟೀಚರ್.
ಟೀಚರ್ :- ಮೂರು ಎಲ್ಲೋ?
ಗುಂಡ :- ಮೂರು ಸತ್ತೋಗಿದೆ ಟೀಚರ್.
ಟೀಚರ್ :- ಯಾರೋ ಹೇಳಿದ್ದು.?
ಗುಂಡ :- ನೆನ್ನೆ ಪೇಪರ್‌ನಲ್ಲಿ ಬಂದಿತ್ತು ಟೀಚರ್,
ರಸ್ತೆ ಅಪಘಾತದಲ್ಲಿ ಮೂರು ಸಾವು ಅಂತ.😜😂😂😂😂😂😂
😂😂😂😂😎😎😎😎😀😛🙏












Click it and Unblock the Notifications