ಸಖತ್ ರಂಜಿಸುವ ರಜನಿಕಾಂತ್ ಜೋಕುಗಳು
ಪ್ರೊಬ್ಯಾಬ್ಲಿ, ನಗದೆ ಇರುವವರನ್ನು ಕೂಡ ನಗಿಸುವಂಥ ಕೆಪ್ಯಾಸಿಟಿ ಇರುವುದು ರಜನಿಕಾಂತ್ ಜೋಕ್‌ಗಳಿಗೆ ಮಾತ್ರ ಇರಬಹುದು.
ಆ ಜೋಕುಗಳೇ ಹಾಗೆ, ಒನ್ ಲೈನರ್ ಇದ್ರೂ ಕೂಡ ಡಬಲ್ ರಂಜನೆ ಕೊಡುತ್ತವೆ. ಅವುಗಳಲ್ಲಿ ಅಶ್ಲೀಲತೆ ಇರುವುದಿಲ್ಲ, ಸಿಕ್ಕಾಪಟ್ಟೆ ಸೀರಿಯಸ್ ಆಗಿರುವುದಿಲ್ಲ, ಮತ್ತೆ ಮುಖ್ಯವೆಂದರೆ, ಅವು ಉಳಿದ ಜೋಕುಗಳಂತೆ ಇರುವುದೇ ಇಲ್ಲ. ಅದೇ ರಜನಿಕಾಂತ್ ಜೋಕುಗಳ ಸ್ಪೆಷಾಲಿಟಿ.
ಅಂಥ ಕೆಲ ಜೋಕುಗಳನ್ನು ಇಲ್ಲಿ ನೀಡಲಾಗಿದೆ. ಇಷ್ಟವಾದರೆ, ನಕ್ಕು ಮನಸ್ಸು ಹಗುರ ಮಾಡಿಕೊಳ್ಳಿ.
ಜೋಕ್ 1 : ಮುಂದಿನ ವರ್ಷ ಆಪಲ್ ಕಂಪನಿ ರಜನಿಕಾಂತ್ ಸರಣಿಯ ಐಪ್ಯಾಡ್ ಬಿಡುಗಡೆ ಮಾಡುತ್ತಿದೆಯಂತೆ. ಆ ಐಪ್ಯಾಡ್ ವಿಶೇಷತೆಯೇನೆಂದರೆ, ಟಚ್ ಸ್ಕ್ರೀನ್ ನಿಮ್ಮನ್ನೇ ಟಚ್ ಮಾಡುತ್ತದಂತೆ!
ಜೋಕ್ 2 : ರಜನಿಕಾಂತ್ ಯಾವ ಪರಿ ಸ್ಪೀಡಾಗಿ ಓಡ್ತಾರಂದ್ರೆ, ಅವರು ಯಾವತ್ತೂ ನಿನ್ನೆ ಬರ್ತಾರೆ!
ಜೋಕ್ 3 : ಒಂದು ಸತಿ ರಜನಿಕಾಂತ್ ಪರೀಕ್ಷೆಯಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದರು. ಆಗ ಏನಾಯ್ತು ಗೊತ್ತಾ? ಇನ್ನೇನಾಗತ್ತೆ ಟೀಚರೇ ಸಸ್ಪೆಂಡ್ ಆಗಿಬಿಟ್ಟರು!
ಜೋಕ್ 4 : ದಶಕಗಳ ಹಿಂದೆ ರಜನಿಕಾಂತ್ ಕುದುರೆಯಿಲ್ಲದೆ ಕುದುರೆಯಂತೆ ಓಡುವುದು ಹೇಗೆಂದು ಕಂಡುಹಿಡಿದರು. ಅದೇ ಈಗ ಗಂಗ್ನಮ್ ಸ್ಟೈಲ್ ಎಂದು ಖ್ಯಾತಿಯಾಗಿದೆ!
ಜೋಕ್ 5 : ಕೇವಲ ರಜನಿಕಾಂತ್‌ಗೆ ಮಾತ್ರ ಅವರ ಜನಪ್ರಿಯತೆಯ ಗುಟ್ಟು ಗೊತ್ತು. ಆ ಗುಟ್ಟು ಇನ್ನೂ ಗುಟ್ಟಾಗಿಯೇ ಉಳಿದಿದೆ!
ಜೋಕ್ 6 : ಹಲ್ಲು ತೆಗೆಯದೆ ಗಹಗಹಿಸಿ ನಗುವುದು ಇಡೀ ಜಗತ್ತಿನಲ್ಲಿ ರಜನಿಕಾಂತ್ ಅವರಿಗೆ ಮಾತ್ರ! ನಿಮಗೆ ಸಾಧ್ಯವಾ?












Click it and Unblock the Notifications