ಹಾಸ್ಯ: 'ಬುಲೆಟ್' ಪ್ರೇಮಿ, 'ಹೋಂಡಾ' ಗಂಡನಾದ ನಮ್ಮ ಗುಂಡ

ತನ್ನ ಗೆಳತಿಯನ್ನು ಕೂರಿಸಿಕೊಂಡು ಊರೆಲ್ಲ ಸುತ್ತಬೇಕೆಂಬ ಆಸೆಯಿಂದ ಗುಂಡ royal enfield 350cc ಬುಲೆಟ್ ಖರೀದಿಸಿದ. ಸಂಭ್ರಮದಿಂದ ಇಬ್ಬರೂ ಸವಾರಿ ಹೊರಟರು.

ಆದರೆ, royal enfield ಸದ್ದಿನ ಕಾರಣದಿಂದಾಗಿ ಹಿಂದೆ ಕುಳಿತ ಆಕೆಯ ಮಾತುಗಳು ಗುಂಡನಿಗೆ ಕೇಳಿಸುತ್ತಿರಲಿಲ್ಲ.
ಇದರಿಂದ ತುಂಬಾ ತುಂಬಾ ಬೇಜಾರಾದ ಗುಂಡ, ಬುಲೆಟ್ ಮಾರಿ honda activa ಖರೀದಿಸಿದ. ನಂತರ ಆರಾಮಾಗಿ ಆಕೆಯ ಜೊತೆ ಸುತ್ತಾಡಿಕೊಂಡು ಕೆಲವು ದಿನಗಳ ನಂತರ ಆಕೆಯನ್ನು ಮದುವೆಯಾದ.

ಮದುವೆಯಾದ ಒಂದು ವರ್ಷದ ನಂತರ ಗುಂಡ ತನ್ನ honda activa ಮಾರಿ ಮತ್ತೆ royal enfield ಖರೀದಿಸಿದ.!!
***
ಅತಿಯಾದ ಮದ್ಯಪಾನ ವ್ಯಸನದಿಂದ ಅನಾರೋಗ್ಯಕ್ಕೊಳಗಾಗಿ ಮಂಗಳೂರಿನ ಒಂದು ಆಸ್ಪತ್ರೆಗೆ ದಾಖಲಾಗಿದ್ದ ಜಾನ್.
ಆತನ ನೊಡಿಕೊಳ್ಳುತ್ತಿದ್ದ ನರ್ಸು ಬಾಯಿಗೆ ಬಂದಂತೆ ಬೈದಳು.

Joke for the day : Whatsapp assorted jokes

ಮದ್ಯಪಾನದ ಕೆಡುಕಿನ ಬಗ್ಗೆ ಉಪದೇಶಿಸಿದಳು. ಆರೋಗ್ಯಕ್ಕಾಗುವ ಹಾನಿಯ ಕುರಿತಾಗಿ ಕೊರೆದಳು.
ಕುಡಿಯುವುದರಿಂದ ನಿನಗೆ ಏನು ಸಿಗುತ್ತದೆ, ಅದರ ಲಾಭವಾದರೂ ಏನು? ಅಂತ ನೂರೆಂಟು ಬಾರಿ ಪ್ರಶ್ನಿಸಿದಳು.

ಕನಿಕರದ ನಗೆ ನಕ್ಕು ಜಾನ್ ಹೇಳಿದ, ನೀವ್ಯಾವತ್ತೂ ಅದನ್ನು ಕುಡಿದಿಲ್ಲಾ ಅಲ್ವಾ ಸಿಸ್ಟರ್? ಹಾಗಾಗಿ ಅದರ ಸೆಳೆತದ ಬಗ್ಗೆ ನಿಮಗೆ ಗೊತ್ತಿಲ್ಲ.

ನರ್ಸ್ ರೇಗಿಬಿಟ್ಟಳು. ಅಂತದ್ದೇನಿದೆ ಅದರಲ್ಲಿ‌. ತಗೊಂಡು ಬಾ ನಾನೂ ನೋಡೇ ಬಿಡುವೆ. ಆದರೆ ನಾನು ವ್ಯಸನಿಯಾಗಲಾರೆ, ಅಂತ ಸವಾಲು ಹಾಕಿದಳು. ಜಾನ್ ಕೂಡ ಈ ಸವಾಲಿಗೆ ಒಪ್ಪಿದ.

ನರ್ಸ್, ತಾನು ಆಸ್ಪತ್ರೆಯ ಉದ್ಯೋಗಿಯಾಗಿರುವುದರಿಂದ ಹಾಗೆ ಬಹಿರಂಗವಾಗಿ ಕುಡಿಯಲು ಸಾಧ್ಯವಿಲ್ಲವೆಂದೂ, ಎಳನೀರಿನ ಬುರುಡೆಯೊಂದನ್ನು ಖಾಲಿ ಮಾಡಿ ಅದರಲ್ಲಿ ಮದ್ಯ ಬೆರಸಿ ತರುವಂತೆ ಸೂಚಿಸಿದಳು.

ಪಕ್ಕದಲ್ಲಿದ್ದ ಮದ್ಯದಂಗಡಿಗೆ ಹೋಗಿ ಮದ್ಯವನ್ನು ಕೊಂಡು, ಎಳನೀರಿನವನ ಬಳಿ ಬಂದು ಮದ್ಯವನ್ನು ಅದರಲ್ಲಿ ಬೆರಸಿಕೊಡಲು ಕೇಳಿದ.

ಸಂಶಯಾಸ್ಪದ ನೋಟ ಬೀರಿದ ಎಳನೀರಿನವನು , ಯಾರು ಆ ನರ್ಸಿಗಾ ಸರ್? ಎಂದು ಪ್ರಶ್ನಿಸಿದ‌. ಆಶ್ಚರ್ಯಚಕಿತಗೊಂಡ ಜಾನ್ ಕೇಳಿದ, ಹೌದು...ನಿಮಗೆ ಹೇಗೆ ಗೊತ್ತಾಯಿತು?

ಕುಹಕದ ನಗೆ ಬೀರುತ್ತಾ ಎಳನೀರಿನವನೆಂದ..ಕಾಂಡೆಡ್ದ್ ಉಂದು ಏಲನೇ ಬೊಂಡ ! (ಬೆಳಗಿನಿಂದ ಇದು ಏಳನೇ ಎಳ್ನೀರು)

ಜಾನ್ ಗೆ ಅರ್ಥವಾಗಿದ್ದು, ಇಷ್ಟು, ನರ್ಸ್ ಆಗ್ಲೆ 7 ಎಳ್ನೀರು ಖಾಲಿ ಮಾಡಿದ್ದಾಳೆ ಎಂದು😂😂

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+