ನ್ಯೂಸ್ ಚಾನೆಲ್ ಗಳ ಮಹಾ ಸುದ್ದಿಗಳು ಹೀಗೆ...ಜಸ್ಟ್ ತಮಾಷೆಗೆ

ನಿರೂಪಕಿ : ಗೋಪಾಲಸ್ವಾಮಿ ಬೆಟ್ಟದಲ್ಲಿ ಮೊನ್ನೆ ಕೋತಿಯೊಂದು ಪ್ರವಾಸಿಗನಿಂದ ಬಾಳೆಹಣ್ಣನ್ನು ಕಸಿದುಕೊಂಡು ಪರಾರಿಯಾದ ಘಟನೆಯ ಇತ್ತೀಚಿನ ಬೆಳವಣಿಗೆಗಳೇನು ಸೋಮ್? ಕೋತಿಯನ್ನು ಸೆರೆ ಹಿಡಿಯಲಾಗಿದೆಯಾ? ಬಾಳೆಹಣ್ಣನ್ನು ವಶಪಡಿಸಿಕೊಳ್ಳಲಾಗಿದೆಯಾ?

ರಿಪೋರ್ಟರ್ : ಹ್ಙಾಂ ಸೌಮ್ಯ...ಮೊನ್ನೆ ನಡೆದದ್ದು ನಿಜಕ್ಕೂ ದುರದೃಷ್ಟಕರ ಘಟನೆ ಅಂತಾನೇ ಹೇಳ್ಬಹುದು. ದೂರದ ಬೆಂಗಳೂರಿನಿಂದ ಬಂದಂಥ ಪ್ರವಾಸಿಗನೊಬ್ಬ ಸರಿಸುಮಾರು ಹನ್ನೊಂದು ಘಂಟೆಗೆ ದೇವರ ದರ್ಶನ ಮುಗಿಸಿಕೊಂಡು ಹೊರಗೆ ಬಂದು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿರುವಾಗ ಇದ್ದಕ್ಕಿದ್ದಂತೆ ಅವರಿಗೆ ಹಸಿವಾಗುತ್ತೆ. ದೃಶ್ಯದಲ್ಲಿ ಕಾಣ್ತಾ ಇದೆಯಲ್ಲ ಇದೇ ಮರದ ಅಡಿಯಲ್ಲಿ ಕುಳಿತು ಬಾಳೆಹಣ್ಣಿನ ಸಿಪ್ಪೆ ಸುಲಿಯುತ್ತಿರುವಾಗ ಅಚಾನಕ್ಕಾಗಿ ಕೋತಿಯೊಂದು.....

ನಿರೂಪಕಿ : ಫೈನ್...ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲೋದಕ್ಕೆ ಆಗುತ್ತಾ ಅಂತ. ಈಗ ಪ್ರವಾಸಿಗನ ಪರಿಸ್ಥಿತಿ ಹೇಗಿದೆ? ಕೋತಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಏನೆಲ್ಲ ಕ್ರಮ ಕೈಗೊಂಡಿದೆ? ಇದರ ಬಗ್ಗೆ ಸಾರ್ವಜನಿಕರು ಏನು ಹೇಳ್ತಾರೆ? ಇದರ ಬಗ್ಗೆ ಏನಾದ್ರೂ ಮಾಹಿತಿ ಇದೆಯಾ ಸೋಮ್?

ರಿಪೋರ್ಟರ್ : ಒಳ್ಳೆಯ ಪ್ರಶ್ನೆ ಸೌಮ್ಯ... ಕೋತಿ ಕಸಿದುಕೊಂಡು ಹೋದ ಬಾಳೆಹಣ್ಣು ಏನಿದೆ ಆ ಒಂದು ಬಾಳೆಹಣ್ಣನ್ನು ದಾರಿಯಲ್ಲಿ ನಂಜನಗೂಡಿನಲ್ಲಿ ಖರೀದಿಸಿಕೊಂಡು ಬಂದಿದ್ದರು ಅಂಥಕ್ಕಂತ ಮಾಹಿತಿ ಈಗ ಲಭ್ಯವಾಗಿದೆ ಸೌಮ್ಯ. ಕೋತಿ ಮರಕ್ಕೆ ಹತ್ತಿ ಪರಾರಿಯಾಗುವಾಗ ಇಬ್ಬರು ಗಾರ್ಡುಗಳು ಸಹ ದೂರದಲ್ಲಿ ತಿರುಗಾಡುತ್ತಿದ್ರು. ಅವರಿಂದ ಕೂಡಾ ಈ ಘಟನೆಯನ್ನು ತಪ್ಪಿಸಲಿಕ್ಕೆ ಆಗಲಿಲ್ಲ.

ನಿರೂಪಕಿ : ಒಂದು ವೇಳೆ ಕೋತಿಯಿಂದ ಬಾಳೆಹಣ್ಣನ್ನು ವಶಪಡಿಸಿಕೊಳ್ಳಲು ಆಗದೇ ಇದ್ರೆ ಅರಣ್ಯ ಇಲಾಖೆಯವರು ಆ ಪ್ರವಾಸಿಗನಿಗೆ ಪರಿಹಾರ ಕೊಡುವ ಬಗ್ಗೆ ಏನಾದ್ರೂ ಭರವಸೆ ನೀಡಿದ್ದಾರಾ ಅಂತ...

ರಿಪೋರ್ಟರ್ : ಪರಿಹಾರ ಸ್ವೀಕರಿಸಲು ಒಪ್ಪಿಬಿಟ್ರೆ ಇಂತಹ ಘಟನೆಗಳು ಮರುಕಳಿಸ್ತಾನೇ ಇರುತ್ತೆ. ಹಾಗಾಗಿ ಕೋತಿಯನ್ನು ಸೆರೆಹಿಡಿದು ಅದು ಏನು ಒಂದು ಬಾಳೆಹಣ್ಣನ್ನು ಕಸಿದುಕೊಂಡು ಹೋಗಿತ್ತು ಅದೇ ಬಾಳೆಹಣ್ಣನ್ನು ಪ್ರವಾಸಿಗನಿಗೆ ವಾಪಸ್ ಕೊಡಿಸಬೇಕು ಅಂಥಕ್ಕಂತ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರ್ತಾ ಇವೆ ಸೌಮ್ಯ.

ನಿರೂಪಕಿ : ಧನ್ಯವಾದಗಳು ನಿಮ್ಮ ಮಾಹಿತಿಗೆ ಸೋಮ್. ಹೆಚ್ಚಿನ ಮಾಹಿತಿಗೋಸ್ಕರ ಮತ್ತೆ ನಿಮ್ಮನ್ನು ಸಂಪರ್ಕಿಸ್ತೀನಿ

ರಿಪೋರ್ಟರ್ : ಒಂದ್ನಿಮಿಷ ಸೌಮ್ಯ...ಇಲ್ಲೇ ನೂರು ಮೀಟರ್ ದೂರದಲ್ಲಿ ಆ ಬಾಳೆಹಣ್ಣಿನ ಸಿಪ್ಪೆ ಸಿಕ್ಕಿದೆ ಎಂಬ ಮಾಹಿತಿ ಈಗ ಬಂದಿದೆ! ನಾನು ಆ ಸ್ಥಳಕ್ಕೆ ದೌಡಾಯಿಸ್ತಾ ಇದೀನಿ. ಆ ಎಕ್ಸ್ ಕ್ಲೂಸಿವ್ ದೃಶ್ಯಾವಳಿಗಳನ್ನು ಕೆಲವೇ ಕ್ಷಣಗಳಲ್ಲಿ ನಿಮಗೆ ತಲುಪಿಸಲು ಪ್ರಯತ್ನಿಸ್ತೀನಿ.

ನಿರೂಪಕಿ : ಫೆಂಟಾಸ್ಟಿಕ್! ವೀಕ್ಷಕರೇ, ಮಹಾಸುದ್ದಿ! ಇದು ನಿಮ್ಮ ನೆಚ್ಚಿನ ****** ಚಾನೆಲ್ ನಲ್ಲಿ ಮಾತ್ರ. ಮೊನ್ನೆ ಏನು ಕೋತಿಯೊಂದು ಬಾಳೆಹಣ್ಣನ್ನು ಕಸಿದುಕೊಂಡು ಹೋಗಿತ್ತು ಆ ಹಣ್ಣಿನ ಸಿಪ್ಪೆ ಸಿಕ್ಕಿದೆ ಎಂಬ ಸ್ಫೋಟಕ ಸುದ್ದಿ ಹೊರಬೀಳ್ತಾ ಇದೆ. ಮತ್ತಷ್ಟು ಮಾಹಿತಿ ನೀಡ್ತೀವಿ ಪುಟ್ಟ ಬ್ರೇಕ್ ನ ನಂತರ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+