ಜೋಕ್ಸ್: ಹಲ್ಲಿಲ್ಲದ ನಾಯಿ ಕಚ್ಚಿದರೆ ಏನ್ ಮಾಡ್ತೀರಾ?

ತಿಮ್ಮ: ನಾಯಿ ಕಚ್ಚಿದರೆ ಏನು ಮಾಡುತ್ತೀರಾ?
ಡಾಕ್ಟರ್ : ಇಂಜಕ್ಷನ್ ಕೊಡುತ್ತೇನೆ.
ತಿಮ್ಮ: ಹಲ್ಲಿಲ್ಲದ ನಾಯಿ ಕಚ್ಚಿದರೆ?
ಡಾಕ್ಟರ್ : ಸೂಜಿ ಇಲ್ಲದ ಸಿರಿಂಜ್ ನಿಂದ ಇಂಜಕ್ಷನ್ ಕೊಡುತ್ತೇನೆ, ಮುಠಾಳ.. ಗೆಟೌಟ್
--
ಗುಂಡ: ಅಮ್ಮಾ, ಪರೀಕ್ಷೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪೆನ್, ಪೆನ್ಸಿಲ್, ಕಂಪಾಸ್ ಬಾಕ್ಸ್ ಎಲ್ಲಾ ಇಟ್ಟುಕೊಂಡಿದ್ದೇನೆ.
ಅಮ್ಮ : ಗುಡ್ ಮಗನೇ.
ಗುಂಡ: ಒಂದು ತಯಾರಿ ಮಾತ್ರ ಬಾಕಿ ಇದೆಯಮ್ಮಾ?
ಅಮ್ಮ: ಏನದು?
ಗುಂಡ : ಪರೀಕ್ಷೆಗೆ ಓದುವುದು...
---
ಮರಿಗುಂಡ ಎಷ್ಟು ಹೇಳಿದರೂ ಕ್ರಿಕೆಟ್ ಆಡುವುದನ್ನು ಬಿಡುತ್ತಿರಲಿಲ್ಲ. ಬರೀ ಕ್ರಿಕೆಟ್ ನಲ್ಲಿ ಕಾಲ ಕಳೆಯುತ್ತಿದ್ದ. ಮರಿಗುಂಡನಿಗೆ ಏನಾದರೂ ಆಸೆ ತೋರಿಸಿ ಓದುವಂತೆ ಮಾಡಲು ಗುಂಡ ನಿರ್ಧರಿಸಿದ.

ಗುಂಡ: ಮಗನೇ, ಚೆನ್ನಾಗಿ ಓದಿ ಪಾಸಾಗು. ನಿನಗೆ ಒಳ್ಳೆ ಗಿಫ್ಟ್ ಕೊಡುತ್ತೇನೆ.
ಮರಿಗುಂಡ: ಏನ್ ಗಿಫ್ಟ್ ಕೊಡುತ್ತೀಯಾ ಅಪ್ಪ?
ಗುಂಡ : ಸೈಕಲ್ ಕೊಡಿಸ್ತೀನಿ
ಮರಿಗುಂಡ : ಫೇಲಾದ್ರೆ?
ಗುಂಡ: ಹತ್ತು ಸೈಕಲ್ ಕೊಡಿಸ್ತೀನಿ
ಮರಿಗುಂಡ: ಫೇಲಾದ್ರೆ ಹತ್ತು ಸೈಕಲ್ ಕೊಡಿಸ್ತೀಯಾ..ಯಾಕೆ?
ಗುಂಡ : ಸೈಕಲ್ ಶಾಪ್ ಇಡೋಕೆ.. ರಾಸ್ಕಲ್..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+