ದೀಪಾವಳಿ ಹಬ್ಬದ ಅಟಂ ಬಾಂಬ್ ಏನರ ಅದಾವೇನ!
ಗಂಡ : ಹ್ವಾದ ವರ್ಷದ ದೀಪಾವಳಿ ಹಬ್ಬದ ಅಟಂ ಬಾಂಬ್ ಏನರ ಅದಾವೇನs ಮನ್ಯಾಗ?
ಹೆಂಡತಿ : ಅಯ್ಯ ನಿಮ್ಮ ನಿಮ್ಮ, ಈಗೇನು ಮಾಡತೀರಿ ಶ್ರಾವಣದಾಗ ಅವನ ತಗೊಂಡು?
ಗಂಡ : ಅವನೌನ, ನಿಮ್ಮ ತವರ ಮನೆಯವರು ಕಳಿಸಿದ ಉಂಡಿ, ಚಕ್ಕಲಿ ಒಡ್ಯಾಕ ಬೇಕು.
***
ಗಂಡ ಅಡಿಗೆ ಮನೆಗೆ ಹೋಗಿ, ಹಾಲು ಕಾಯಿಸಿ, ಸಕ್ಕರೆ ಹಾಕಿ ಕುಡಿ ಎಂದು ಹೆಂಡತಿಗೆ ತಂದುಕೊಡುತ್ತಾನೆ.
ಹೆಂಡತಿಗೆ ಪರಮಾಶ್ಚರ್ಯ! ಯಾವತ್ತೂ ಅಡಿಗೆ ಮನೆಗೆ ಹೋಗಿ ಕೆಲಸ ಮಾಡದ ಗಂಡ ಇವತ್ತು ಹಾಲು ಕಾಯಿಸಿ ಕೊಡ್ತಿದ್ದಾರಲ್ಲ ಅಂತ.
"ಏನ್ರಿ ಇವತ್ತು ಇಷ್ಟೊಂದು ಒಳ್ಳೇ ಬುದ್ಧಿ ಬಂದಿದೆ ನಿಮಗೆ" ಎಂದು ಹೆಂಡತಿ ಗಂಡನನ್ನು ಕೇಳುತ್ತಾಳೆ.
"ಏನಿಲ್ಲ, ಇವತ್ತು ನಾಗರಪಂಚಮಿ. ನಾಗರಪಂಚಮಿ ದಿವಸ ಹಾವಿಗೆ ಹಾಲೆರೆದರೆ ಒಳ್ಳೆಯದು ಅಂತ ನಮ್ಮಮ್ಮ ಹೇಳ್ತಿದ್ದರು. ನಾನು ಹುತ್ತದ ಹತ್ತಿರ ಹೋಗಿ ಹಾಲೆರೆಯೋದಕ್ಕೆ ಟೈಮಿಲ್ಲ. ಆಫೀಸಿಗೆ ಲೇಟಾಗುತ್ತೆ. ಅದಕ್ಕೇ ಇಲ್ಲೇ ನಿನಗೆ ಕೊಟ್ಟೆ ಅಷ್ಟೆ" ಅಂದ.












Click it and Unblock the Notifications