ಅಲ್ರೀ, ಎರಡರ ವಯಸ್ಸು ಒಂದೇ ಅಲ್ವೆ?

ವೃದ್ಧರೊಬ್ಬರು ಕಾಲು ನೋವಿನಿಂದ ಬಳಲುತ್ತಿರುತ್ತಾರೆ. ಯಾವುದಾವುದೋ ತೈಲಗಳನ್ನು ಹಚ್ಚುತ್ತಿದ್ದರೂ ನೋವು ಕಡಿಮೆಯಾಗಿರುವುದಿಲ್ಲ. ಸರ್ವ ರೀತಿಯಲ್ಲಿ ತಪಾಸಣೆ ಮಾಡಿಸಿ, ನೋವಿಗೆ ನಿಖರವಾದ ಕಾರಣ ತಿಳಿದು, ಸೂಕ್ತವಾದ ಔಷಧಿ ಪಡೆಯೋಣವೆಂದು ವೈದ್ಯರೊಬ್ಬರ ಬಳಿ ಬರುತ್ತಾರೆ.

ಎಲ್ಲ ರೀತಿಯ ತಪಾಸಣೆ ಮಾಡಿದ ಮೇಲೆ, ಯಾವುದೇ ರೀತಿಯ ತೊಂದರೆ ಇರುವುದು ವೈದ್ಯರಿಗೆ ಕಂಡುಬರುವುದಿಲ್ಲ. ವೃದ್ಧರ ಆಗ್ರಹದ ಮೇರೆಗೆ ಮತ್ತು ಅವರ ಮನಸ್ಸಿನ ಸಮಾಧಾನಕ್ಕೆಂದು ಮತ್ತಷ್ಟು ತಪಾಸಣೆ ನಡೆಸಿದರೂ ಅವರಿಗೆ ಅಂತಹ ತೊಂದರೆ ಇರುವುದು ಕಂಡುಬರುವುದಿಲ್ಲ. ವಯಸ್ಸಾಗಿದ್ದರಿಂದ ಸಹಜವಾಗಿ ತೊಂದರೆ ಕಂಡುಬಂದಿರಬಹುದು ಎಂದು ವೈದ್ಯರು ಅಂದುಕೊಳ್ಳುತ್ತಾರೆ.

ವೃದ್ಧರ ಕೈಗೆ ಬಿಲ್ ಇತ್ತು, "ನೋಡಿ ರಾಯರೆ, ನಿಮಗೆ ಸಾಕಷ್ಟು ವಯಸ್ಸಾಗಿದ್ದರಿಂದ ಕಾಲಲ್ಲಿ ನೋವು ಕಂಡುಬಂದಿರಬಹುದು. ನಾನು ಹೆಚ್ಚೇನು ಮಾಡಲಾಗುವುದಿಲ್ಲ" ಎಂದು ವೈದ್ಯರು ನಸುನಗುತ್ತ ಹೇಳಿದರು.

ವೃದ್ಧರು ಮಾತ್ರ ಅಸಮಾಧಾನದಿಂದಲೇ, "ಇದು ಹೇಗೆ ಸಾಧ್ಯ? ನೋವಿದ್ದ ಮೇಲೆ ಏನಾದರೂ ತೊಂದರೆ ಇರಲೇಬೇಕು" ಎಂದು ಹಠ ಹಿಡಿಯುತ್ತಾರೆ.

"ಅಲ್ಲ ಸಾರ್, ಏನು ಹೇಳ್ತಿದ್ದೀರಿ? ಎಕ್ಸಪರ್ಟ್ ನೀವೋ ನಾನೋ ಹೇಳಿ. ವಯಸ್ಸಿನಿಂದ ಅಲ್ಲ ಎಂದು ಹೇಗೆ ಹೇಳ್ತೀರಿ?" ಎಂದು ವೈದ್ಯರು ಮರುಪ್ರಶ್ನೆ ಹಾಕುತ್ತಾರೆ.

"ರೀ ಸ್ವಾಮಿ ವೈದ್ಯರೆ. ನಾನು ಡಾಕ್ಟರ್ ಅಲ್ಲದಿರಬಹುದು. ಆದರೆ, ನೀವು ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಲು ನನಗಾವ ಡಿಗ್ರಿಯೂ ಬೇಕಾಗಿಲ್ಲ. ತಪ್ಪು ನಿಮ್ಮಲ್ಲಿಯೇ ಇದೆ. ಯಾಕೆಂದರೆ, ನನ್ನ ಇನ್ನೊಂದು ಸರಿಯಾಗಿಯೇ ಇದೆಯಲ್ಲ?" ಎಂದು ವೃದ್ಧರು ಪ್ರತಿವಾದವನ್ನು ಮುಂದಿಡುತ್ತಾರೆ.

"ಸೋ ವಾಟ್? ಅದಕ್ಕೂ ಇದಕ್ಕೂ ಏನು ಸಂಬಂಧ? ಒಂದು ಕಾಲು ಸರಿಯಿದ್ದರೆ ಇನ್ನೊಂದು ಸರಿಯಿರಬಾರದಂತೇನೂ ಇಲ್ವಲ್ಲ?" ಎಂದು ಡಾಕ್ಟರ್ ಹೇಳುತ್ತಾರೆ.

"ಒಂದು ಕಡೆ ವಯಸ್ಸಿಂದ ಹೀಗಾಗಿರಬಹುದು ಅಂತೀರಾ? ಮತ್ತೊಂದೆಡೆ ಅದಕ್ಕೂ ಇದಕ್ಕೂ ಏನು ಸಂಬಂಧ ಅಂತೀರಾ? ಅಲ್ರೀ, ಎರಡರ ವಯಸ್ಸು ಒಂದೇ ಅಲ್ವೆ?"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+