ಪ್ರತಿದಿನ ಗುಡೀಗಾ? ಯಾಕೆ? ಅದೂ ಬೆಳಿಗ್ಗೆ ಸಂಜೆ?

ಪ್ರೇಮಿಗಳಿಬ್ಬರೂ ಕಬ್ಬನ್ ಪಾರ್ಕ್ ನಲ್ಲಿರುವ ಆಲದ ಮರದ ಕೆಳಗೆ ಇರುವ ಬೆಂಚಿನ ಮೇಲೆ ಕುಳಿತು, ಕೈಯಲ್ಲಿ ಕೈಯನ್ನು ಹಿಡಿದುಕೊಂಡು ಮಾತನಾಡುತ್ತಿರುತ್ತಾರೆ. ಯುವಕನ ಹೆಗಲ ಮೇಲೆ ತಲೆಯನ್ನಿಟ್ಟು ಯುವತಿ ಮಾತಿಗೆ ಶುರು ಹಚ್ಚಿಕೊಳ್ಳುತ್ತಾಳೆ.

ಯುವತಿ : ಈ ವಾರ ಪೂರ್ತಿ ಪ್ರತಿದಿನ ಎರಡೆರಡು ಸಿನೆಮಾ ನೋಡೋಣ. ಏನಂತೀಯಾ? ಅದರ ಮುಂದಿನ ವಾರ ಪ್ರತಿದಿನ ಸಂಜೆ ಶಾಪಿಂಗ್ ಹೋಗೋಣ, ಏನಂತೀಯಾ?

ಯುವಕ : ಓಕೆ ಡಾರ್ಲಿಂಗ್. ಅದರ ಮುಂದಿನ ವಾರ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಇಲ್ಲೇ ಹತ್ತಿರದಲ್ಲಿದೆಯಲ್ಲ ಗುಡಿಗೆ ಹೋಗೋಣ. ಏನಂತೀಯಾ?

ಯುವತಿ : ಗುಡೀಗಾ? ಯಾಕೆ? ಅದೂ ಪ್ರತಿದಿನ? ಇಬ್ಬರಿಗೂ ಬೇಗನೆ ಮದುವೆ ಆಗಲಿ ಅಂತ ಬೇಡಿಕೊಳ್ಳುವುದಕ್ಕಾ?

ಯುವಕ : ಅಲ್ಲ, ಭಿಕ್ಷೆ ಬೇಡೋದಕ್ಕೆ!

***
ಪುಟ್ಟನಿಗೆ ವಿಚಿತ್ರವಾದ ಪ್ರಶ್ನೆಯೊಂದು ಕಾಡಲು ಶುರು ಮಾಡುತ್ತದೆ. ಅಮ್ಮನ ಬಳಿಗೆ ಬಂದು ಕೇಳೇಬಿಡುತ್ತಾನೆ.

ಪುಟ್ಟ : ಅಮ್ಮ ಅಮ್ಮ, ನಿನ್ನ ತಲೆಯಲ್ಲಿ ಬಿಳಿ ಕೂದಲು ಯಾಕೆ ಆಗುತ್ತಿದೆ?

ಈ ಪ್ರಶ್ನೆ ಕೇಳಿ ಕ್ಷಣ ಏನು ಹೇಳಬೇಕೆಂದು ಅಮ್ಮನಿಗೆ ತಿಳಿಯದಿದ್ದರೂ, ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಆತನ ತುಂಟತನ ನಿಯಂತ್ರಣದಲ್ಲಿ ಇಡಬೇಕೆಂದು ಒಂದು ನಿರ್ಧಾರಕ್ಕೆ ಬಂದಳು.

ಅಮ್ಮ : ಇನ್ನೇನೋ ಮತ್ತೆ. ನೀನು ಮಾಡೋ ತುಂಟತನ ನೋಡಿ ನೋಡಿ, ಬೇಜಾರಾಗಿ, ಚಿಂತೆ ಜಾಸ್ತಿಯಾಗಿ, ತಲೆಯಲ್ಲಿನ ಕೂದಲೆಲ್ಲ ಬಿಳಿಯಾಗಲು ಪ್ರಾರಂಭಿಸಿವೆ.

ಪುಟ್ಟ : ಓಹೋ ಹಾಗಾ.

ಅಮ್ಮ : ಈಗಲಾದರೂ ಗೊತ್ತಾಯ್ತಲ್ಲ? ಅಮ್ಮನ ತಲೆಗೂದಲು ಬಿಳಿಯಾಗಬಾರದಿದ್ದರೆ ನೀನು ತುಂಟತನ ನಿಲ್ಲಿಸಲೇಬೇಕು, ಗೊತ್ತಾಯ್ತಾ?

ಪುಟ್ಟ : ಹೀಗೋ ಸಮಾಚಾರ, ನಿಮ್ಮಮ್ಮ ಅಂದ್ರೆ ಅಜ್ಜಿ ತಲೆ ತುಂಬ ಬಿಳಿ ಕೂದಲು ಯಾಕಾಗಿದೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿತು ಬಿಡು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+