ಮೂರು ಗಂಡು ಎರಡು ಹೆಣ್ಣು ನೊಣ ಸಾಯ್ಸಿದ್ದೀನಿ!
ಹೆಂಡತಿ : ರೀ, ಏನ್ ಮಾಡ್ತಾ ಇದ್ದೀರಿ?
ಗಂಡ : ಇನ್ನೇನ್ ಮಾಡ್ಲಿ. ನೊಣ ಹೊಡೀತಾ ಇದ್ದೀನಿ.
ಹೆಂಡತಿ : ನೊಣ ಏನಾದ್ರೂ ಸಿಕ್ಕಿದ್ವಾ?
ಗಂಡ : ಹೂಂ ಮತ್ತೆ ಬಿಡ್ತೀನಾ. ಒಟ್ಟು 3 ಗಂಡು 2 ಹೆಣ್ಣು ನೊಣ ಹೊಡೆದು ಸಾಯಿಸಿದ್ದೀನಿ.
ಹೆಂಡತಿ : ನೊಣಗಳ ಲಿಂಗ ಹೇಗೆ ಗೊತ್ತಾಯ್ತು ನಿಮಗೆ?
ಗಂಡ : ಪೆದ್ದಿ, ಅಷ್ಟೂ ಗೊತ್ತಾಗಲ್ವಾ? ಅದು ತುಂಬಾ ಸುಲಭ.
ಹೆಂಡತಿ : ರೀ ಪೆದ್ದಿ ಗಿದ್ದಿ ಅನ್ಬೇಡ್ರಿ ತವರು ಮನೆಗೆ ಹೊರಟುಹೋಗಿ ಬಿಡ್ತೀನಿ. 3 ಗಂಡು 2 ಹೆಣ್ಣು ಹೇಗಂತ ಹೇಳಿ ಸಾಕು.
ಗಂಡ : 3 ನೊಣ ಬಿಯರ್ ಬಾಟಲ್ ಮೇಲೆ ಕುಳಿತಿದ್ದವು. 2 ನೊಣ ಫೋನ್ ಮೇಲೆ ಕುಳಿತಿದ್ದವು!
***
ಹೆಂಡ್ತಿ ಬಟ್ಟೆ ಎಷ್ಟು ಚೆನ್ನಾಗಿ ಒಗೀತಾಳೆ, ಗೊತ್ತಾ
ಸುರೇಸ : ನನ್ನ ಹೆಂಡ್ತಿ ಬಟ್ಟೆ ಎಷ್ಟು ಚೆನ್ನಾಗಿ ಒಗೀತಾಳೆ ಗೊತ್ತಾ? ಒಂದು ಕಲೆ ಇರೋದಿಲ್ಲ. ಆದರೆ, ಒಂದನ್ನು ಹೊರತುಪಡಿಸಿ.
ದಿನೇಸ : ಯಾವುದನ್ನು ಹೊರತುಪಡಿಸಿ?
ಸುರೇಸ : ನನ್ನ ಅಂಗಿಯ ಮೇಲೆ ಮೂಡಿರುವ ಲಿಪ್ ಸ್ಟಿಕ್ ಕಲೆಯೊಂದನ್ನು ಹೊರತುಪಡಿಸಿ! [ಗಂಡ ಹೆಂಡತಿ ಜೋಕ್ಸ್]












Click it and Unblock the Notifications