ನಾಳೆ ನನ್ನ 'ತಿಥಿ' ಮಾಡಿ ಎರಡು ಒಬ್ಬಟ್ಟು ತೆಗೆದುಕೊಂಡು ಬಾ!
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಪ್ರಖ್ಯಾತ ಹರಿಕಥಾ ವಿದ್ವಾಂಸರಾದ ರಘುನಾಥ ದಾಸರು ತಮ್ಮ ಹರಿಕಥೆಯಲ್ಲಿ ನಿರೂಪಿಸುತ್ತಿದ್ದ ಹಾಸ್ಯ ಪ್ರಸಂಗವಿದು.
ಒಂದು ಕಛೇರಿಯಲ್ಲಿ ಒಬ್ಬ ಬ್ರಿಟಿಷ್ ಅಧಿಕಾರಿಯೊಬ್ಬ ಇದ್ದ. ಆತನಿಗೆ ಕನ್ನಡ ಬರುತ್ತಿರಲಿಲ್ಲ, ಅದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ.
ಒಮ್ಮೆ ತನ್ನ ತಂದೆಯ ಶ್ರಾದ್ದದ ಸಲುವಾಗಿ ರಜೆ ಕೋರಿ ಇಂಗ್ಲಿಷ್ ನಲ್ಲಿ ಗುಮಾಸ್ತ ರಜಾ ಚೀಟಿ ಬರೆದ. ಅದು ಹೀಗಿತ್ತು 'tomarro my fathers Thithi..grant one day leave' ಎಂದು.
ಆದರೆ ಆ ಇಂಗ್ಲಿಷ್ ಅಧಿಕಾರಿಗೆ thithi ಅಂದರೇನೆಂದು ತಿಳಿಯಲಿಲ್ಲ. ಗುಮಾಸ್ತನನ್ನು ಕರೆದು ಕೇಳಿದ 'What is Thithi?
ಗುಮಾಸ್ತ : thithi ಅಂದರೆ thithi ಸರ್ ಅಂದ.
ಅಧಿಕಾರಿಗೆ ಅರ್ಥವಾಗದಿದ್ದರೂ ರಜೆ ಮಂಜೂರು ಮಾಡಿದ. ಗುಮಾಸ್ತ ಮಾರನೇ ದಿನ ತಿಥಿ ಮುಗಿಸಿಕೊಂಡು ಒಬ್ಬಟ್ಟನ್ನು ಅಧಿಕಾರಿಗೆ ಅಭಿಮಾನದಿಂದ ನೀಡಿದ. ಒಬ್ಬಟ್ಟಿನ ರುಚಿಗೆ ಅಧಿಕಾರಿ ಮಾರುಹೋದ
ಅಧಿಕಾರಿ: What is this, so nice..how to make it
ಗುಮಾಸ್ತ: This is OBBATTU.... this is poornam..this is hittu...putting..lutting...eating..
ಹರ್ಷಗೊಂಡ ಅಧಿಕಾರಿ ಹೇಳಿದ 'I will sanction two more days leave to you..make my THITHI and bring some more Obbats."
(ವಾಟ್ಸಪ್ ಜೋಕ್ಸ್)












Click it and Unblock the Notifications