ಸ್ನಾನ ಮಾಡುತ್ತಿದ್ದ ಸಂತಾ ಹಾಗೇ ಬಂದಿದ್ದ!
ಸಂತಾನ ಅತ್ಯಾಪ್ತ ಗೆಳೆಯ ಬಂತಾ ಒಂದು ದಿನ ಸಂತಾನನ್ನು ಭೇಟಿಯಾಗಲು ಬಂದ. ಸಂತಾನ ಹೆಂಡತಿ ಎಲ್ಲೋ ಹೋಗಿದ್ದಳು, ಆತ ಒಬ್ಬನೇ ಮನೆಯಲ್ಲಿದ್ದ.
ಬಾಗಿಲು ದಬದಬ ಬಡಿದಂತಾಗಿ ಬಾಗಿಲು ತೆಗೆದಾಗ ಸಂತಾಗೆ ಅಚ್ಚರಿ ಕಾದಿತ್ತು. ಅಲ್ಲಿ ಬಂತಾ ನಿಂತಿದ್ದ, ಫೋನ್ ಮಾಡದೆ, ಎಸ್ಎಮ್ಎಸ್ ಕಳಿಸದೆ ಹಾಗೆಯೇ ಬಂದಿದ್ದ.
ಆದರೆ, ಅದಕ್ಕಿಂತಲೂ ಅಚ್ಚರಿಭರಿತ ಆಘಾತವಾಗುವ ಸರದಿ ಬಂತಾನದಾಗಿತ್ತು. ಏಕೆಂದರೆ, ಸ್ನಾನ ಮಾಡುತ್ತಿದ್ದ ಸಂತಾ ಹಾಗೆಯೇ ಬೆತ್ತಲಾಗಿ ಬಾಗಿಲು ತೆರೆಯಲು ಓಡಿ ಬಂದಿದ್ದ.
"ಲೋ ಸಂತಾ, ನಾಚಿಕೆಯಾಗಲ್ವೇನೋ, ಹಾಗೇ ಓಡಿ ಬಂದಿದ್ದಿಯಾ? ಏನಾದ್ರೂ ಹಾಕ್ಕೊಂಡು ಬರಬಾರದಿತ್ತಾ?" ಎಂದು ಸಂತಾನನ್ನು ಬಂತಾ ತರಾಟೆಗೆ ತೆಗೆದುಕೊಂಡ.
ಬಂತಾ ಬೈದಿದ್ದರಿಂದ ನಾಚಿಕೆ ಪಟ್ಟುಕೊಂಡ ಸಂತಾ ಕೂಡಲೆ ವಾಪಸ್ ತೆರಳಿದ. ಸ್ನಾನದ ಮನೆಗೆ ತೆರಳಿದವನೆ ಚಪ್ಪಲಿ ಹಾಕಿಕೊಂಡು ಬಂತಾ ಮುಂದೆ ನಿಂತಿದ್ದ!
***
ಒಂದು ದಿನ ಅದೇನಾಯಿತೋ ಏನೋ, ಬಂತಾ ದರದರನೆ ಮರವೇರಿದ್ದ. ಅದೇ ಮರದಲ್ಲಿ ಕುಳಿತಿದ್ದ ಕೋತಿಯೊಂದಕ್ಕೆ ಅಚ್ಚರಿಯೋ ಅಚ್ಚರಿ. ಸರಿ, ಬಂತಾನ ಜೊತೆ ಮಾತನಾಡೋಣ ಎಂದು ಕೋತಿ ನಿರ್ಧರಿಸಿತು.
ಕೋತಿ : ಹಾಯ್ ಬಂತಾ, ಯಾಕೋ ಮರವೇರಿದೆ?
ಬಂತಾ : ಸೇಬು ಹಣ್ಣು ತಿನ್ನೋಣ ಅಂತ ಬಂದೆ.
ಕೋತಿ : ಲೇ ಕೋತಿ ನನ್ ಮಗನೆ, ಇದು ಮಾವಿನ ಮರ.
ಬಂತಾ : ಲೇ ಕೋತಿ ನನ್ ಮಗನೆ, ಸೇಬು ಜೊತೆಗೇ ತಂದಿದ್ದೇನೆ! [ಸರ್ದಾರ್ಜಿ ಜೋಕ್ಸ್]












Click it and Unblock the Notifications