ರೋಗಿಗೆ ವೈದ್ಯ ಹೇಳಿದ ಗುಡ್ ಬ್ಯಾಡ್ ನ್ಯೂಸ್!
ಒಬ್ಬ ರೋಗಿಯನ್ನು ಪರೀಕ್ಷೆಗೆ ಗುರಿಮಾಡಿ ರಿಪೋರ್ಟ್ ತೆಗೆದುಕೊಂಡು ಬಂದ ವೈದ್ಯ ವಿಚಿತ್ರ ಮನಸ್ಥಿತಿಯಲ್ಲಿದ್ದ. ಸಂತೋಷ ಮತ್ತು ದುಃಖಗಳು ಎರಡೂ ಒಂದೇ ಬಾರಿಗೆ ಆದಂತಿತ್ತು ಆತನ ಮುಖ. ಹಾಗೆಯೆ, ಇದನ್ನು ರೋಗಿಗೆ ತಿಳಿಸುವುದಾದರೂ ಹೇಗೆ ಎಂಬ ದ್ವಂದ್ವದಲ್ಲಿದ್ದ. ಕಡೆಗೆ ಬೇರೆ ದಾರಿಯೇ ಇಲ್ಲದೆ ರೋಗಿಗೆ ಆ ಸುಖದುಃಖದ ವಿಷಯ ತಿಳಿಸಲು ಮುಂತಾದ.
ವೈದ್ಯ : ನೋಡಪ್ಪ ನಿನ್ನ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಸಂಗತಿಗಳಿವೆ. ಒಂದು ಖುಷಿಯದ್ದು ಮತ್ತೊಂದು ಆ ಖುಷಿಯನ್ನು ಕಿತ್ತುಕೊಳ್ಳುವಂಥದ್ದು. ಯಾವುದು ಮೊದಲು ಹೇಳಲಿ ಹೇಳು.
ರೋಗಿ : ಹೌದಾ ಡಾಕ್ಟ್ರೆ. ಮೊದಲು ಸಂತೋಷದ ವಿಷಯವೇ ಹೇಳಿ, ನಂತರ ದುಃಖದ ವಿಷಯ ಹೇಳಿವಿರಂತೆ.
ವೈದ್ಯ : ಒಂದು ಮಾರಣಾಂತಿಕ ಕಾಯಿಲೆ ಪತ್ತೆ ಮಾಡಿದ್ದೇವೆ ಮತ್ತು ವಾಸಿ ಮಾಡಲೂ ಸಾಧ್ಯವಾಗದ ರೋಗಕ್ಕೆ ನಿನ್ನದೇ ಹೆಸರು ಇಟ್ಟಿದ್ದೇವೆ.
ರೋಗಿ : ಥ್ಯಾಂಕ್ಸ್ ಡಾಕ್ಟ್ರೆ. ನನ್ನ ಹೆಸರನ್ನು ಜಗದ್ವಿಖ್ಯಾತ ಮಾಡಿಬಿಟ್ರಲ್ಲ. ಈಗ ಬ್ಯಾಡ್ ನ್ಯೂಸ್ ಏನು? ಅದನ್ನೂ ಹೇಳಿಬಿಡಿ.
ವೈದ್ಯ : ಮತ್ತೇನಿಲ್ಲ, ಚಿಕಿತ್ಸೆ ಮಾಡಲೂ ಅಸಾಧ್ಯವಾದ, ಮಾರಣಾಂತಿಕ ರೋಗ ನಿನಗೇ ಬಂದಿದೆ!












Click it and Unblock the Notifications