ಕೊರೊನಾ ಲಸಿಕೆ ಹಾಕಿಸಿಕೊಂಡಿಯಾ ಎಂದು ಗಂಡ, ಪತ್ನಿಯನ್ನು ಕೇಳಿದಾಗ
ಕೊರೊನಾ ಮತ್ತು ಕೊರೊನಾ ಲಸಿಕೆಯ ವಿಚಾರದಲ್ಲಿ ಸಾಮಾಜಿಕ ತಾಣದಲ್ಲಿ ಹಲವು ಜೋಕ್ಸ್ ಗಳು ಹರಿದಾಡುತ್ತಿವೆ. ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಒಂದೆರಡು ಜೋಕ್ಸ್ ಹೀಗಿದೆ:
ಅಪ್ಪಟ ಕನ್ನಡದಲ್ಲಿ ದಿನಸಿ / ಸಾಮಾನುಗಳ ಹೆಸರು ಹೇಳಿ ಖರೀದಿಸಿದರೆ ಶೇ. 30 ರಿಯಾಯಿತಿ ಎಂದು. ಸಾಹಿತ್ಯ ಪ್ರೇಮಿಯೊಬ್ಬ ತನ್ನ ಅಂಗಡಿ ಮುಂದೆ ಬೋರ್ಡ್ ಹಾಕಿಕೊಂಡಿದ್ದ. ಆ ಅಂಗಡಿಗೆ ತಿಮ್ಮ ಹೋದ.
ಅಂಗಡಿಯವ: ಅಲ್ಪ ಮಾತ್ರವೂ ಇಂಗ್ಲಿಷ್ ಬಳಸದೇ ಏನಾದರೂ ಖರಿದಿಸಿದವರಿಗೆ ಶೇ. 30 ರಿಯಾಯಿತಿ ಕೊಡಲಾಗುವುದು ಎಂದ.
ತಿಮ್ಮ: 'ಸೂಕ್ಷ್ಮಾತಿ ಸೂಕ್ಷ್ಮ ವಿಷಾಣು ಆಗಮನ ನಿರ್ಗಮನ ಅವರೋಧ ಮುಖೋಷ್ಟನ್ಯಾಸಿಕಾಧಿ ರಕ್ಷಾಣಾರ್ಥ ಕರ್ಣದ್ವಯಸಮರ್ಥಿತ ದ್ವಿವಸ್ತ್ರ ಪಟ್ಟಿಕಾ' ಕೊಡಿ.
ಅಂಗಡಿಯವ: ತಲೆ ಚಚ್ಚಿಕೊಂಡು, ಕೇಳಿದ ಅದೇನು ಇಂಗ್ಲೀಷ್ ನಲ್ಲೆ ಬೊಗಳೋ ಶೇ. 50 ರಿಯಾಯಿತಿ ಕೊಡ್ತೇನೆ.
ತಿಮ್ಮ: ಮಾಸ್ಕ್ ಕೊಡಿ

ಕಚೇರಿಗೆ ಹೋಗಿದ್ದ ಗಂಡ, ತನ್ನ ಹೆಂಡತಿಗೆ ಫೋನ್ ಮಾಡಿದ.
ಗಂಡ: ಕೋವಿಡ್ ಇಂಜಕ್ಷನ್ ಹಾಕಿಸಿಕೊಂಡಿಯಾ?
ಹೆಂಡತಿ: ಹೌದು, ಹಾಕಿಸಿಕೊಂಡೆ.
ಗಂಡ: ಮತ್ತೆ ಇಂಜಕ್ಷನ್ ಹಾಕಿಸಿಕೊಂಡ ಫೋಟೋ ಫೇಸ್ ಬುಕ್ ನಲ್ಲಿ ಇನ್ನೂ ಹಾಕಿಲ್ಲಾ?
ಹೆಂಡತಿ: ಇನ್ನೂ ಇಲ್ಲಾ.. 30 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಎಂದು ಅನೌನ್ಸ್ ಮಾಡುತ್ತಾರಲ್ವಾ, ಆಮೇಲೆ ಹಾಕುತ್ತೇನೆ.












Click it and Unblock the Notifications