ತೋರಿಸುತ್ತಿದ್ದುದು ನೈಂಟೀನ್, ಆಕೆ ಇದ್ದದ್ದು ನೈಂಟಿ!

ಗುಂಡ ಮತ್ತು ಆತನ ಹೆಂಡತಿ ಗುಂಡಿಯಿಬ್ಬರೂ ಒಂದು ಸಂಜೆ ಎಂಜಿ ರಸ್ತೆಯಲ್ಲಿ ಅಡ್ಡಾಡಲು ಬಂದಿರುತ್ತಾರೆ. ನಮ್ಮ ಮೆಟ್ರೋದಲ್ಲಿ ಅಡ್ಡಾಡಿ ಬಂದ ನಂತರ ಬಾರ್ಟನ್ ಸೆಂಟರಲ್ಲಿ ಗಂಟು ಬಿದ್ದು ಪಾಪ್‌ಕಾರ್ನ್ ಮತ್ತು ಐಸ್ ಕ್ರೀಂ ಕೊಡಿಸಿಕೊಂಡ ಗುಂಡಿಯ ಕಣ್ಣಿಗೆ ತೂಕ ತೋರಿಸುವ ಯಂತ್ರವೊಂದು ಕಣ್ಣಿಗೆ ಬೀಳುತ್ತದೆ. ತೂಕದ ಜೊತೆಗೆ ಅದು ನಿಮ್ಮ ವ್ಯಕ್ತತ್ವವನ್ನೂ ಸರಿಯಾಗಿ ಬಣ್ಣಿಸುತ್ತದೆ ಎಂಬ ವಾಕ್ಯ ಗುಂಡಿಯನ್ನು ಬಲುವಾಗಿ ಆಕರ್ಷಿಸುತ್ತದೆ.

ರೀ ರೀ ತೂಕ ನೋಡೋಣ್ರೀ ಎಂದು ಗುಂಡಿ ಗುಂಡನಿಗೆ ದುಂಬಾಲು ಬೀಳುತ್ತಾಳೆ. ಗುಂಡಿ ನಿಂತರೆ ಆ ಯಂತ್ರವೇ ಕ್ರಾಶ್ ಆಗಬಹುದು ಎಂದು ಗುಂಡ ಎಷ್ಟು ಹೇಳಿದರೂ ಗುಂಡಿ ಕೇಳುವುದೇ ಇಲ್ಲ. ಗಂಡ ಯಾವತ್ತೂ ತನ್ನ ವ್ಯಕ್ತಿತ್ವವನ್ನು ಬಣ್ಣಿಸಿಲ್ಲ ಆ ಯಂತ್ರದ ಮುಖಾಂತರವಾದರೂ ಅದನ್ನು ತಿಳಿದುಕೊಳ್ಳೋಣ ಎಂಬುದು ಆಕೆಯ ಆಶಯ. ಎಂದಿನಂತೆ ಗುಂಡ ಬಗ್ಗಬೇಕಾಯಿತು.

ಸರಿ ಗುಂಡಿ ನಿಲ್ಲುತ್ತಾಳೆ, ಗುಂಡ ಕಾಯಿನ್ ಹಾಕಿ ರಿಜಲ್ಟಿಗಾಗಿ ಕಾಯುತ್ತಾನೆ. ಯಂತ್ರವೂ ಕ್ರಾಶ್ ಆಗದೆ ಉದ್ದನೆಯ ಕಾಗದದಲ್ಲಿ ತೂಕದ ಜೊತೆಗೆ ಗುಂಡಿಯ ವ್ಯಕ್ತಿತ್ವದ ಗುಣಗಾನವೂ ಬಂದಿರುತ್ತದೆ. ಅದನ್ನು ಓದಿ ಗುಂಡಿಗೆ ಖುಷಿಯೋ ಖುಷಿ. ಯಾಕೆಂದರೆ ಇಪ್ಪತ್ತು ವರ್ಷಗಳ ಮದುವೆಯ ಜೀವನದಲ್ಲಿ ಅಂತಹ ಒಂದೇ ಒಂದು ಹೊಗಳಿಕೆಯನ್ನೂ ಗುಂಡ ಆಕೆಗೆ ಹೇಳಿರುವುದಿಲ್ಲ.

ಗುಂಡಿ ಅದನ್ನು ಜೋರಾಗಿ ಓದಲು ಶುರು ಮಾಡುತ್ತಾಳೆ. ಅದರಲ್ಲಿ ಹೀಗಿರುತ್ತದೆ, "ನೀವು ಸ್ಫೂರ್ತಿಯ ಚಿಲುಮೆ, ಕೊಡುಗೈ ದಾನಿ, ಮಾನವೀಯತೆಯ ಸಾಕಾರಮೂರ್ತಿ, ಮಹಾ ಬುದ್ಧಿವಂತೆ ಮತ್ತು ಹಾಸಿಗೆಯಲ್ಲಿ ನಿಮಗಿಂತ ಅದ್ಭುತ ಸುಖ ನೀಡುವವರು ಯಾರೂ ಇಲ್ಲ." ಕಡೆಯದನ್ನು ಓದಿ ಗುಂಡಿ ವಿಪರೀತ ನಾಚಿಕೆಯಿಂದ ತಲೆ ತಗ್ಗಿಸಿಬಿಡುತ್ತಾಳೆ. ಮುಂದಿನ ವಿವರಣೆಯನ್ನು ಓದುವುದೇ ಇಲ್ಲ.

ಲೋಕದ ಅರಿವನ್ನೇ ಮರೆತವಳಂತೆ ವರ್ತಿಸುತ್ತಿದ್ದ ಗುಂಡಿಯನ್ನು ಗುಂಡನೇ ಎಚ್ಚರಿಸುತ್ತಾನೆ, "ಲೇ, ಗುಂಡಿ ನೋಡಲ್ಲಿ, ತೂಕವೂ ತಪ್ಪಾಗಿ ನಮೂದಾಗಿದೆ!" ಅದು ತೋರಿಸುತ್ತಿದ್ದುದು ನೈಂಟೀನ್. ಆದರೆ ಆಕೆ ಇದ್ದದ್ದು ನೈಂಟಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+