ಡಾಕ್ಟರ್ ಅಮಲಿನಲ್ಲೇ ಕೇಳಿದರು, ನೀವು ತೆಗೆದುಕೊಳ್ಳಲೇ ಇಲ್ಲ...
ಇವರು ಸ್ವಲ್ಪ ಎಡಕ್ಕೆ ಅವರು ಒಂಚೂರು ಬಲಕ್ಕೆ ಹೋಗಬೇಕಾಗಿತ್ತು....
ಆದರೆ ಹಾಗೆ ಆಗಲಿಲ್ಲ.
ಇವರ ಕಾರಿನ ಎಡಭಾಗ ಅವರ ಕಾರಿನ ಬಲಭಾಗಕ್ಕೆ ಉಜ್ಜಿ ಬಿಟ್ಟಿತು.
ಇಬ್ಬರೂ ಕೆಳಗೆ ಇಳಿದರು.
ಇಬ್ಬರ ಕಾರಿಗೂ ಸಾಕಷ್ಟು ಹಾನಿಯಾಗಿತ್ತು. ಇಬ್ಬರೂ ಗಣ್ಯರೇ ಕಿತ್ತಾಡಲಿಲ್ಲ.
ಓಹ್... I am sorry. ನೀವು ಡಾಕ್ಟರ್ ಮುರಳೀಧರ್...? ಯಾ... ನೀವು ಲಾಯರ್ ವಿಶ್ವನಾಥ...?
ಪರಸ್ಪರ ಹಸ್ತಲಾಘವ ನಂತರ ನಿಯಮ ಪಾಲನೆ ಅನುಸಾರ ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿದ ಲಾಯರ್, ಪೊಲೀಸರು ಬರಲು ಇನ್ನೂ ನಲವತ್ತು ನಿಮಿಷವಾದರೂ ಬೇಕು.. ಗೊಣಗಿದರು..

ಡಾಕ್ಟರ್ ಕೂಡ ಚಡಪಡಿಸಿದರು...
ಸುಮ್ಮನೆ ಟೈಂ ವೇಸ್ಟ್ ಏಕೆ... ಅದೂ ಒಳ್ಳೆ ಸ್ಕಾಚ್ ಇರುವಾಗ ನಸು ನಕ್ಕರು ಲಾಯರ್.
ಬಾಟಲ್ ಗ್ಲಾಸ್ ಹೊರಗೆ ಬಂತು... ಡಾಕ್ಟರ್ ಐದು ಪೆಗ್ ಏರಿಸಿಯೂ ಆಯಿತು..
ನೀವು ತೆಗೆದುಕೊಳ್ಳಲೇ ಇಲ್ಲ...ಸ್ವಲ್ಪ ಅಮಲಿನಲ್ಲೇ ಕೇಳಿದರು ಡಾಕ್ಟರ್.
ಪರ್ವಾಗಿಲ್ಲ ಬಿಡಿ...
ಪೊಲೀಸರ ಅಮಲು ಪರೀಕ್ಷೆ ಮುಗಿಯಲಿ... ಆಮೇಲೆ ತೆಗೆದುಕೊಳ್ಳುತ್ತೇನೆ...
(ವಾಟ್ಸಾಪ್)












Click it and Unblock the Notifications