ಇಂಗ್ಲಿಷ್ ಸಿನ್ಮಾ ಕನ್ನಡೀಕರಣ ಮಾಡಿದ್ರ ಹೆಂಗಿರ್ತೈತಿ

ಹೊಟ್ಟಿ ಹಿಡಕೊಳ್ಳೋ ಹಂಗ ನಕ್ಕು ನಕ್ಕು ಭಾಳ ದಿನಾ ಆಗಿತ್ತಂದ್ರ ಇಲ್ಲೊಂದಿಷ್ಟು ಮಸ್ತ ಸರಕು ಐತಿ ನೋಡ್ರಿ. ನೀವು ಏನ ಅನ್ರಿ ಧಾರವಾಡದ ಭಾಷಾನ ಭಾಷಾ. ಅದನ್ನ ನಮ್ಮ ಬೆಂಗಳೂರು ಸಿನೆಮಾ ಮಂದಿ ನಗೆಪಾಟಲು ಮಾಡ್ಯಾರ ಆ ಮಾತು ಬ್ಯಾರೆ. ಆದರೆ, ಆ ಮಾತನ್ನ ಕೇಳ್ಕೋತ ಇದ್ರ, ಅದರ ಮಜಾನ ಬ್ಯಾರೆ ಇರ್ತೈತಿ.

ಅನ್ನಂಗ, ನೀವು ಇಂಗ್ಲಿಷ್ ಪಿಚ್ಚರ್ ನೋಡ್ತೀರೇನು? ನೋಡೇ ನೋಡಿರ್ತೀರಿ ಸುಳ್ಳ ಹೇಳಬ್ಯಾಡ್ರಿ. ಇಲ್ಲೊಂದಿಷ್ಟು ಇಂಗ್ಲಿಷ್ ಪಿಚ್ಚರ್ ಹೆಸರನ್ನ ಧಾರವಾಡ ಕನ್ನಡ ಭಾಷಾಕ್ಕ ಭಾಷಾಂತರ ಮಾಡಿದ್ರ ಹೆಂಗಿರ್ತೈತಿ ನೋಡ್ರಿ. ಆದರ ಒಂದು ಮಾತು... ನಗಲಿಕ್ಕೆ ರೆಡಿ ಆಗಿ ಓದಲಿಕ್ಕೆ ಶುರು ಮಾಡ್ರಿ. ಮುಖಾ ಗಂಟು ಹಾಕಿಕೊಂಡು ಓದಿ, ನಗು ಬರಲಿಲ್ಲಂದ್ರ ಅದಕ್ಕ ಜವಾಬ್ದಾರಿ ನಿಮ್ಮದ ಮತ್ತ.

ಇವನ್ನ ವಿಜಾಪುರ ಕನ್ನಡ, ಮೈಸೂರು ಕನ್ನಡ, ದಾವಣಗೆರೆ ಕನ್ನಡ, ಮಂಗಳೂರು ಕನ್ನಡ, ಶಿವಮೊಗ್ಗ ಕನ್ನಡ, ಮಂಡ್ಯ ಕನ್ನಡ, ಬಳ್ಳಾರಿ ಕನ್ನಡ, ಬೀದರ ಕನ್ನಡ, ರಾಯಚೂರ ಕನ್ನಡಕ್ಕೂ ಬದಲಾಯಿಸಿಕೊಂಡು ಓದಿ ನೋಡಿ. ಅನ್ನಂಗ ಇವು ಬಂದಿದ್ದು ವಾಟ್ಯಾಪ್‌ನ್ಯಾಗ. ಯಾರು ಯಾರಿಗೆ ಕಳಿಸಿದ್ದೋ ಏನೋ?

ಇನ್ನೊಂದು ಎಚ್ಚರದ ಮಾತು, ಅವರಿವರ ಜೋಡಿ ಮಾತಾಡಕೋತ, ಚೂಡಾ ತಿನ್ನಕೋತ, ಚಹಾ ಹೀರಿಕೋತ ಎಲ್ಯರ ಇವನ್ನ ಓದೀರಿ ಮತ್ತ, ಗಂಟಲಿಗೆಲ್ಯರ ಹತ್ತೀತು!

HOLLOW MAN
ತೂತ್ ಮನಷಾ

DIE ANOTHER DAY
ಇನ್ನೊಂದ್ ದಿನಾ ಶಟದ್ ಹೊಗ್ಲೆ!

GONE WITH THE WIND
ಘಾಳ್ಯಾಗ್ ಗೆವ್ವ್ ಅಂತ ಹೋತು

SUPERMAN
ಅಗದೀ ಮಸ್ತ್ ಮನಷ್ಯಾ

SCORPION KING
ಹಾವು ಚೋಳ ರಾಜ್ಯಾ

THE MUMMY
ಅವ್ವಾ!!!

THE MUMMY RETURNS
ಅವ್ವಾ ವಾಪಸ್ ಬಂದ್ಲು

MISSION IMPOSSIBLE
ಆಗಂಗಿಲ್ಲ

MISSION IMPOSSIBLE II
ಹೊಯ್ಕೊಂಡ್ರೂ ಆಗಂಗಿಲ್ಲಾ

MISSION IMPOSSIBLE III
ಲಬೋ ಲಬೋ ಹೊಯ್ಕೊಂಡ್ರೂ ಆಗಂಗಿಲ್ಲಾ

IRON MAN
ಇಸ್ತ್ರೀ ಮಾಮಾ

THE GOD Father
ದೇವರ ಪಪ್ಪಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+