ಹಾಸ್ಯ: ಸೀರಿಯಲ್ ಪಂಚು, ಪುಗಸಟ್ಟೆ ಪ್ರವಚನ ಜೋಂಪು

ಶೀಲಾ ಮತ್ತೆ ನೀಲಾ ತೀರ್ಥಹಳ್ಳಿ ಬಸ್ ನಿಲ್ದಾಣದ ಬಳಿ ನಿಂತಿದ್ದರು.
ಬೇಗ ಬೆಜ್ಜುವಳ್ಳಿಗೆ ಹೋಗಬೇಕೆಂದು ರಿಕ್ಷಾದಲ್ಲಿ ಹೊರಟರು...
ರಿಕ್ಷಾದವ ವೇಗವಾಗಿ ಓಡಿಸುತ್ತಿದ್ದ....
ಶೀಲಾ ನೀಲಾಳ ಬಳಿ ಕೇಳಿದ್ಲು
' ಅವನು ಮೇಲಿಂದ ಹಾರೋವಾಗ ಅವರಮ್ಮ ಇರಲಿಲ್ವ '
ಅದ್ಕೆ ನೀಲಾ
'ಪಾಪ ಅವರು ಒಳಗಿದ್ರೂ ಹೊರ ಬರೊದ್ರೊಳಗೆ ಹೀಗಾಗಿದೆ... ಆಸ್ಪತ್ರೆಯಲ್ಲಿ ಆಗೊಲ್ಲಾಂತ ಕಳಿಸಿದಾರೆ..."
ಎಂದು ಗೆಳತಿಯರು ಮಾತಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿದ ಡ್ರೈವರ್ ಏನೋ ಎಮರ್ಜೆನ್ಸಿ ಇರಬೇಕೆಂದು ಇನ್ನೂ ವೇಗವಾಗಿ ಗಾಡಿ ಓಡಿಸಿದರು..
ಅಂತೂ ಬೆಜ್ಜುವಳ್ಳಿಯಲ್ಲಿ ಅವರ ಮನೆ ಬಂತು. ಶೀಲಾ ರಿಕ್ಷಾದಿಂದ ವೇಗವಾಗಿ ಇಳಿದು ಒಳಗೆ ಹೋದಳು..ನೀಲಾ ರಿಕ್ಷಾ ಬಾಡಿಗೆ ಎಷ್ಟೆಂದು ಕೇಳಿದಳು ಅದಕ್ಕೆ ರಿಕ್ಷಾದವ
" ಪರವಾಗಿಲ್ಲ ಮತ್ತೆ ಬಂದು ಕೊಡಿ. ಮೊದಲು ಅವ್ರನ್ನ ನೋಡಿಬನ್ನಿ."
ಎಂದ..ಅದಕ್ಕ ನೀಲಾ
" ಇಲ್ಲಪ್ಪ ಈಗ್ಲೇ ತಗೋ ಧಾರಾವಾಹಿ ಶುರುವಾಗೊಕೆ ಇನ್ನೂ ಐದು ನಿಮಿಷ ಇದೆ "
ಅಂದ್ಲು...😩😜🤣😂😝😭🙏

Joke for the day popular jokes via Whatsapp
***
😑🤘ಪುಗಸಟ್ಟೆ ಪ್ರವಚನ🤘😑

ಕಾಲೇಜಲ್ಲಿ ಒಂದು ಹುಡುಗಿ ಮೇಲೆ ಒಬ್ಬ ಹುಡುಗನಿಗೆ ಲವ್ ಆಗ್ಬಿಡುತ್ತೆ. ಆತ ತನ್ನ ಪ್ರೀತಿಯನ್ನೆಲ್ಲ ಒಂದು ಹಾಳೆಯಲ್ಲಿ ಬರಿತಾನೆ "ಕೊನೆಲಿ ನೀನೂ ನನ್ನ ಪ್ರೀತಿಸ್ತಿಯ ಅನ್ನೋದಾದ್ರೆ ನಾಳೆ ಕೆಂಪು ಕಲರ್ ಚೂಡಿದಾರ ಹಾಕೊಂಡ್ ಬಾ" ಅಂತ ಬರ್ದು ತನ್ನ ಪುಸ್ತಕದಲ್ಲಿ ಇಟ್ಟು ಅವಳಿಗೆ ಕೊಡ್ತಾನೆ.

ಆದ್ರೆ ಮರುದಿನ ಅವಳು ಹಳದಿ ಡ್ರೆಸ್ ಹಾಕೊಂಡ್ ಬರ್ತಾಳೆ ಬಂದು ಆ ಪುಸ್ತಕಾನಾ ಅವನ ಕೈಗೆ ಕೊಡ್ತಾಳೆ.
ಹುಡುಗನಿಗೆ ಆಕಾಶಾನೆ ಕಳಚಿ ಬಿದ್ದಂತಾಗುತ್ತೆ ನಿರಾಶೆಯ ಮುಖ ಹೊತ್ತು ಅಲ್ಲಿಂದ ಹೊರಟು ಹೋಗುತ್ತಾನೆ.

ವರ್ಷಗಳ ನಂತರ ಅವಳಿಗೆ ಮದುವೆಯಾಗುತ್ತದೆ.

ಇವನು ಮನೆಯನ್ನ ಸ್ವಚ್ಛ ಮಾಡುವಾಗ ಆ ಪುಸ್ತಕ ತಿಜೋರಿಯ ಮೇಲಿಂದ ಕೆಳಗಡೆ ಬೀಳುತ್ತದೆ, ಆ ಪುಸ್ತಕದಿಂದ ಒಂದು ಲೆಟರ್ ಹೊರಗೆ ಬೀಳುತ್ತದೆ, ಹುಡುಗ ಅದನ್ನ ಓದುತ್ತಾನೆ ಅದರಲ್ಲಿ ಹೀಗೆ ಬರೆದಿರುತ್ತದೆ.

"ನಾನು ಕೂಡ ನಿನ್ನನ್ನು ಅಷ್ಟೇ ಪ್ರೀತಿಸುತ್ತೇನೆ ನಿನಾಗ್ಲೇ ಹೇಳಲಿ ಅಂತ ಕಾಯ್ತಿದ್ದೆ, ನಾವು ತುಂಬಾ ಬಡವರು ನನ್ನ ಹತ್ರ ರೆಡ್ ಕಲರ್ ಡ್ರೆಸ್ ಇಲ್ಲ ಅದಕ್ಕೆ ಹಳದಿ ಡ್ರೆಸ್ ಹಾಕೊಂಡ್ ಬಂದಿದೀನಿ ತಪ್ಪು ತಿಳ್ಕೋಬೇಡ. ನಮ್ಮ ತಂದೆಯನ್ನ ಮದುವೆಗೆ ಒಪ್ಪಿಸು. ನಮ್ಮ ತಂದೆ ಒಪ್ಪದಿದ್ರು ನಾನು ನಿನ್ನ ಜೊತೆಗೆ ಬರ್ತೀನಿ love you."

ಇದನ್ನ ಓದಿದ ಹುಡುಗನಿಗೆ ಅಳು ಬಂತು. ಆದ್ರೆ ಅಷ್ಟೊತ್ತಿಗೆ ಸಮಯ ಮೀರಿ ಹೋಗಿತ್ತು.

#ತಾತ್ಪರ್ಯ- ವರ್ಷದಲ್ಲಿ ಒಂದ್ಸಲನಾದ್ರು ಪುಸ್ತಕ ತೆಗೆದ್ನೋಡಿ.

😝

#ಸೂಚನೆ:- ಹಾಗಂತ ಅಂಕಲ್ಗಳು ನಿಮ್ಮ ಹಳೆ ಪುಸ್ತಕಗಳ್ನ ಹುಡುಕೊಕೆ ಹೋಗ್ಬೇಡಿ😜. ನಿಮ್ಮ ವಯಸ್ಸು ಮುಗಿದೋಗಿದೆ.🤣

ಆದಷ್ಟು ನಿಮ್ಮ ಮಕ್ಕಳ ಪುಸ್ತಕದ ಕಡೆ ಗಮನ ಕೊಡಿ ಸಾಕು,. Whatsapp, facebook ಗೀಳಲ್ಲಿ ಪುಸ್ತಕ ಓದುವುದ ಮರೆತವರ ಜಾಗೃತಿಗಾಗಿ.
...ಮುಗಿತು 🤘😑. Just for fun.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+