ಹೆಂಡತಿ ಕೈಗೆ ನನ್ನ ಕೂದಲು ಸಿಗಬಾರದು ..ಏನಾದ್ರೂ ಮಾಡ್ಕೋ..
ಗುಂಡ ಕಟ್ಟಿಂಗ್ ಶಾಪ್ ಗೆ ಹೋದ..
ಗುಂಡ: ಹೇರ್ ಕಟ್ಟಿಂಗ್ ಮಾಡಪ್ಪಾ..
ಅಂಗಡಿಯವ: ಯಾವ ಸ್ಟೈಲ್ ಮಾಡ್ಲಿ ಸಾರ್ ?
ಮಣಿ: ಏನಾದ್ರೂ ಮಾಡಪ್ಪಾ.. ಒಟ್ಟಿನಲ್ಲಿ ನನ್ನ ಕೂದಲು ಹೆಂಡತಿ ಕೈಗೆ ಸಿಗದಿದ್ರೆ ಸಾಕು..
--
ರೈಲು ಗುದ್ದಿ 99 ಜನ ಸತ್ತುಹೋದರು..
ಅದೃಷ್ಟವಶಾತ್ ಒಬ್ಬ ವ್ಯಕ್ತಿ ಉಳಿದುಕೊಂಡ, ಟಿವಿಯವರು ಅವನನ್ನು ಸಂದರ್ಶಿಸಿದರು..
TV : ಈ ಅಪಘಾತ ಹೇಗಾಯಿತು ಸಾರ್..?
ಅವನು : ಅಧಿಕಾರಿಗಳ ಬೇಜವಾಬ್ದಾರಿ ಪ್ರಕಟಣೆಯಿಂದ ಹೀಗಾಯಿತು
TV : ಏನದು ಪ್ರಕಟಣೆ?
ಅವನು : ಕೆಲವೇ ಕ್ಷಣಗಳಲ್ಲಿ ರೈಲು platform ಐದರಲ್ಲಿ ಬರಲಿದೆ ಅಂತ ಪ್ರಕಟಿಸಿದರು.. ಆಗ ಐದನೇ platformನಲ್ಲಿದ್ದ ಜನ, ಹೆದರಿ ಓಡಿ ಹೋಗಿ ರೈಲು ಹಳಿ ಮೇಲೆ ನಿಂತರು, ಆದರೆ ರೈಲು platform ಮೇಲೆ ಬರದೆ ಹಳಿ ಮೇಲೆ ಬಂದು ಗುದ್ದಿದೆ ಎಲ್ಲರೂ ಹೋಗಿಬಿಟ್ರು...
TV : ಮತ್ತೆ..ನೀವೊಬ್ಬರು ಹೇಗೆ ಉಳ್ಕೊಂಡ್ರಿ?
ಅವನು : ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹಳಿ ಮೇಲೆ ಮಲಗಿದ್ದೆ.. ಪ್ರಕಟಣೆ ಕೇಳಿ plotformಗೆ ಬಂದು ಮಲಗಿದೆ ಸಾರ್...
--
ಒಂದು ಮುದುಕಿ ದಿನಾಲು ಕಂಡಕ್ಟರಿಗೆ ಬಾದಾಮಿ, ಗೋಡಂಬಿ, ಕಾಜು ತಿನ್ನೋಕೆ ಕೊಡ್ತಿರ್ತಾಳೆ.....
ಕಂಡಕ್ಟರ್: ಅಜ್ಜಿ ನೀನು ದಿನಾಲು ನಂಗೆ ತಿನ್ನೋಕೆ ಗೋಡಂಬಿ , ಬಾದಾಮಿ,ಕಾಜು ಕೊಡ್ತಿಯಲ್ಲಾ..ಅಷ್ಟೊಂದು ಪ್ರೀತಿನಾ ನನ್ಮೇಲೆ?
ಅಜ್ಜಿ : ಹಂಗಲ್ಲ ಮಗ.. ನನ್ನ ಬಾಯಲ್ಲಿ ಹಲ್ಲಿಲ್ಲ ನೋಡು ಬರೀ ಚೀಪ್ತಿನಿ ಆಗ ಉಳಿದದ್ದನ್ನ ಸುಮ್ನೆ ಬಿಸಾಕೊಕೆ ಮನಸ್ಸಾಗಲ್ಲ..
(ವಾಟ್ಸಾಪ್ ಜೋಕ್ಸ್)












Click it and Unblock the Notifications