ಆ ರಾತ್ರಿ ಬಾಯ್ ಫ್ರೆಂಡ್ ಏನ್ಮಾಡಿದ ಗೊತ್ತಾ?

ಗಳಸ್ಯ ಕಂಠಸ್ಯ ಎಂಬಂತಿದ್ದ ಗೆಳತಿಯರಾದ ಸಿಲ್ಲಿ ಮತ್ತು ಲಲ್ಲಿ ಇಬ್ಬರೂ ತಾವಿರುವ ಹಾಸ್ಟೆಲ್ ರೂಮಿನಲ್ಲಿ ಮಾತನಾಡುತ್ತ ಕುಳಿತಿದ್ದರು. ಆಗ ಸಿಲ್ಲಿ ತನ್ನ ಇನಿಯನ ಬಗ್ಗೆ ಮಾತುಕತೆ ತೆಗೆದಳು.

ಸಿಲ್ಲಿ : ಗೊತ್ತೇನೆ ಲಲ್ಲಿ, ನನ್ನ ಬಾಯ್ ಫ್ರೆಂಡ್ ಪಲ್ಲಿ ಎಂಥೋನು ಗೊತ್ತಾ?

ಲಲ್ಲಿ : ಯಾಕೇ ಏನಾಯ್ತು, ಏನ್ಮಾಡಿದ ನಿನ್ನ ಬಾಯ್ ಫ್ರೆಂಡ್?

ಸಿಲ್ಲಿ : ಅವತ್ತೊಂದು ದಿನ ಆತ ಒಬ್ಬನೇ ಇರುವುದನ್ನು ನೋಡಿಕೊಂಡು ಆತನ ಮನೆಗೆ ಹೋಗಿದ್ದೆ. ಧೋಧೋ ಮಳೆ ಸುರಿಯುತ್ತಿದ್ದರಿಂದ ರಾತ್ರಿ ಕಳೆಯಬೇಕಾಗಿ ಬಂದಿತು.

ಲಲ್ಲಿ : ಮೈ ಗಾಡ್. ಯಾರೂ ಇಲ್ಲದಾಗ ಒಂದೇ ರೂಮಿನಲ್ಲಿ, ಧೋಧೋ ಸುರಿಯುವ ಮಳೆಯಲ್ಲಿ, ಅದೂ ರಾತ್ರಿ ಕಳೆಯಲು ಇಬ್ಬರೂ ನಿರ್ಧರಿಸಿದಿರಾ? ಮುಂದೇನಾಯ್ತು ಹೇಳೆ...

ಸಿಲ್ಲಿ : ತುಂಬಾ ಎಕ್ಸೈಟ್ ಆಗಬೇಡ ತಡಿಯೆ. ರಾತ್ರಿ ಆತನ ಹಾಸಿಗೆಯ ಮೇಲೆ ಪಕ್ಕದಲ್ಲೇ ಕುಳಿತಿದ್ದೆ. ಆಗ ಸಮಯ ಹನ್ನೊಂದಿರಬಹುದು. ಅಷ್ಟರಲ್ಲಿ ಫ್ಯೂಸ್ ಹೋಗಿ ಲೈಟ್ ಆಫ್ ಆಗಿಬಿಟ್ಟಿತು...

ಲಲ್ಲಿ : ಥತ್ ನನಗೂ ಅಂಥಾ ಬಾಯ್ ಫ್ರೆಂಡ್, ಅಂಥಾ ಚಾನ್ಸ್ ಸಿಗಬಾರದಿತ್ತಾ... ಮುಂದೇನಾಯ್ತು... ತಡಕೊಳ್ಳೋಕೇ ಆಗ್ತಿಲ್ಲ... (ಅಂತ ಕಾಲುಗಳೆರಡರ ಮಧ್ಯೆ ಎರಡೂ ಕೈ ಹುದುಗಿಸಿ ಕೇಳಿದಳು.)

ಸಿಲ್ಲಿ : ಬೇಕಾದ್ರೆ ಅವನನ್ನ ನೀನೇ ಇಟ್ಕೊ. ಏನ್ಮಾಡಿದ ಗೊತ್ತಾ? ಚಟಕ್ಕನೆ ಎದ್ದು ಹೋಗಿ ಬೇರೆ ಫ್ಯೂಸ್ ಹಾಕಿ ಕರೆಂಟ್ ಬರೋ ಹಾಗೆ ಮಾಡಿದ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+