ವ್ಹಾಹ್! ಸರ್ಕಾರ ಉಳಿಸೋಕೆ ಹೀಗೊಂದು ಸೂಪರ್ ಡೂಪರ್ ಐಡಿಯಾ!

Recommended Video

      ಸರ್ಕಾರ ಉಳಿಸೋಕೆ ಸಿಕ್ಕಿದೆ ಒಂದು ಮಹತ್ವದ ಐಡಿಯಾ

      ಕರ್ನಾಟಕ ರಾಜಕೀಯ ದಿನೇ ದಿನೇ ರೋಚಕ ತಿರುವು ಪಡೆಯುತ್ತಿದ್ದು, ಈ ಬೃಹನ್ನಾಟಕಕ್ಕೆ ತೆರೆ ಎಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಡೂಪರ್ ಪರಿಹಾರವೊಂದು ಹರಿದಾಡುತ್ತಿದೆ!

      ತಮಾಷೆಯೊಂದಿಗೆ, ರಾಜಕೀಯ ಹುಚ್ಚಾಟಕ್ಕೆ ವಿಡಂಬನೆಯಾಗಿ ಹರಿದಾಡುತ್ತಿರುವ ಈ ಸಂದೇಶ ನಿಮಗಾಗಿ....

      ***
      ಹೀಗೆ ಮಾಡಿಬಿಡಿ

      ಮೂರೂ ಪಕ್ಷದವರು ಸೇರಿಯೇ ಸರ್ಕಾರ ರಚಿಸಿಬಿಡಿ. ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ಕೊಟ್ಟುಬಿಡಿ. ಚಿಂತೆ ಬೇಡ, ಅದಕ್ಕಾಗಿ ಹೊಸದಾಗಿ ಬೇಕಾದಷ್ಟು ಖಾತೆ ಸೃಷ್ಟಿಸಿದರಾಯಿತು. ಇರುವ ಖಾತೆಗಳನ್ನೇ ಹೀಗೆ ವಿಭಜಿಸಿ;

      Humor: Social media gives solution to Karnataka political crisis

      ಕೃಷಿ ಖಾತೆಯನ್ನು ಭತ್ತ ಸಚಿವ, ರಾಗಿ ಸಚಿವ, ಜೋಳ ಸಚಿವ, ಬೇಳೆ ಸಚಿವ, ಕುಂಬಳಕಾಯಿ ಸಚಿವ, ನಿಂಬೆ ಸಚಿವ.... ಹೀಗೆ.

      ಕೈಗಾರಿಕೆಯನ್ನು ದೊಡ್ಡ ಕೈಗಾರಿಕೆ, ಸಣ್ಣ ಕೈಗಾರಿಕೆ, ಅತಿ ಸಣ್ಣ ಕೈಗಾರಿಕೆ, ಕಂಡಾಪಟ್ಟೆ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ಚರ್ಚ್ ಕೈಗಾರಿಕೆ, ಮಸೀದಿ ಕೈಗಾರಿಕೆ....

      ಪಶು ಸಂಗೋಪನೆಯನ್ನು ದನ ಸಚಿವ, ಎಮ್ಮೆ ಸಚಿವ, ಕುದುರೆ ಸಚಿವ, ಕೋಳಿ ಸಚಿವ,ಹಂದಿ ಸಚಿವ,ನಾಯಿ ಸಚಿವ....

      ಶಿಕ್ಷಣವನ್ನು ಏಳನೇ ಕ್ಲಾಸ್ ಸಚಿವ, ಆರನೇ ಕ್ಲಾಸ್ ಸಚಿವ..... ಮೂರನೇ ಕ್ಲಾಸ್ ಸಚಿವ (ಥರ್ಡ್ ಕ್ಲಾಸ್ ಅಲ್ಲ)..... ವಿದ್ಯಾರ್ಹತೆಗೆ ಅನುಗುಣವಾಗಿಯೂ ಕೊಡಬಹುದು.

      ಆರೋಗ್ಯ ಖಾತೆಯನ್ನು ಕ್ಯಾನ್ಸರ್ ಸಚಿವ, ಮಧುಮೇಹ ಸಚಿವ,ಹುಚ್ಚರ ಸಚಿವ, ಗ್ಯಾಸ್ಟ್ರಿಕ್ ಸಚಿವ.....

      ಕ್ರೀಡಾ ಇಲಾಖೆಯಲ್ಲಿ ಕಬಡ್ಡಿ ಸಚಿವ, ಕ್ರಿಕೆಟ್ ಸಚಿವ, ಲಾಂಗ್ ಜಂಪ್ ಸಚಿವ, ಗೋಲಿ ಅಂಡ್ ಚಿನ್ನಿ ದಾಂಡ್ ಸಚಿವ....

      ನೀರಾವರಿಯನ್ನು ದೊಡ್ಡ ನೀರಾವರಿ, ಸಣ್ಣ ನೀರಾವರಿ, ಕೊಳಚೆ ನೀರಾವರಿ ಸಚಿವ....

      ಹೀಗೆ ಮಾಡಿದಾಗ ಭಿನ್ನಮತ ಎಲ್ಲಿಯದು?
      ವಿರೋಧ ಪಕ್ಷ ವೂ ಇಲ್ಲವಾಗಿ ವಿಧಾನ ಸೌಧದಲ್ಲಿ ಶಾಂತಿಯೂ ನೆಲೆಸಿ ವಾನರ ಸೇನಾ ಸಮೇತ ರಾಮ ರಾಜ್ಯ.

      ಏನಂತೀರಿ?

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+