ಸ್ನಾನ ಮಾಡಿ ಹೊರ ಬರುತ್ತಿದ್ದ ಪತ್ನಿಗೆ ರಪ್ಪನೆ ಬಾರಿಸಿದ ಪತಿ
ಗುಂಡಿ ಸ್ನಾನ ಮಾಡಿ ಹೊರಬರುತ್ತಿದ್ದಳು. ಅವಳನ್ನೇ ನೋಡುತ್ತಿದ್ದ ಪತಿ ಗುಂಡನನ್ನು ನೋಡಿ, ಗುಂಡಿ ಕೇಳ್ತಾಳೆ..
ಗುಂಡಿ: ರೀ..ಯಾಕ್ರೀ.. ಯಾಕೆ ಹಾಗೆ ನೋಡ್ತಾ ಇದ್ದೀರಾ?
ಗುಂಡ: ಹತ್ತಿರ ಬಂದು ರಪ್ಪನೆ ಹೆಂಡತಿಯ ಕೆನ್ನೆಗೆ ಬಾರಿಸುತ್ತಾನೆ. (ರಚಿತಾಗೆ ಪೊಲೀಸಪ್ಪ 5ಸಾವಿರ ನೀಡಿದ್ದು ಯಾಕೆ)
ಗುಂಡಿ: ಯಾಕ್ರೀ ಏನಾಯ್ತು?
ಗುಂಡ: ನಂಗೇಂತ ಎತ್ತಿಟ್ಟಿದ್ದ ಬಿಸಿನೀರಿನಲ್ಲಿ ಸ್ನಾನ ಯಾಕೇ ಮಾಡ್ದೆ ನೀನು??
-----
ಆತ್ಮೀಯ ಸ್ನೇಹಿತರಾದ ಗುಂಡ ಮತ್ತು ತಿಮ್ಮ ಲೋಕಾಭಿರಾಮವಾಗಿ ಕಬ್ಬನ್ ಪಾರ್ಕ್ ನಲ್ಲಿ ಸುತ್ತುತ್ತಾ ಹರಟೆ ಹೊಡೆಯುತ್ತಿದ್ದರು. ಅಲ್ಲಿ ಕೈಕೈ ಹಿಡಿದುಕೊಂಡು ಸುತ್ತಾಡುತ್ತಿರುವ ಲವರ್ಸ್ ಗಳನ್ನು ನೋಡಿ..
ತಿಮ್ಮ: ಈ ಪ್ರೀತಿ ಹೇಗೆ ಶುರುವಾಗುತ್ತೆ ಕಣೋ?
ಗುಂಡ: ರಾಹು, ಕೇತು, ಶನಿ ಒಂದೇ ರಾಶಿಯಲ್ಲಿ ಒಕ್ಕರಿಸಿದಾಗ.. ಜೊತೆಗೆ ಮಂಗಳನ ಪ್ರಭಾವ ಮತ್ತು ದೈವಬಲ ಕಮ್ಮಿಯಾದಾಗ, ಪ್ರೀತಿ ಹುಟ್ಟುತ್ತೆ... ಪ್ರೀತಿಯಂತೇ..ಪ್ರೀತಿ..ಮಣ್ಣಾಂಗಟ್ಟಿ
---
ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರು ಗುಂಡನನ್ನು ಕೇಳಿದ್ರು
ಮೇಷ್ಟ್ರು : ಗುಂಡಾ.. ಕರಡಿಯ ಮೈತುಂಬಾ ಕೂದಲು ಏಕೆ ಇರುತ್ತೆ ಹೇಳು?
ಗುಂಡ : ಕಾಡಲ್ಲಿ ಕಟ್ಟಿಂಗ್ ಶಾಪ್ ಎಲ್ಲಿ ಇರುತ್ತೆ ಸಾರ್...












Click it and Unblock the Notifications