ಏನ್ರೀ..ನಂಗೆ 40ವರ್ಷವಾದ್ರೂ ನಿಮ್ ಫ್ರೆಂಡ್ ಏನ್ ಹೇಳ್ತಾನೆ ಗೊತ್ತಾ!
ಹೆಂಡತಿ: ಏನ್ರೀ.. ನಿಮ್ಮ ಫ್ರೆಂಡ್ ನನಗೆ ನಲವತ್ತು ವರ್ಷವಾದರೂ, ತುಂಬಾ ಸುಂದರವಾಗಿ ಕಾಣಿಸುತ್ತೀರಾ ಅಂತಾನೆ.. ಹೌದೇನ್ರೀ.. ನಾನು ಚೆನ್ನಾಗಿ ಕಾಣಿಸ್ತೀನಾ?
ಗಂಡ: ಯಾರು ಹಾಗೆ ಹೇಳಿದ್ದು ..ಆ ಸುರೇಶನಾ..
ಹೆಂಡತಿ: ಹೌದು, ನಿಮಗೆ ಹೇಗೆ ಗೊತ್ತಾಯ್ತು?
ಗಂಡ: ಲೇ.. ಅವನು ಚಿನ್ನದ ವ್ಯಾಪಾರಿ ಕಣೇ.. ವ್ಯಾಪಾರ ಆಗಬೇಕೂಂದ್ರೆ ನಿನ್ನ ಅಮ್ಮನಿಗೂ ಹಾಗೇ ಹೇಳ್ತಾನೆ..
----
ಹೆಂಡತಿಗೆ ಮೈಹುಷಾರಿರಲಿಲ್ಲ ಎಂದು ಗಂಡ ಡಾಕ್ಟರ ಬಳಿ ಆಕೆಯನ್ನು ಕರೆದುಕೊಂಡು ಹೋದ..
ಡಾಕ್ಟರ್ ಹೆಂಡತಿಯ ಬಾಯಿಗೆ ಥರ್ಮಾಮೀಟರ್ ಹಾಕಿ ಬಾಯಿ ಮುಚ್ಕೋ ಎಂದ..
ಹೆಂಡತಿಯ ಸೈಲೆನ್ಸ್ ನೋಡಿ.. ಗಂಡನಿಗೆ ಕುತೂಹಲ ತಡೆದುಕೊಳ್ಲಲಾಗದೇ ಡಾಕ್ಟರನ್ನು ಕೇಳಿಯೇ ಬಿಟ್ಟ..
ಈ ಧರ್ಮಾಮೀಟರ್ ಬೆಲೆಯೆಷ್ಟು.. ನಾನೊಂದು ಖರೀದಿಸಬೇಕು..
---
ಗಂಡ: ನನ್ನಲ್ಲಿ ಏನು ಇಷ್ಟವಾಗಿ ನನ್ನನ್ನು ಮದುವೆಯಾಗಲು ಒಪ್ಪಿಕೊಂಡೆ?
ಹೆಂಡತಿ: ಮದುವೆಗೆ ಮುಂಚೆ, ಒಂದೆರಡು ಬಾರಿ ನಮ್ಮನೆ ಬಾಲ್ಕನಿಯಿಂದ ನಿಮ್ಮನ್ನು ನೋಡಿದ್ದೆ.
ಗಂಡ: ಏನು?
ಹೆಂಡತಿ: ನೀವು ಬಟ್ಟೆ ಒಗೀತಾ ಇದ್ದದ್ದು.. ಪಾತ್ರೆ ತೊಳೀತಾ ಇದ್ದಿದ್ದು..












Click it and Unblock the Notifications